ಯಡಿಯುರಪ್ಪನವರ ಕಾರ್ಯವೈಖರಿಯನ್ನು ಮಾತಿನಲ್ಲೇ ಕುಟುಕಿದ : ಹೆಚ್ ಡಿ ಕೆ…

0
152

ಇಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ರವರ ಚಿಕ್ಕಮಗಳೂರಿನಿಂದ ಕೆ.ಆರ್.ಪೇಟೆಗೆ ತೆರಳೋ ಮಾರ್ಗ ಮಧ್ಯೆ ಹಾಸನದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರು ಕೊಟ್ಟ ಅವಕಾಶದಿಂದ ಎರಡು ಬಾರಿ ಸಿಎಂ ಆಗಿದ್ದೇನೆ, ನಾನು ಆಕಸ್ಮಿಕವಾಗಿ ಈ ರಾಜ್ಯದ ಮುಖ್ಯಮಂತ್ರಿ ಆದವನು, ಇಂದು ಒಳ್ಳೆಯವರಿಗೆ ರಾಜಕಾರಣ ಅಲ್ಲ . ಜಾತಿ ಪ್ರಭಾವದಿಂದ ರಾಜಕೀಯ ನಡೆಯುತ್ತಿದ್ದು ಅಧಿಕಾರದ ಅಪೇಕ್ಷೆಯಿಂದ ಕುತಂತ್ರದ ರಾಜಕೀಯ ನಡೆಯುತ್ತಿದೆ. ಇಂಥಹ ರಾಜಕೀಯ ವ್ಯವಸ್ಥೆಯಿಂದ ನಾನೇ ಹಿಂದೆ ಸರಿಯಬೇಕು ಎಂದು ಚಿಂತಿಸಿದ್ದೆ. ನನಗೆ ರಾಜಕೀಯದಲ್ಲೇ ಇರಬೇಕು ಎನ್ನುವ ಹುಚ್ಚಿಲ್ಲ ಎಂದು ತಿಳಿಸಿದರು.

ನಮ್ಮದು ಪಾಪದ ಸರ್ಕಾರ ಇತ್ತು, ಈಗ ಪವಿತ್ರ ಸರ್ಕಾರ ಬಂದಿದೆ, ಅವರು ಯಾವ ರೀತಿಯ ಆಡಳಿತ ನೀಡುತ್ತಾರೆ ನೋಡೋಣ ಎಂದು ಬಿ ಎಸ್ ವೈ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದರು. ಇನ್ನು ನಿಖಿಲ್ ಕುಮಾರಸ್ವಾಮಿ ರವರು ಕೆ ಆರ್ ಪೇಟೆಯಲ್ಲಿ ಸ್ಪರ್ಧಿಸುತ್ತಾರ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಸ್ತುತ ರಾಜಕೀಯ ಪರಿಸ್ಥಿತಿ ಹದಗೆಟ್ಟಿದ್ದು ದಯಮಾಡಿ ನನ್ನನ್ನು ಹಾಗೂ ನನ್ನ ಕುಟುಂಬವನ್ನು ನೆಮ್ಮದಿಯಾಗಿ ಇರಲು ಬಿಟ್ಟು ಬಿಡಿ ಎಂದು ಹೇಳಿದ ಅವರು ಉಪಚುನಾವಣೆಯಲ್ಲಿ ನಿಖಿಲ್ ಹಾಗೂ ಪ್ರಜ್ವಲ್ ಸ್ಪರ್ಧೆ ವಿಚಾರ ಕೇವಲ ಕಪೋಲ ಕಲ್ಪಿತವಾಗಿದ್ದು ಅಧಿಕಾರಕ್ಕೆ ಅಂಟಿ ಕೂರುವ ಜಾಯಮಾನ ನಮ್ಮದಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಬಂದು ಒಂದು ವಾರ ಕಳೆದಿದ್ದು ಆಗಲೆ ಏನೆನು ನಡೆಯುತ್ತಿದೆ ಅನ್ನುವುದು ನನ್ನ ಗಮನಕ್ಕು ಬಂದಿದೆ ಎಂದು ಹೆಚ್ ಡಿ ಕುಮಾರಸ್ವಾಮಿರವರು ಹೇಳಿದರು. ನಾನು ಈಗ ಏನು ಮಾತನಾಡುವುದಿಲ್ಲ ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂದು ಜನರು ನೋಡಿದ್ದು, ಜನರೆ ತೀರ್ಮಾನ ಕೈಗೊಳ್ಳುತ್ತಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಕುಮಾರಸ್ವಾಮಿ‌ ರವರು ಹೇಳಿದರು.

LEAVE A REPLY

Please enter your comment!
Please enter your name here