ದಾನ ಮಾಡುವುದರಲ್ಲಿ ಅಪ್ಪ ಮತ್ತು ಅಜ್ಜ ನಂತೆಯೇ .!!

0
323

ಸದ್ಯ ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿ ಹೋಗಿದೆ. ನೆಲ ಹೊಲ ಗದ್ದೆಗಳೆಲ್ಲ ಜಲ ಸಮಾಧಿಯಾಗಿಬಿಟ್ಟಿದೆ! ಸಾವು ಬದುಕಿನ ಮಧ್ಯೆ ಉತ್ತರ ಕರ್ನಾಟಕ ಮಂದಿ ಜೀವನ ಸಾಗಿಸುತ್ತಿದ್ದಾರೆ. ಜಾನುವಾರುಗಳು, ಮೂಕ ಪ್ರಾಣಿಗಳು ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ನೋಡಿದರೆ ಎದೆ ಝಲ್ ಎನ್ನುತ್ತದೆ..

ಮನೆ ಮಠವನ್ನು ಕಳೆದುಕೊಂಡ ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ !
ಸಾಕಷ್ಟು ಜನ ಸಾಮಾನ್ಯರು, ಸಾರ್ವಜನಿಕರು ಉತ್ತರ ಕನ್ನಡ ಮಂದಿಯ ನೆರವಿಗೆ ನಿಂತಿದ್ದಾರೆ. ಅಲ್ಲದೆ ರಾಜ್ಯದ ಅಧ್ಯಾಪಕರೆಲ್ಲ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ! ಜೊತೆಗೆ ಸಿನಿಮಾದ ಸಾಕಷ್ಟು ಕಲಾವಿದರು ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಿ ಮಾನವೀಯತೆ ದೃಷ್ಟಿಯನ್ನು ತೋರಿದ್ದಾರೆ ! ಜೊತೆಗೆ ಸಮಾಜ ಸೇವಕಿ ಸುಧಾ ಮೂರ್ತಿ ಅವರು ಎರಡು ಕೋಟಿ ಸಹಾಯ ಧನ ನೀಡುವ ಮೂಲಕ ನೆರೆ ಸಂತ್ರಸ್ತರಿಗೆ ಕಂಬನಿ ಒರೆಸಲು ಪ್ರಯತ್ನಿಸಿದ್ದಾರೆ !

ಈಗ ನಟ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಸಹಾಯಕ್ಕೆ ನಿಂತಿದ್ದಾರೆ. ನಿಖಿಲ್ ಅವರು ಕೂಡ ದಾನ, ಸಹಾಯ ಮಾಡುವುದರಲ್ಲಿ ಅಪ್ಪ ಮತ್ತು ಅಜ್ಜನ ದಾರಿಯಲ್ಲಿಯೇ ಸಾಗುತ್ತಿದ್ದಾರೆ ! ಕಾರ್ಯಕರ್ತರ ಜೊತೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ನೆರೆಪೀಡಿತ ಪ್ರದೇಶಗಳಿಗೆ (ಧಾರವಾಡ ಬೆಳಗಾವಿ ಯಾದಗಿರಿ) ಭೇಟಿ ನೀಡಿರುವ ನಿಖಿಲ್ , ಕುರುಕ್ಷೇತ್ರ ಚಿತ್ರಕ್ಕೆ ಬಂದ ಸಂಭಾವನೆಯನ್ನು ನೆರೆ ಸಂತ್ರಸ್ತ ಜನರಿಗೆ ಕೊಡುವುದಾಗಿ ಹೇಳಿದ್ದಾರೆ !
ಎಡಗೈಯಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎಂಬಂತೆ ಕುರುಕ್ಷೇತ್ರದಲ್ಲಿ ಎಷ್ಟು ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿಲ್ಲ! ಮತ್ತು ಎಷ್ಟು ಹಣವನ್ನು ಕೊಡುತ್ತಾರೆ ಅದನ್ನು ಸಹಿತ ಹೇಳಿಲ್ಲ !
ಇವೆಲ್ಲ ನೋಡುತ್ತಿದ್ದರೆ ನಿಖಿಲ್ ಕುಮಾರಸ್ವಾಮಿ ಅವರು ಒಳ್ಳೆಯ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ !

LEAVE A REPLY

Please enter your comment!
Please enter your name here