ಯಡಿಯೂರಪ್ಪನವರ `ಪರ್ಸನಲ್ ಲೈಫ್’ ಕೆದಕಿದ ಹೆಚ್‍ಡಿಕೆ..!

0
365

ರಾಜ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಪರ್ಸನಲ್ ಲೈಫ್ ಕುರಿತು ಮಾತನಾಡುವ ಮೂಲಕ ಯಡಿಯೂರಪ್ಪನವರ ವೈಯಕ್ತಿಕ ವಿಚಾರವನ್ನು ಕೆದಕಿದ್ದಾರೆ ಹೆಚ್.ಡಿ.ಕುಮಾರಸ್ವಾಮಿ. ಹೌದು, ಸಿಎಂ ಬಿ.ಎಸ್. ಯಡಿಯೂರಪ್ಪನವರ ಪತ್ನಿ ಸಾವು ಸಹಜವಲ್ಲ.! ಎಂದು ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಯಡಿಯೂರಪ್ಪನವರ ಪತ್ನಿ ಅನುಮಾನಸ್ಪದವಾಗಿ ಸಾವಾಗಿತ್ತು ಎಂದು ಹೇಳುವ ಮೂಲಕ ಬಾಂಬ್ ಸಿಡಿಸಿದ್ದಾರೆ.

ಸಿಎಂ ಅವರ ಪತ್ನಿ ಅವರ ಸಾವು ಸಹಜವಲ್ಲ.! ಒಂದು ಅಡಿ ಇರುವ ನೀರಿನ ಸಂಪಿಗೆ ಬಿದ್ದು ಸಾಯಲು ಸಾಧ್ಯವೇ.? ಇದು ಖಚಿತವಾಗಿ ಅನುಮಾನಸ್ಪದ ಸಾವಲ್ಲವೇ.! ಖಂಡಿತವಾಗಿ ಎಲ್ಲರಲ್ಲೂ ಅನುಮಾನ ಮೂಡಿಸುತ್ತದೆ. ಮೂರು ವರ್ಷದಲ್ಲಿ ಅವರು ಮಾಡಿರುವ ಕೆಲಸಗಳನ್ನು ಒಮ್ಮೆ ಮೆಲುಕು ಹಾಕಿದರೆ ಸಾಕು ಅವರ ಬಂಡವಾಳ ತಿಳಿಯುತ್ತದೆ. ನಾನು ಮಾಧ್ಯಮ ಮಿತ್ರರಿಗೆ ಕೇಳುವ ಪ್ರಶ್ನೆ ಎಂದರೆ ಒಂದಡಿ, ಒಂದಡಿ ಜಾಗದಲ್ಲಿ ಯಾರಾದರೂ ಸಾವನಪ್ಪಲು ಸಾಧ್ಯವಾ.? ಇದನ್ನು ನಮ್ಮ ಜನ ನಂಬುತ್ತಾರೆ ಎಂದರೆ ಏನು ಹೇಳಬೇಕು ಎಂಬುದು ನನಗೆ ತಿಳಿದಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

LEAVE A REPLY

Please enter your comment!
Please enter your name here