‘ತಲೆ ನೋವು’ ಬಂದಾಗ ಈ 8 ಆಹಾರಗಳನ್ನು ತಿನ್ನಬಾರದು! ತಲೆ ನೋವನ್ನು ಹೆಚ್ಚಿಸೋ ಪದಾರ್ಥಗಳು ಇವು

0
587

ನಿಮಗೆ ಆಗಾಗ ತಲೆ ನೋವು ಬರುತ್ತಾ? ಈಗಂತೂ ತಲೆ ನೋವು ಸಾಮಾನ್ಯವಾಗಿಬಿಟ್ಟಿದೆ, ಹಾಗೆ ತಲೆ ನೋವು ಕಾಣಿಸಿಕೊಂಡಾಗ ಈ ಆಹಾರ ಪದಾರ್ಥಗಳನ್ನು ತಿನ್ನಬೇಡಿ ಯಾಕೆಂದರೆ ಈ ಪದಾರ್ಥಗಳು ತಲೆನೋವನ್ನ ಹೆಚ್ಚಿಸುತ್ತವೆ.

ತಲೆ ನೋವನ್ನು ಪ್ರಚೋದಿಸುವ 8 ಆಹಾರಗಳು:

  1. ಚಾಕೊಲೇಟ್:

ಚಾಕೊಲೇಟ್ ಬಾಯಿಗೆ ರುಚಿ ಆದರೆ ತಲೆ ನೋವು‌ ಇರುವವರು ಚಾಕೊಲೇಟ್ ಇಂದ ಸ್ವಲ್ಪ ದೂರ ಇರಿ, ಚಾಕೊಲೇಟ್ ಅಲ್ಲಿರುವ ಸಕ್ಕರೆ ಮತ್ತು ಡಾರ್ಕ್ ಚಾಕೊಲೇಟ್ ಅಂಶ ದೇಹದ ನರಗಳಲ್ಲಿ ಪ್ರಚೋದನೆ ಉಂಟು ಮಾಡಿ ತಲೆ ನೋವಿಗೆ ಎಡೆಮಾಡಿ ಕೊಡುತ್ತದೆ.

  1. ವೈನ್ ಮತ್ತು ಆಲ್ಕೊಹಾಲ್:

ಆಲ್ಕೊಹಾಲ್ ಕುಡಿದ ನಂತರ ಮೆದುಳಿಗೆ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಇದರಿಂದ ಮೆದುಳಿನಲ್ಲಿ ರಕ್ತದೊತ್ತಡ ಜಾಸ್ತಿ ಆಗಿ ತಲೆ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ತಲೆ ನೋವು ಜೋರಾಗಿ ಇರುವಾಗ ಆಲ್ಕೊಹಾಲ್ ಸೇವನೆ ಬೇಡ.

  1. ಕಾಫಿ:

ಅಬ್ಬಾ ತಲೆ ನೋವು ಅಂತ ರಿಲ್ಯಾಕ್ಸ್ ಆಗೋಕೆ ಎಷ್ಟೋ ಜನರು ಕಾಫಿ ಸೇವನೆ ಮಾಡುತ್ತಾರೆ, ಆದರೆ ಅದೇ ಕಾಫಿಯ ‘ಕೆಫೆನ್’ ಅಂಶ ತಲೆ ನೋವಿಗೆ ಕಾರಣಿಭೂತ.

  1. ಚೀಸ್ (ಗಿಣ್ಣು):

ಎಲ್ಲಾ ಚೀಸ್ ಇಂದ ತಲೆ ನೋವು ಜಾಸ್ತಿ ಆಗಲ್ಲ, ಆದರೆ ತುಂಬಾ ದಿನಗಳ ಅಂದರೆ ಹಳೆಯ ಚೀಸ್ ಸೇವನೆ ತಲೆ ನೋವಿಗೆ ಪ್ರಚೋದನಕಾರಿ.

  1. ಸೋಯಾ ಸಾಸ್:

ಈ ಸಾಸ್ ಬರೀ ತಲೆ ನೋವಲ್ಲ ಡಿ ಹೈಡ್ರೆಶನ್ ಗೂ ಕಾರಣ, ಆದರಿಂದ ತಲೆ ನೋವು ಬಂದಾಗ ಈ ಥರದ ಸಾಸ್ ಗಳನ್ನು ಕಮ್ಮಿ ತಿನ್ನಿ.

  1. ಐಸ್ ಕ್ರೀಮ್:

ಇಲ್ಲಿ ತಲೆ ನೋವಿಗೆ ಕಾರಣವಾಗುವುದು ಐಸ್ ಅಷ್ಟೇ ಕ್ರೀಮ್ ಅಲ್ಲ! ಬೇರೆ ಎಲ್ಲಾ ಪದಾರ್ಥಗಳಿಗಿಂತ ಐಸ್ ಕ್ರೀಮ್ ತಿಂದಾಗ ತಲೆ ನೋವು ಜಾಸ್ತಿ ಆಗುತ್ತದೆ. ತಲೆ ನೋವು ಇದ್ದಾಗ ತಂಪಾದ ಪದಾರ್ಥಗಳಿಂದ ದೂರವಿರಿ.

  1. ಬಾಳೆ ಹಣ್ಣು:

ಬಾಳೆ ಹಣ್ಣು ತಲೆ ನೋವಿನ ಪ್ರಚೋದನೆ ಅಷ್ಟಾಗಿ ಇಲ್ಲದಿದ್ದರೂ ವಿಪರೀತ ತಲೆ ನೋವು ಬಂದಾಗ ಜಾಸ್ತಿ ಬಾಳೆ ಹಣ್ಣು ತಿನ್ನುವುದು ಬೇಡವೆ ಬೇಡ. ಆದರಿಂದ ಬಾಳೆ ಹಣ್ಣು ಕೂಡಾ ತಲೆ ನೋವು ಪ್ರಚೋದಕ ಆಹಾರ!.

  1. ಮಾಂಸ ಪದಾರ್ಥ:

ಇದು ಎಲ್ಲರಿಗೂ ಅನ್ವಯ ಆಗಲ್ಲ, ಕೆಲವರಿಗೆ ಮಾಂಸ ತಿಂದರೆ ತಲೆ ನೋವು ಜಾಸ್ತಿ ಆಗುತ್ತದೆ ಕೆಲವರಿಗೆ ಆಗುವುದಿಲ್ಲ, ಇದು ಅವರವರ ವೈಯಕ್ತಿಕ ಸಾಮರ್ಥ್ಯದ ಪ್ರಕಾರ, ನೀಮಗೆ ಅಭ್ಯಾಸವಿದ್ದರೆ ತಲೆ ನೋವು ಬಂದಾಗಲೂ ಮಾಂಸ ತಿನ್ನಬಹುದು.

LEAVE A REPLY

Please enter your comment!
Please enter your name here