ಹತ್ರಾಸ್ ಪ್ರಕರಣದಲ್ಲಿ ಈ ಸಂಶಯಗಳಿಗೆ ಉತ್ತರವೇ ಇಲ್ಲ…!!

0
142

ಹತ್ರಾಸ್ ಪ್ರಕರಣದಲ್ಲಿ ಸೆಪ್ಟೆಂಬರ್ ೧೪ನೇ ತಾರೀಕಿಗೆ ಬಾಲಕಿಯ ಸಹೋದರನಾದ ಸತ್ಯಂದ್ರ ತನ್ನ ಹತ್ತೊಂಬತ್ತು ವಯಸ್ಸಿನ ಸಹೋದರಿಯನ್ನು ಸಂದೀಪ್ ಎಂಬಾತ ಮೃ’ಗೀಯವಾಗಿ ದಾ’ಳಿ ಮಾಡಿ ಕೊ’ಲೆಗೈಯಲು ಯತ್ನಿಸಿದ್ದಾನೆ ಎಂದು ತೋರಿಸಿ ಹತ್ರಾಸಿನ ಚಂದ್ಪೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾನೆ. ಜಾನುವಾರುಗಳಿಗೆ ತಿನ್ನಲು ಹುಲ್ಲು ಶೇಖರಿಸಲು ತಾಯಿಯೊಂದಿಗೆ ಹೊರಗಡೆ ಹೋದ ಸಹೋದರಿ ಅಂದು ಬೆಳಿಗ್ಗೆ ದಾಳಿಗೆ ಗುರಿಯಾಗಿರುವಂತದ್ದು. ಸಹೋದರ ಬರೆದು ಕೊಟ್ಟ ದೂರಿನ ಪ್ರಕಾರ ಅದೇ ದಿವಸ ಪೊಲೀಸ್ ಸಂದೀಪ್ ಎಂಬ ವ್ಯಕ್ತಿಯ ವಿ’ರುದ್ಧ ಪ್ರ’ಕರಣ ರಿಜಿಸ್ಟರ್ ಮಾಡುತ್ತಾರೆ. ಸೆಕ್ಷನ್ ೩೦೭(ಕೊಲೆ ಯತ್ನ) ಕೇ’ಸ್ ದಾಖಲಿಸುತ್ತಾರೆ ಐದು ದಿವಸದ ನಂತರ ಸೆಪ್ಟೆಂಬರ್ ೧೯ಕ್ಕೆ ಸಂದೀಪ್‌ನನ್ನು ಪೊಲೀಸರು ಆರೆಸ್ಟ್ ಮಾಡುತ್ತಾರೆ. ಹುಡುಗಿ ಗಂಭೀರ ಸ್ಥಿತಿಯಲ್ಲಿದ್ದು ಮಾತನಾಡುವ ಪರಿಸ್ಥಿತಿಯಲ್ಲಿಲ್ಲದ ಕಾರಣ ಅವಳ ಹೇಳಿಕೆ ಪಡೆಯಲು ಪೊಲೀಸರಿಗೆ ಸಾಧ್ಯವಾಗಿಲ್ಲ ಸೆಪ್ಟೆಂಬರ್ ೨೨ಕ್ಕೆ ಸ್ವಲ್ಪ ಚೇತರಿಸಿದ ಹುಡುಗಿ ನನ್ನನ್ನು ಸಂದೀಪ್‌ನೊAದಿಗೆ ಇನ್ನೂ ಮೂವರು ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆ ಕೊಡುತ್ತಾಳೆ.

ಈ ಹೇಳಿಕೆಯ ಪ್ರಕಾರ ಹೇಳಿಕೆಯಲ್ಲಿ ಹೇಳಿರೋ ಮೂರು ಮಂದಿಯನ್ನು ಕೂಡ ಪೊಲೀಸರು ಆರೆಸ್ಟ್ ಮಾಡುತ್ತಾರೆ. ಸೆಪ್ಟೆಂಬರ್ ೨೮ನೇ ತಾರೀಕಿಗೆ ಹುಡುಗಿಯ ಅರೋಗ್ಯ ಇನ್ನಷ್ಟು ಗಂಭೀರಸ್ಥಿತಿಗೆ ಬರುತ್ತದೆ ಅಂದೇ ದೆಹಲಿಯ ಸ್ಫದ್ರಾಜಂಗ್ ಆಸ್ಪತ್ರೆಗೆ ಕೊಡೊಯ್ಯಲಾಗುತ್ತದೆ ಮರುದಿವಸವೇ ಆಸ್ಪತ್ರೆಯಲ್ಲೇ ಹುಡುಗಿ ಸಾ’ವಿಗೆ ಶರಣಾಗುತ್ತಾಳೆ. ಹುಡುಗಿ ಮ’ರಣ ಹೊಂದಿದ ಮೊದಲೇ ರಿಜಿಸ್ಟರ್ ಮಾಡಿದ್ದ ಕೇಸಿನಲ್ಲಿ ಕೊಲೆ ಅಪರಾಧ ಕೂಡ ಸೇರಿಸಿ ಸೆಕ್ಷನ್ ೩೦೨ ಒಳಪಡಿಸಲಾಗುತ್ತದೆ. ಹುಡುಗಿಯ ಕುಟುಂಬಕ್ಕೆ ಹತ್ತು ಲಕ್ಷ ನಷ್ಟ ಪರಿಹಾರ ಕೊಡಲಾಗುತ್ತದೆ ಆ’ರೆಸ್ಟ್ ಆದಂತಹ ನಾಲ್ಕು ಆರೋಪಿಗಳ ವಿಚಾರಣೆ ಪ್ರತ್ಯೇಕ ನ್ಯಾಯಾಲಾಯದಲ್ಲಿ ಆರಂಭವಾಗಿ ಮುಂದೆ ಹೋಗುತ್ತಿತ್ತು… ಆದರೆ ಬೇಗನೆ ಸಂಗತಿಗಳ ದಿಕ್ಕು ಬದಲಾಗುತ್ತದೆ.

ಹುಡುಗಿ ಹೇಳಿಕೆ ಕೊಟ್ಟ ರೀತಿಯಲ್ಲಿ ಅ’ತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ತಪಾಸಣೆಯಲ್ಲಿ ಸಾಬೀತಾಗುವುದಿಲ್ಲ. ಮುಂದಿನ ಭಾಗವಾಗಿ ಫೋ’ರೆನ್ಸಿಕ್ ತಪಾಸಣೆ ನಡೆಸಲಾಗುತ್ತದೆ ಅದರಲ್ಲೂ ಅ’ತ್ಯಾಚಾರ ನಡೆದಂತೆ ಕಾಣಲು ಸಾಧ್ಯವಾಗುವುದಿಲ್ಲ. ದೆಹಲಿ ಆಸ್ಪತ್ರೆಯಲ್ಲಿ ನಡೆಸಿದ ಪೋಸ್ಟ್ ಮಾರ್ಟಮ್‌ನಲ್ಲು ಹುಡುಗಿ ಅ’ತ್ಯಾಚಾರಕ್ಕೊಳಗಾಗಿದ್ದಾಳೆ ಎಂಬ ಉಲ್ಲೇಖವಿಲ್ಲ ಆದರೆ ಹುಡುಗಿಯ ಮನೆಯವರು ಇದನ್ನು ಒಪ್ಪುತ್ತಿಲ್ಲ. ಹುಡುಗಿಯ ಮ’ರಣ ಸಂಭವಿಸಿ ೨೪ ಗಂಟೆ ಕಳೆದರು ಅವರು ಮೃ’ತಶರೀರವನ್ನು ಸಂಸ್ಕರಿಸಲು ತಯಾರಾಗುವುದಿಲ್ಲ ಪೋ’ಸ್ಟ್ ಮಾ’ರ್ಟಮ್ ನಡೆಸಿದ ಮೃತ ದೇಹ ಇದಕ್ಕಿಂತ ಹೆಚ್ಚು ಸಮಯ ಇಟ್ಟರೆ ಅದು ಕೊ’ಳೆಯಲು ಪ್ರಾರಂಭಿಸುತ್ತದೆ ಎಂಬ ಸೂಚನೆಯನ್ನು ಕೂಡ ಅವರು ಲೆಕ್ಕಿಸುವುದೇ ಇಲ್ಲ.

ಸ್ವಾಭಾವಿಕವಾಗಿ ಮರುದಿವಸ ಇನ್ನಷ್ಟು ಜನರನ್ನು ಸೇರಿಸಿ ಮೃ’ತ ಶರೀರವನ್ನು ಮುಂದಿಟ್ಟು ದೊಡ್ಡದಾಗಿ ಪ್ರತಿಭಟನೆ ನಡೆಸಲು ಸಾಧ್ಯವಿದೆ ಎಂದು ಪೊಲೀಸರು ಸಂಶಯಿಸುತ್ತಾರೆ. ಎರಡು ಕುಟುಂಬ ನಡುವೆ ಇರುವ ಜಗಳದಿಂದುAಟಾದ ಅಕ್ರಮ ಎರಡು ಜಾತಿಗಳ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಜಿಲ್ಲಾಡಾಳಿತಕ್ಕೆ ಕಳವಳ ಉಂಟಾಗುತ್ತದೆ. ಅದು ಸಂಭವಿಸದಿರಲು ಜಿಲ್ಲಾ ಮೆಜಿಸ್ಟ್ರೇಟಿನ ನಿರ್ದೇಶ ಪ್ರಕಾರ ಪೊಲೀಸರೇ ಮೃತ ಶರೀರವನ್ನು ಸಂಸ್ಕರಿಸುತ್ತಾರೆ. ಮನೆಯವರಿಗೆ ತಿಳಿಯದೆ ಪೊಲೀಸರು ಮೃತದೇಹ ಸಾಗಿಸಿ ಸಂಸ್ಕರಿಸಿದರು ಎಂಬ ರೀತಿಯಲ್ಲಿ ಕೆಲವು ಮಾಧ್ಯಮಗಳು ವಾರ್ತೆ ಮಾಡುತ್ತಾವೆ. ಆದರೆ ಆ ವಾರ್ತೆಗಳು ಸುಳ್ಳು ಎಂದು ಶವಸಂಸ್ಕಾರದಲ್ಲಿ ಮೃತಳ ತಂದೆ ಹಾಗು ಸಹೋದರ ಭಾಗಿಯಾಗಿದ್ದಾರೆ ಎಂದು ಸಾಕ್ಷಿಪಡಿಸುವ ವಿಡಿಯೋ ಮರುದಿವಸವೇ ಹೊರಬರುತ್ತದೆ.

ಅದರೊಂದಿಗೆ ಹುಡುಗಿಯ ನಾಲಗೆ ತುಂ’ಡರಿ’ಸಲಾಗಿತ್ತು ಎಂಬ ರೀತಿಯಲ್ಲಿ ಬಂದ ಮಾಧ್ಯಮ ವಾರ್ತೆಗಳನ್ನು ಸುಳ್ಳು ಎಂದು ಸಾಕ್ಷಿಪಡಿಸುವಂತಹ ಆಸ್ಪತ್ರೆಯಲ್ಲಿ ಮೃತ ಬಾಲಕಿ ಮಾತಾಡುವಂತಹ ವಿಡಿಯೋಗಳು ಕೂಡ ಹೊರ ಬರುತ್ತೆ. ಆದರೆ ಇದು ಯಾವುದು ಕೂಡ ವ್ಯಾಜ್ಯ ವಾರ್ತೆಗಳ ಗತಿಯನ್ನು ಬದಲಾಯಿಸುವುದಿಲ್ಲ ಪೊಲೀಸರು ಬಲವಂತವಾಗಿ ಮೃ’ತದೇಹ ಸಂಸ್ಕಾರ ಮಾಡಿರೋದು ಸಾಕ್ಷಿ ನಾ’ಶಮಾಡಲು ಅ’ತ್ಯಾಚಾರ ನಡೆದಿರುವುದಾಗಿ ಸಾಕ್ಷಿ ಇಲ್ಲ ಎಂದು ಅಧಿಕಾರಿಗಳು ಹೇಳೊದು ಆರೋಪಿಗಳನ್ನು ರಕ್ಷಿಸಲು ಆದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದರ ನೈತಿಕ ಜವಾಬ್ದಾರಿಯನ್ನು ಸ್ವಯಂ ವಹಿಸಿ ರಾಜೀನಾಮೆ ಕೊಡಬೇಕು ಎಂಬ ಕ್ಯಾಂಪೈನ್ ಪ್ರಾರಂಭವಾಗುತ್ತದೆ.

೧. ಮೆಡಿಕಲ್ ಎಕ್ಸೆಮಿನೇಷನ್ ನಡೆಸಿದ ಡಾಕ್ಟರ್ ಫೊರೆನ್ಸಿಕ್ ತಪಾಸಣೆ ನಡೆಸಿದ ಸರಕಾರಿ ಲ್ಯಾಬ್, ದೆಹಲಿ ಆಸ್ಪತ್ರೆಯ ಫೋರೆನ್ಸಿಕ್ ಸರ್ಜನ್, ಜಿಲ್ಲಾ ಪೊಲೀಸ್ ಮೇಧಾವಿ ಇವರೆಲ್ಲ ಹೇಳಿರೋದು ಇಷ್ಟು ಜನರನ್ನು ಪ್ರಲೋಭಿಸಿ ಅವರಿಂದ ತನಗೆ ಅನೂಕೂಲವಾಗುವಂತೆ ಹೇಳಿಸಿಕೊಳ್ಳುವಂತಹ ಶಕ್ತಿ ಆರೋಪಿಗಳಾಗಿರುವ ಈ ನಾಲ್ಕು ಮಂದಿಗೆ ಏನಿದೆ..? ಅದು ಕೂಡ ಕೇಸ್ ತೆಗೆದ ಒಂದು ವಾರದೊಳಗೆ ಆರೆಸ್ಟ್ ಆಗಿ ಜೈಲಿನಲ್ಲಿರುವವರಿಗೆ. ಆರೋಪಿಗಳು ಯಾರು ಆರ್ಥಿಕ ಸಾಮರ್ಥ್ಯ ಉಳ್ಳವರು ಅಲ್ಲ ಹಾಗಿರುವ ನಾಲ್ಕು ಮಂದಿಗೆ ಬೇಕಾಗಿ ಡಾಕ್ಟರಿಂದ ಹಿಡಿದು ಜಿಲ್ಲಾ ಕಲೆಕ್ಟರ್ ವರೆಗೂ ಸುಳ್ಳು ಹೇಳಬಹುದ? ಹಾಗೆ ಹೇಳಬೇಕಾದ ಅವಶ್ಯಕತೆಯಾದರು ಏನು?
೨. ಸಂಘರ್ಷ ಸಾಧ್ಯತೆ ಇರುವುದರಿಂದ ಹತ್ರಾಸ್ ಸಂಪೂರ್ಣವಾಗಿ ಎರಡುವಾರ ನಿ’ಷೇದಾಜ್ಞೆ ಹೇರಿದ್ದಾರೆ. ಹಾಗಿರುವ ಪರಿಸ್ಥಿತಿಯಲ್ಲಿ ಮರಣ ಹೊಂದಿದ ಹುಡುಗಿಯ ಮೃತದೇಹ ಹಿಡಿದು ಪ್ರತಿಭಟನೆ ಮಾಡಲು ಪೊಲೀಸ್ ಅವಕಾಶ ಕಲ್ಪಿಸಬೇಕಾಗಿತ್ತ? ಕಾನೂನು ಸುವ್ಯವಸ್ಥೆ ಹದಗೆಡದೆ ನೋಡಿಕೊಳ್ಳುವುದು ಅವರ ಬಾಧ್ಯತೆ ಕರ್ತವ್ಯ ತಾನೆ.?

೩. ಈ ವಿಷಯದಲ್ಲಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂಬ ಅವಶ್ಯಕತೆಯೊಂದಿಗೆ ಪ್ರತಿಭಟನೆ ಮಾಡುವ ಯುಕ್ತಿಯಾದರು ಏನು? ಆರೋಪಿಗಳು ಎಲ್ಲರು ಆರೆಸ್ಟ್ ಆಗಿದ್ದಾರೆ. ಪ್ರತ್ಯೇಕ ನ್ಯಾಯಾಲಯದಲ್ಲಿ ಅವರ ವಿಚಾರಣೆ ಆರಂಭವಾಗಿದೆ. ಶಕ್ತವಾದ ಸೆಕ್ಷನ್ ಒಳಪಡಿಸಿ ಕೇಸ್ ದಾಖಲಿಸಲಾಗಿದೆ. ಮೃತಳ ಕುಟುಂಬಕ್ಕೆ ಬೇಕಾದ ತುರ್ತು ಧನಸಹಾಯ ಒದಗಿಸಲಾಗಿದೆ. ಘಟನೆಯನ್ನು ಪ್ರಧಾನಮಂತ್ರಿಯೊAದಿಗೆ ನೇರವಾಗಿ ಚರ್ಚೆ ಮಾಡಿದ್ದಾರೆ ಆರೋಪಿಗಳ ವಿರುದ್ಧ ಶಕ್ತವಾದ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಾತು ಕೊಟ್ಟಿದ್ದಾರೆ. ಮುಂದಿನ ತನಿಖೆಯ ಭಾಗವಾಗಿ ಪ್ರತ್ಯೇಕ ಪೊಲೀಸ್ ಸಂಘವನ್ನು ನಿಯಮಿಸಲಾಗಿದೆ. ಇದಕ್ಕಿಂತ ಹೆಚ್ಚಾಗಿ ಒಂದು ರಾಜ್ಯದ ಮುಖ್ಯಮಂತ್ರಿ ಏನು ಮಾಡಬೇಕಾಗಿತ್ತು ಏನು ಮಾಡಲು ಸಾಧ್ಯ.?

೪. ಆಂಬು’ಲೆನ್ಸಿನಲ್ಲಿ ಕೋವಿಡ್ ರೋಗಿ ಅ’ತ್ಯಾಚಾರಕ್ಕೋಳಗಾದ ವಿಷಯದಲ್ಲಿ ವಾಲಯಾರ್ ಸಹೋದರಿಯರ ಅವಳಿ ಕೊಲೆ ನಡೆದ ವಿಷಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನಿಗಿಲ್ಲದ ನೈತಿಕ ಜವಾಬ್ದಾರಿ ಹೇಗೆ ಉತ್ತರ ಪ್ರದೇಶದ ವಿಷಯದಲ್ಲಿ ಯೋಗಿ ಆದಿತ್ಯನಾಥರಿಗೆ ಬರುವುದು.?

ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿದ್ದರು ಸೂಕ್ತ ತನಿಖೆ ಆಗಬೇಕು. ಆಗ ಮಾತ್ರ ಸತ್ಯ ಹೊರ ಬರುತ್ತದೆ. ಇನ್ನು ಬಂಧಿತರಾಗಿರುವ ನಾಲ್ಕು ಆರೋಪಿಗಳಿಗು ಶಿಕ್ಷೆ ಸಿಗಬೇಕು ಎಂಬಲ್ಲಿ ಮಾತ್ರ ಕಾನೂನಿನ ಪರಮಾವದಿ ಶಿಕ್ಷೆ ಆ ಮೃಗಗಳಿಗೆ ಸಿಗಬೇಕು. ಆದರೆ ಆರೋಪಿಗಳನ್ನು ಬಿಟ್ಟು ಸರಕಾರದ ಹಿಂದೆ ಹೋಗುವ ಹೋರಾಟ ರಾಜಕೀಯ ದುರುದ್ದೇಶ ಅಷ್ಟೇ.

LEAVE A REPLY

Please enter your comment!
Please enter your name here