ನಟಿಯೊಂದಿಗೆ ಎಚ್. ವಿಶ್ವನಾಥ್ ‘ಸೆಕ್ಸ್ ಟಾಕ್’..! ಯಾರು ಆ ನಟಿ..?!

0
1181

ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮತ್ತು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ನಡುವಿನ ರಾಜಕೀಯ ಸಮರ ಇದೀಗ ಮತ್ತೊಂದು ಸ್ವರೂಪ ಪಡೆದಿದೆ. ಈ ಇಬ್ಬರು ನಾಯಕರ ನಡುವಿನ ತಿಕ್ಕಾಟ ಈಗ ಇನ್ನೊಂದು ಹಂತ ತಲುಪಿದೆ. ಅನರ್ಹ ಶಾಸಕ ಎಚ್. ವಿಶ್ವನಾಥ್ ಸಾ.ರಾ. ಮಹೇಶ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಸಾ.ರಾ. ಮಹೇಶ್ ಕಳೆದ ಎರಡು ತಿಂಗಳುಗಳ ಹಿಂದೆ ನಟಿಯೊಬ್ಬರ ಜೊತೆಗೆ ಎಚ್. ವಿಶ್ವನಾಥ್ ನಡೆಸಿದ್ದಾರೆ ಎನ್ನಲಾಗಿದ್ದ ‘ಸೆಕ್ಸ್ ಟಾಕ್’ ಅನ್ನು ಮತ್ತೊಮ್ಮೆ ಕೆದಕಿ, ಇದಕ್ಕೆ ಸಂಬಂಧಪಟ್ಠಂತೆ ಸಿಡಿಯನ್ನು ಬಿಡುಗಡೆ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್, ವಿಶ್ವನಾಥರೇ, ನೀವು ನನ್ನ ಯೋಗ್ಯತೆ ಬಗ್ಗೆ ಮಾತನಾಡುವುದು ಬೇಡ, ನಿಮ್ಮಂತೆ ನಾವು ಬದುಕಿದ್ದರೆ ನಾವು ಕೆರೆಯೋ, ಬಾವಿಯನ್ನು ನೋಡಿಕೊಳ್ಳಬೇಕಾಗಿತ್ತು. ನಾನು ನನ್ನ ರಾಜಕೀಯ ಇತಿಹಾಸದಲ್ಲಿ ಯಾರ ವಿರುದ್ದ ಕೂಡ ವೈಯುಕ್ತಿಕವಾಗಿ ಟೀಕೆ ಮಾಡಿಲ್ಲ. ಕಳೆದ ಎರಡು ತಿಂಗಳಿನಿಂದ ವೈರಲ್ ಆಗಿರುವ ಆಡಿಯೋಕ್ಕೆ ಸಂಬಂಧಪಟ್ಟಂತ ನೀವು ಮಾತನಾಡಿಲ್ಲ, ಮೊದಲು ಅದರ ಬಗ್ಗೆ ಮಾತನಾಡಿ, ನಂತರ ಬೇರೆಯವರ ಯೋಗ್ಯತೆಯ ಬಗ್ಗೆ ಮಾತನಾಡುವಿರಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಎಚ್. ವಿಶ್ವನಾಥ್ ನಟಿಯೊಬ್ಬರ ಜೊತೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ಒಂದನ್ನು ಕಳೆದ ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ಆದರೆ ಅದಕ್ಕೆ ವಿಶ್ವನಾಥ್ ಯಾವುದೇ ಸೂಕ್ತ ಉತ್ತರ ನೀಡಿರಲಿಲ್ಲ. ಅದು ಮಿಮಿಕ್ರಿ ಮಾಡಿ ಸೃಷ್ಟಿಸಲಾಗಿರುವ ಆಡಿಯೋ ಎಂದಷ್ಟೇ ಹೇಳಿದ್ದರು. ಆದರೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಇದೀಗ ಅದನ್ನೇ ಮತ್ತೆ ಕೆದಕಿದ್ದಾರೆ. ಆದರೆ ವಿಶ್ವನಾಥ್ ಅವರೊಂದಿಗೆ ಸೆಕ್ಸ್ ಟಾಕ್ ನಡೆಸಿದ ನಟಿ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here