370ನೇ ವಿಧಿ ರದ್ಧತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್.ಡಿ.ಕೆ

0
148

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ಧತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇದರಿಂದ ಮುಂದಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ತುಂಬಾ ಒಳ್ಳೇಯದು ಎಂದು ಹೇಳಿದ್ದಾರೆ.

ಈ ಬಗ್ಗೆ ರಾಮನಗರದ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜಮ್ಮು-ಕಾಶ್ಮೀರದಲ್ಲಿನ 370 ವಿಧಿ ಹಾಗೂ 35ಎ ವಿಧಿ ರದ್ದು ವಿಚಾರವಾಗಿ ಪರ ವಿರೋಧ. ಎರಡು ಇದೆ. ಹೆಚ್ಚಿನ ರೀತಿಯಲ್ಲಿ ಇದು ಆಗಬೇಕು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದನ್ನು‌ ಗಮನಿಸಿದ್ದೇನೆ. ಇದರಿಂದ ಮುಂದಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕರೆ ತುಂಬಾ ಒಳ್ಳೇಯದು ಎಂದರು.

ಹಾಗೆಯೇ ಜನರು ಸಮಾಜ‌ ಶಾಂತಿಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಂಡು ಯಾವುದೇ ಅಶಾಂತಿಗೆ ಅವಕಾಶ ಮಾಡಿಕೊಡದೇ ಉತ್ತಮ‌ ರೀತಿಯಲ್ಲಿ ಹೋಗುವ ಮೂಲಕ ಅಂತಿಮ ಪರಿಹಾರ ದೊರಕಬೇಕು. ಜನರ ಭಾವನೆಗಳಿಗೆ ನಾವು ಒಮ್ಮತದ ಒಪ್ಪಿಗೆ ಕೊಡಬೇಕು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here