ಕೆಜಿಎಫ್ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಸ್ಟಾರ್ ಆಗಿರುವ ಯಶ್ ಮತ್ತು ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ! ಇನ್ನು ಈ ದಂಪತಿಯ ಮುದ್ದಾದ ಹೆಣ್ಣು ಮಗಳಿಗೆ ಅಯಿರಾ ಎಂದು ಸಂಭ್ರಮದಿಂದ ಅದ್ಧೂರಿಯಾಗಿ ನಾಮಕರಣ ಮಾಡಿರುವುದು ತಮಗೆಲ್ಲರಿಗೂ ಗೊತ್ತೆಇದೆ !
ಇನ್ಬು ಮಗಳು ಅಯಿರಾ ಗೆ ಇಗ ೮ ತಿಂಗಳು. ರಾಧಿಕಾ ಪಂಡಿತ್ ಅವರ ಮೇಕಪ್ ಮ್ಯಾನ್ ಪ್ರಶಾಂತ್, ಯಶ್ – ರಾಧಿಕಾ ದಂಪತಿಗೆ ಒಂದು ಬ್ಯೂಟಿಫುಲ್ ಗಿಫ್ಟ್ ನೀಡಿದ್ದಾರೆ !

ಏನಿದು ವಿಶೇಷ ಗಿಫ್ಟ್ ?
ಆಯಿರಾಳ ಪುಟ್ಟ ಪುಟ್ಟ ಕೈ ಮತ್ತು ಪುಟ್ಟ ಪುಟ್ಟ ಕಾಲಿನ ಆರ್ಟ್ ಅನ್ನು ಪ್ರಶಾಂತ್ ಗಿಫ್ಟ್ ಆಗಿ ನೀಡಿದ್ದಾರೆ. ಪುಟ್ಟ ಕಾಲು ಮತ್ತು ಕೈಗಳ ಕಲಾಕೃತಿಗಳಿಗೆ ಸುಂದರವಾದ ಫ್ರೇಮ್ ಹಾಕಿಸಿದ್ದಾರೆ. ಫೊಟೋದ ಮೇಲೆ ಅಯಿರಾ ಹುಟ್ಟಿದ್ದ ದಿನಾಂಕವನ್ನು ಬರೆದು ಗಿಫ್ಟ್ ಮಾಡಿದ್ದಾರೆ. ಇದನ್ನು ಕಂಡ ಯಶ್ ರಾಧಿಕಾ ದಂಪತಿಗಳು ಸಕತ್ ಖುಷ್ ಆಗಿದ್ದಾರೆ. ಈ ಗಿಫ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳಿಗೆ ತೋರಿಸಲೆಂದು ಒಂದು ವೀಡಿಯೋ ಮಾಡಿ ಬಿಟ್ಟಿದ್ದಾರೆ. ಇಂತಹ ಅದ್ಭುತವಾದ ಗಿಫ್ಟ್ ಮಗಳಿಗೆ ಸಿಕ್ಕಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ…

ಇದರ ಬೆನ್ನಲ್ಲೇ ಈ ವಿಡಿಯೋವನ್ನು ನೋಡಿ ಅಭಿಮಾನಿಗಳು ಮತ್ತು ನೆಟ್ಟಿಗರು ಗರಂ ಆಗಿದ್ದಾರೆ ! ಹೌದು ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಯಶ್ ಮತ್ತು ರಾಧಿಕಾ ದಂಪತಿಗಳು ಇಂಗ್ಲಿಷಿನಲ್ಲಿಯೇ ಮಾತನಾಡಿದ್ದಾರೆ .. ಇದನ್ನು ಕಂಡ ಅಭಿಮಾನಿಗಳು ಕಾಮೆಂಟ್ ಮುಖಾಂತರ ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿದ್ದಾರೆ !
“ಸಾರ್, ನೀವು ಸ್ಟೇಜ್ ಹತ್ತಿದ ತಕ್ಷಣ ಅಣ್ತಮ್ಮ ಅಂತ ಶುರು ಮಾಡ್ತಿದ್ರಿ, ಆದರೆ ಇವಾಗ ಏನಾಯ್ತು “? ಎಂದು ಕೇಳಿದ್ದಾರೆ.. ಹಾಗೆಯೇ ಮತ್ತೊಬ್ಬ “ಸಾರ್ ನಿಮ್ಮ ಅಭಿಮಾನಿಗಳೆಲ್ಲ ಆಂಗ್ಲ ಪಂಡಿತರೆಲ್ಲ. ದಯವಿಟ್ಟು ಏನೇ ವಿಷಯವಿದ್ದರೂ ಕನ್ನಡದಲ್ಲಿಯೇ ತಿಳಿಸಿ’ ಎಂದು ಹೇಳಿದ್ದಾನೆ

ವಿಡಿಯೋ ಪೂರ್ತಿ ಇಂಗ್ಲೀಷ್ ನಲ್ಲಿಯೆ ಮಾತನಾಡಿರುವ ಯಶ್ ಮತ್ತು ರಾಧಿಕಾ ಎಲ್ಲಿಯೂ ಒಂದು ಪದವನ್ನು ಕನ್ನಡ ಬಳಸಿಲ್ಲ. ಹಾಗಾಗಿ ನೀವೇನು ಇಂಗ್ಲೇಂಡ್ ಇಂದ ಬಂದಿದ್ದ. ನಿಮಗೆ ಕನ್ನಡ ಅಭಿಮಾನಿಗಳೆ ಜಾಸ್ತಿ ಇರುವುದು ಕನ್ನಡದಲ್ಲಿ ಹೇಳಿ ಎಂದು ಕಮೆಂಟ್ ಮಾಡುತ್ತಿದ್ದಾರೆ.!