ಟೀಂ ಇಂಡಿಯಾ ಈಗಾಗಲೇ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು, ತಂಡದ ಎಲ್ಲ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಆದರೆ ಇತ್ತ ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಯಿಂದ ಬ್ರೇಕ್ ತೆಗೆದುಕೊಂಡಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾರತೀಯ ಸೇನೆಗೆ ಇಂದಿನಿಂದ ಸೇವೆ ಸಲ್ಲಿಸಲಿದ್ದಾರೆ. ಹೌದು, ಲೆಫ್ಟಿನೆಂಟ್ ಕರ್ನಲ್ ಆಗಿ ಕಾಶ್ಮೀರದ ಕಣಿವೆಯಲ್ಲಿ ಗಸ್ತು ಮತ್ತು ಪಹರೆ ಕರ್ತವ್ಯವನ್ನು ನಿಭಾಯಿಸಲು ರೆಡಿಯಾಗಿದ್ದು, ಹದಿನೈದು ದಿನಗಳ ಕಾಲ ನಡೆಯಲಿರುವ ಪಹರೆಯಲ್ಲಿ ಧೋನಿ ಅವರು ವಿಕ್ಟರ್ ಫೋರ್ಸ್ ನ ಭಾಗವಾಗಿ ಕೆಲಸ ನಿರ್ವಹಿಸಲಿದ್ದಾರೆ. ಈಗಾಗಲೇ ಪ್ಯಾರಾ ಟ್ರೂಪ್ ತರಬೇತಿಯನ್ನು ಸಂಪೂರ್ಣವಾಗಿ ಮುಗಿಸಿರುವ ಧೋನಿ, ಗಡಿ ಕಾವಲು ತರಬೇತಿಯನ್ನು ಮುಂದುವರಿಸಲಿದ್ದಾರೆ.
ಧೋನಿ ಅವರು ಭಾರತಿಯ ಒಬ್ಬ ಅದ್ಭುತ ಕ್ರಿಕೆಟ್ ಆಟಗಾರರಲ್ಲದೆ, ಭಾರತೀಯ ಸೇನೆಗೆ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ.! ಅವರ ಅಭಿಮಾನಿಗಳು ಭಾರಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎನ್ನಬಹುದು.