ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಹೆಚ್.ಡಿ.ಕೆ..!

0
140

ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ್ ಅವರು ದಿಢೀರ್ ನಾಪತ್ತೆಯಾಗಿದ್ದು, ಅವರ ಕಂಪನಿ ನಿರ್ದೇಶಕರು ಹಾಗೂ ಸಿಬ್ಬಂದಿಗೆ ಬಹಳ ದುಃಖದಿಂದ ಪತ್ರ ಬರೆದಿದ್ದಾರೆ. ಸೋಮವಾರ ಸಂಜೆ ನೇತ್ರಾವತಿ ನದಿಯ ಮುಖ್ಯ ಸೇತುವೆ ಬಳಿ ಅವರ ಕಾರು ನಿಂತಿದ್ದು, ಸಿದ್ಧಾರ್ಥ್ ಅವರಿಗೆ ಏನಾಗಿರಬಹುದು.? ಎಂಬುದು ಯಾರಿಗೂ ತಿಳಿದಿಲ್ಲ.! ಇದರ ಹಿನ್ನೆಲೆಯಲ್ಲೇ ಪಾಂಡೇಶ್ವರ ಅಗ್ನಿಶಾಮಕ ವತಿಯಿಂದ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಆರಂಭಗೊಂಡಿದ್ದು, ಎಲ್ಲ ಸಿಬ್ಬಂದಿ ವರ್ಗದವರು ಶೋಧ ಕಾರ್ಯದಲ್ಲಿ ಸಂಪೂರ್ಣ ನಿರತರಾಗಿದ್ದಾರೆ.ಶೋಧ ಕಾರ್ಯವನ್ನು ಮತ್ತಷ್ಟು ವೇಗದಲ್ಲಿ ಮುಂದುವರಿಸಲು ಒಂದು ರಕ್ಷಣಾ ವಾಹನ,ನಾಲ್ಕು ಬೋಟ್ ವಿತ್ ಓಬಿಯಂ ಬಳಕೆ ಮಾಡಿದ್ದು,೫೦ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರವಾರ ನೌಕಾ ನೆಲೆಯಿಂದ ಮಂಗಳೂರಿಗೆ ಹೆಲಿಕಾಪ್ಟರ್ ರವಾನೆಯಾಗಲಿದ್ದು, ಕಾರ್ಯಾಚರಣೆ ಇನ್ನಷ್ಟು ಬಿಗಿಯಾಗಲಿದೆ. ೫೦ಕ್ಕೂ ಹೆಚ್ಚು ಪೊಲೀಸ್ ಪೇದೆಗಳು ತನಿಖೆಗೆ ಆಗಮಿಸಿದ್ದು, ಈಗಾಗಲೇ ತನಿಖೆ ಹಲವು ರೀತಿಯಲ್ಲಿ ಸಾಗುತ್ತಿದೆ.ಇತ್ತ ಅಳಿಯ ಸಿದ್ಧಾರ್ಥ್ ಅವರ ಯೋಚನೆಯಲ್ಲಿ ದುಃಖತಪ್ತರಾಗಿರುವ ಎಸ್.ಎಂ. ಕೃಷ್ಣ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಹಾಗೂ ಎಸ್.ಎಂ.ಕೃಷ್ಣ ಅವರಿಗೆ ಧೈರ್ಯ ತುಂಬಿ ಮಾತನಾಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಅವರ ಸಾಲಿನಲ್ಲೇ ನಟ ಪುನೀತ್ ರಾಜ್ಕುಮಾರ್, ಸಚಿವ ಡಿಕೆ. ಶಿವಕುಮಾರ್, ಬಿ.ಎಸ್. ಯಡಿಯೂರಪ್ಪ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here