ಮಳೆಯಿಂದ ಉಂಟಾಗುವ ಕಾಯಿಲೆಗಳಿಂದ ಮುಕ್ತರಾಗಲು ಇಲ್ಲಿದೆ ಸುಲಭ ಟಿಪ್ಸ್..!

0
119

ಮುಂಗಾರಿನ ಆಗಮನವಾಗುತ್ತಿದ್ದಂತೆ, ಕಾಯಿಲೆಗಳ ಗಮನ ಕೂಡ ಆಗಿದೆ ಎಂದೇ ಹೇಳಬಹುದು. ರಾಜ್ಯದಲ್ಲಿ ಭಾರಿ ಮಳೆ ಆವರಿಸುತ್ತಿರುವ ಕಾರಣ ಹಲವು ರೋಗಗಳು ಹರಡುತ್ತಿದ್ದು,ಪ್ರತಿಯೊಬ್ಬರೂ ಇದರಿಂದ ಎಚ್ಚರ ವಹಿಸಬೇಕಾಗಿದೆ. ಮಳೆಯಲ್ಲಿ ನೆನೆದರೆ ಶೀತ,ಕೆಮ್ಮು, ನೆಗಡಿ ಜ್ವರ ಇಂಥ ಹಲವು ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಆದರೆ ಮಳೆಯಿಂದ ತೀರಾ ಪರಿಣಾಮಕಾರಿಯಾಗಿ ಕಾಡುವ ಸಮಸ್ಯೆಯೆಂದರೆ ಮಲೇರಿಯಾ, ಕಾಲರಾ, ಟೈಫೈಡ್, ಜಾಂಡೀಸ್ ಈ ರೀತಿಯ ಕಾಯಿಲೆಗಳಿಂದ ಭಾರಿ ಎಚ್ಚರ ವಹಿಸಬೇಕಾಗಿದೆ. ವೈರಲ್ ಜ್ವರ ಕಾಣಿಸಿಕೊಂಡರೆ, ನೀವು ಆಸ್ಪತ್ರೆಗೆ ಹೋಗಬೇಕಾಗಿಲ್ಲಾ.! ಅದರ ಬದಲು ಮನೆಯಲ್ಲೇ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬಹುದಾಗಿದೆ.

ಮನೆಯಲ್ಲಿ ಸುಲಭವಾಗಿ ಸಿಗುವ ಔಷಧಗಳನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮನೆಯಲ್ಲಿ ಸುಲಭವಾಗಿ ಪಡೆಯಬಹುದಾದ ಮನೆ ಮದ್ದು ಇಲ್ಲಿದೆ ಅನುಸರಿಸಿ,

೧.ಪುದೀನಾ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಅದಕ್ಕೆ ನಿಂಬೆರಸ, ಸ್ವಲ್ಪ ಜೇನುತುಪ್ಪ ಹಾಗೂ ಒಂದು ಚೂರು ಶುಂಠಿಯನ್ನು ಹಾಕಿ ಕಷಾಯ ಮಾಡಿ ಕುಡಿಯುವುದರಿಂದ ವೈರಲ್ ಜ್ವರ ಶೀಘ್ರದಲ್ಲೇ ಕಡಿಮೆಯಾಗುತ್ತದೆ.
೨.ಬಿಸಿನೀರಿನ ಹಬೆಯನ್ನು ಹೆಚ್ಚು ತೆಗೆದುಕೊಳ್ಳುವುದರಿಂದ ಶೀತ, ಕೆಮ್ಮು ಬೇಗನೆ ನಿಯಂತ್ರಣವಾಗುತ್ತದೆ.
೩.ಜೇನುತುಪ್ಪ ಹಾಗೂ ನಿಂಬೆ ಹಣ್ಣಿನ ರಸವನ್ನು ಬೆಚ್ಚಗಿನ ನೀರಿಗೆ ಹಾಕಿ ಸೇವಿಸುವುದರಿಂದ ಶೀತ, ನೆಗಡಿ, ದಮ್ಮು ಸುಲಭವಾಗಿ ಮಾಯವಾಗುತ್ತದೆ.
೪.ನಿಮ್ಮ ಪಾದಗಳನ್ನು ಬಿಸಿನೀರಿನಲ್ಲಿ ಹದಿನೈದು ನಿಮಿಷಗಳವರೆಗೆ ಮುಳುಗಿಸಿ ಇಡುವುದರಿಂದ ಶೀತ, ನೆಗಡಿ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here