ಬೆಂಡೆಕಾಯಿಯ ಪೋಷಕಾಂಶಗಳು ಹಲವು ರೋಗಗಳಿಗೆ ಮನೆಮದ್ದು .!

0
331

ಬೆಂಡೆಕಾಯಿ ಎಂಬ ತರಕಾರಿಯನ್ನು ಹಲವು ರೀತಿಯ ಜೀವಸತ್ವಗಳ ಆಗಾರ ಎನ್ನಬಹುದು. ಇದರಿಂದ ತಯಾರಿಸುವ ಅಡುಗೆ ಸಹ ಬಹಳ ರುಚಿಯಾಗಿರುತ್ತದೆ. ಇನ್ನು ಕೆಲವರಿಗೆ ಬೆಂಡೆ ಎಂದರೇನೇ ಅಷ್ಟಕಷ್ಟೆ. ಆದರೆ ಈ ತರಕಾರಿಯಿಂದ ಸಿಗುವ ಪ್ರಯೋಜನಗಳು ಮಾತ್ರ ಅಷ್ಟಿಷ್ಟಲ್ಲ. ಇದರಲ್ಲಿ ಅಡಗಿರುವ ಪೋಷಕಾಂಶಗಳು ಹಲವು ರೋಗಗಳಿಗೆ ಮನೆಮದ್ದು.

೧. ಡಯಾಬಿಟಿಸ್‌ಇರುವವರಿಗೆ ಬೆಂಡೆಕಾಯಿ ಸೇವನೆಯು ಉತ್ತಮ ಮದ್ದಾಗಿದೆ. ಬೆಂಡೆಕಾಯಿಯನ್ನು ಕ್ರಮವಾಗಿ ಆಹಾರದಲ್ಲಿ ಬಳಸಿದರೆ ದೇಹಕ್ಕೆ ತಂಪು, ಹೊಟ್ಟೆಯ ಉರಿ, ಗುದದ್ವಾರದ ಉರಿ ಶಾಂತವಾಗುತ್ತದೆ. ಬೆಂಡೆಕಾಯಿ ಮಧುಮೇಹ ಕಾಯಿಲೆಗೆ ಮಾತ್ರವಲ್ಲ ಕಿಡ್ನಿ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಕರುಳಿನಲ್ಲಿ ಆಹಾರ ತಕ್ಷಣ ಜೀರ್ಣವಾಗಿ ಮಲಬದ್ಧತೆ ನಿವಾರಿಸಲು ಬೆಂಡೆಕಾಯಿ ಸಹಕಾರಿ.

೨. ಬೆಂಡೆಕಾಯಿಯನ್ನು ಕತ್ತರಿಸಿ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಹತ್ತಿ ಬಟ್ಟೆಯ ಸಹಾಯದಿಂದ ಆ ನೀರನ್ನು ಮುಖಕ್ಕೆ ಹಚ್ಚಿಕೊಂಡು, ಅದು ಒಣಗಿದ ನಂತರ ಮುಖವನ್ನು ತೊಳೆಯಿರಿ. ಇದರಿಂದ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ. ದೃಷ್ಟಿದೋಷ ನಿವಾರಿಸುವ ಎ ಜೀವಸತ್ವ ಬೆಂಡೆಯಲ್ಲಿದೆ. ಬೆಂಡೆಕಾಯಿ ನಿಮ್ಮ ದೇಹದಲ್ಲಿನ ಇಮ್ಯುನಿಟಿ ಪವರ್ ಹೆಚ್ಚು ಮಾಡುತ್ತದೆ.

೩. ಬೆಂಡೆಕಾಯಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ನಿಮ್ಮ ಊಟದಲ್ಲಿ ಒಕ್ರಾ / ಬೆಂಡೆಕಾಯಿಗಳನ್ನು ಸೇರಿಸುವುದರಿಂದ ಆಸ್ತಮಾವನ್ನು ಸಹ ಕಡಿಮೆ ಮಾಡಬಹುದು. ಎಳೆಯ ಬೆಂಡೆಕಾಯಿಯನ್ನು ಕತ್ತರಿಸಿ ಕಲ್ಲುಸಕ್ಕರೆಯೊಂದಿಗೆ ಸೇವಿಸಿ, ಹಾಲು ಕುಡಿಯಬೇಕು. ಇದರಿಂದ ಲೈಂಗಿಕ ಶಕ್ತಿ ವೃದ್ಧಿಸುತ್ತದೆ. ಇದರಲ್ಲಿರುವ ವಿಟಮಿನ್ ಎ ಚರ್ಮವನ್ನು ಸುಂದರವಾಗಿರಿಸುತ್ತದೆ.ಸುಕ್ಕು,ಮೊಡವೆ ಮುಂತಾದವುಗಳು ಸಂಭವಿಸದಂತೆ ತಡೆಯುತ್ತವೆ.

೪. ಫ್ರೀ ರಾಡಿಕಲ್ಸ್ ಅನ್ನು ಬೆಂಡೆಯಲ್ಲಿರುವ ಉತ್ಕರ್ಷಣ ಅಂಶ ಹಾನಿಗೊಳಗಾದ ಚರ್ಮವನ್ನು ಸರಿದೂಗಿಸಲು ಸಹಕರಿಸುತ್ತದೆ. ಕೀಲುರೋಗ ಮತ್ತು ಸಂಧಿವಾತ ತಡೆಯಲು ಶಕ್ತವಾದ ಮ್ಯಾಂಗನೀಸ್ ಮತ್ತು ಇ ಜೀವಸತ್ವವನ್ನು ಬೆಂಡೆ ಹೊಂದಿದೆ. ಬೆಂಡೆಕಾಯಿ ಸೇವಿಸುತ್ತಿದ್ದಲ್ಲಿ ನಿಮ್ಮ ಚರ್ಮವೂ ಹೆಚ್ಚು ಹೊಳಪಾಗುತ್ತದೆ. ನಿಮಗೆ ಸಿಲ್ಕ್‌ಆ್ಯಂಡ್ ಶೈನ್ ಕೂದಲು ಬೇಕಾದ್ರೆ ನೀರಿನಲ್ಲಿ ಬೆಂಡೆಕಾಯಿ ಹಾಕಿ ಕುದಿಸಿ ಬಳಿಕ ಈ ಲೋಳೆಭರಿತ ನೀರಿನಿಂದ ಕೂದಲನ್ನು ತೊಳೆಯಿರಿ.

೫. ತಲೆ ಚರ್ಮದಲ್ಲಿ ತುರಿಕೆ ಇದ್ರೆ ಅಥವಾ ನಿಮ್ಮ ಕೂದಲು ಡ್ರೈ ಆಗಿದ್ರೆ ಬೆಂಡೆಕಾಯಿ ಬೇಯಿಸಿದ ನೀರಿನಿಂದ ತಲೆಗೆ ಚೆನ್ನಾಗಿ ಮಸಾಜ್ ಮಾಡಿ. ಇದು ನಿಮ್ಮ ತಲೆಯನ್ನ ಮೊಯ್ಶಿರೈಸ್‌ಮಾಡುವುದರಿಂದ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬೆಂಡೆ ಗಿಡದ ಬೇರು ಯಕೃತ್ತಿನ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವ ಗುಣ ಹೊಂದಿದೆ.

೬. ರಸದ ಲೇಪನದಿಂದ ಚರ್ಮದ ತುರಿಕೆ ಗುಣವಾಗಿ ಕಾಂತಿ ಹೆಚ್ಚುತ್ತದೆ. ಹೃದಯದ ರಕ್ತನಾಳಗಳನ್ನು ಬಲಗೊಳಿಸಿ ಪಾರ್ಶ್ವವಾಯು, ಹೃದಯರೋಗಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ ಏರಿಕೆಯನ್ನು ತಡೆಯುತ್ತದೆ.

LEAVE A REPLY

Please enter your comment!
Please enter your name here