ಭಯ ಆದ್ರೆ ಪರವಾಗಿಲ್ಲ ಹೃದಯ ಬಡಿತ ಜಾಸ್ತಿ ಆದ್ರೆ ಎಚ್ಚರ..!

0
274

ಮಾನವ ಅರಣ್ಯಗಳಿಂದ ನಾಗರಿಕತೆಯತ್ತ ಸಾಗಿ ಬಮದ ಮೇಲೆ ಆತನಿಗೆ ಅರಣ್ಯದಲ್ಲಿನ ಬದುಕು ಸಂಪೂರ್ಣವಾಗಿ ಮರೆತುಹೋಗಿದೆ. ಇದು ಆತನನ್ನು ನಾಗರಿಕತೆಯತ್ತ ತಂದಿದ್ದರೂ ಇಲ್ಲಿ ಅವನಿಗೆ ಗೊತ್ತಿಲ್ಲದೆ ಒಂದಿಲ್ಲೊಂದು ಭಯ ಅವನಲ್ಲಿ ಉಳಿದುಹೋಗಿದೆ.

ಎಲ್ಲ ವಯಸ್ಸಿನವರಿಗೂ ಬೇರೆ ಬೇರಿ ರೀತಿಯ ವಿಷಯದ ಬಗ್ಗೆ ಭಯ ಕಾಡುತ್ತದೆ. ನನಗೆ ಯಾವುದರ ಬಗ್ಗೆಯೂ ಭಯ ಇಲ್ಲ ಎಂದು ಹೇಳುವವರು ವಿರಳ. ಭಯ ಹೆದರಿಸುತ್ತದೆ ನಿಜ ಆದರೆ ಈ ಭಯ ದೇಹದಲ್ಲಿ ಪರಿಣಾಮ ಬೀರಲು ಶುರುಮಾಡಿದ್ರೆ ಅದು ಫೋಬಿಯಾ ಅನ್ನಬೇಕು. ಇದು ದಿನನಿತ್ಯದ ಕ್ರಿಯಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದರೆ ಇದಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತ.

ಯಾವುದಾದರು ವಸ್ತು ಅಥವಾ ಸನ್ನಿವೇಶದ ಅಸಹಜ, ಅರ್ಥಹೀನ ಅತಿರೇಕದ ಭಯ ಎನ್ನುವುದು ಫೋಬಿಯಾದ ಗುಣಧರ್ಮ. ಫೋಬಿಯಾ ಎಂದರೆ ಅದು ಒಂದು ರೀತಿಯ ಮಾನಸಿಕ ಅಸಮತೋಲನ, ಪೋಬಿಯಾದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು ಇಲ್ಲದ ರೋಗಗಳಿಗೆ ತಮ್ಮನ್ನು ತಾವೇ ಒಳಗಾದಂತೆ. ಕೆಲವು ಘಟನೆಗಳು ಅಪಾಯದ ಸುಳಿಗೆ ತಳ್ಳಿ ಪ್ರಾಣಕ್ಕೂ ಸಂಚಕಾರ ತಂದೆ ಆಶ್ಚರ್ಯವಿಲ್ಲ ಎನ್ನಬಹುದು.

ಮುಖ್ಯವಾಗಿ ಕೆಲವು ವಿಷಯಗಳ ಭಯ ಇರುತ್ತದೆ, ಎತ್ತರದಲ್ಲಿದ್ದಾಗ ಮುಚ್ಚಿದ ಸ್ಥಳದಲ್ಲಿದ್ದಾಗ ತೀವ್ರ ಆತಂಕ ಎದುರಿಸುತ್ತಾರೆ. ಇನ್ನು ಕೆಲ ಜನರು ಭಾರೀ ಜನಸ್ತೋಮದ ಮಧ್ಯೆ ಇದ್ದಾಗ ಅಥವಾ ಅಪರಿಚಿತರ ಸ್ಪರ್ಶಕ್ಕೆ ಭಯಗೊಳ್ಳುತ್ತಾರೆ. ಯಾರಾದರೂ ಜೋರಾಗಿ ಕೂಗು ಹಾಕಿದ್ರೆ, ಪಕ್ಕದಲ್ಲೇ ಯಾರಾದರೂ ಸುಲಿದಾಡಿದ್ರೆ ಆಘಾತಕ್ಕೆ ಒಳಗಾದವರಂತೆ ಬೆವರುವುದು, ನಾಚುವುದು, ಅಳುವುದು ಮಾಡುತ್ತಾರೆ. ಇಂಥವರ ಮೇಲೆ ಯಾರಾದರೂ ಬಲವಾಗಿ ಜೋರಾಗಿ ಒತ್ತಡ ಅಥವಾ ಅಭಿಪ್ರಾಯ ಹೇರಲು ಹೋದರೆ ಅವರ ಪ್ರತಿರೋಧ ಶಕ್ತಿ ಕಡಿಮೆಯಾಗಿ ದುರ್ಬಲರಾಗುತ್ತಾರೆ.

ಫೋಬಿಯಾ ಉಂಟಾದಾಗ ಬೆವರುತ್ತಾರೆ, ಅಸ್ವಾಭಾವಿಕ ಉಸಿರಾಟ, ಹೃದಯ ಬಡಿತ ಹೆಚ್ಚಾಗುತ್ತದೆ. ತುಟಿಗಳು ಒಣಗುತ್ತವೆ, ಗೊಂದಲದ ನಡವಳಿಕೆ ಕಾಣಿಸಿಕೊಳ್ಳುವುದು ಮುಖ್ಯ ಲಕ್ಷಣಗಳಾಗಿರುತ್ತದೆ. ಸರಿಯಾದ ಸಮಯದಲ್ಲಿ ಅವರಿಗೆ ಚಿಕಿತ್ಸೆ ನೀಡದೇಇದ್ದರೆ ಅಪಾಯವೂ ಇದೆ. ಫೋಬಿಯಾ ಎಂದು ಪರಿಗಣಿಸಲು ವ್ಯಕ್ತಿಗೆ ಎತ್ತರದ ಸ್ಥಳಗಳ ಬಗ್ಗೆ ಭಯ ಇರಬೇಕು ಮತ್ತು ಅವರು ಯಾವುದೋ ಒಂದು ವಿಷಯಕ್ಕೆ ನಿಜವಾಗಿಯೂ ಹೆದರುತ್ತಿದ್ದರೆ ಕಾರಣ ಅವರು ಮಗುವಾಗಿರುವಾಗ ಆ ವಿಷಯವಾಗಿ ಭಯಪಟ್ಟಿರುತ್ತಾರೆ ಎನ್ನುವುದು ಸಂಶೋಧನೆಯ ವರದಿ.

Depressed woman pressing her hand against her forehead

ಹಾರಾಟದ ಬಗ್ಗೆ ಭಯ, ಇವರಿಗೆ ವಿಮಾನ ಪ್ರಯಾಣದ ಭಯ ಇರುತ್ತದೆ ಇದನ್ನು ಏರೋ ಫೋಬಿಯಾ ಎಂದು ಹೇಳುತ್ತಾರೆ. ವಾಹನ ಚಾಲನೆ ಬಗ್ಗೆ ಭಯ, ರಕ್ತ, ಗಾಯ, ಇಂಜೆಕ್ಷನ್ ಫೋಬಿಯಾ ಇದ್ದರೆ ಡ್ರೈವಿಂಗ್ ಫೋಬಿಯಾ ಎನ್ನುವುದು ತಜ್ಞರ ಅಭಿಮತ. ಇನ್ನು ನೀರಿನ ಭಯ ಇದ್ದರೆ ಅಕ್ವಾಫೋಬಿಯಾ ಮತ್ತು ಪ್ರಾಣಿಗಳ ಬಗ್ಗೆ ಭಯ ಇದ್ದರೆ ಝೂಫೋಬಿಯಾ ಅಂತ ಗುರುತಿಸಲಾಗುತ್ತದೆ.

LEAVE A REPLY

Please enter your comment!
Please enter your name here