ಡಿಕೆಶಿ ಪರ ಪ್ರತಿಭಟನೆಗೆ ಕುಮಾರಸ್ವಾಮಿ ಗೈರಾಗಿದ್ದೇಕೆ..?!

0
476

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿರಲಿಲ್ಲ. ಇದು, ಹಲವು ಚರ್ಚೆಗಳಿಗೆ ನಾಂದಿ ಹಾಡಿತ್ತು. ಆದರೆ ಈ Rallyಯಿಂದ ಕುಮಾರಸ್ವಾಮಿ ಅವರು ದೂರ ಸರಿದಿದ್ದಕ್ಕೆ ಸಾಕಷ್ಟು ಕಾರಣಗಳಿಗೆ ಎಂದು ಅವರ ಆಪ್ತ ಶಾಸಕರು ಮಾತನಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ನಡೆಸಿದ ಪ್ರತಿಭಟನಾ Rallyಯಲ್ಲಿ ಭಾಗವಹಿಸಲು ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದರು.

ಆದರೆ ಕೊನೆ ಘಳಿಗೆಯಲ್ಲಿ ಕುಮಾರಸ್ವಾಮಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಅದಕ್ಕೆ ಕಾರಣವೆನೆಂದರೆ ಕಾಂಗ್ರೆಸ್ ಹೆಣೆದಿರುವ ಜಾತಿ ರಾಜಕಾರಣದ ತಂತ್ರ. ಹೌದು, ಡಿಕೆಶಿ ಬಂಧನವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಅದರಲ್ಲೂ ಒಕ್ಕಲಿಗ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಡಿಕೆ ಶಿವಕುಮಾರ್ ಅವರಿಗೆ ನೈತಿಕ ಬೆಂಬಲ ನೀಡಲು ಪಕ್ಷಾತೀತವಾಗಿ ಹೋರಾಟ ಮಾಡಲು ಜೆಡಿಎಸ್ ಸಿದ್ದವಿತ್ತು.

ಆದರೆ ಕಾಂಗ್ರೆಸ್ ನಾಯಕರು ಡಿಕೆಶಿ ಪ್ರಕರಣವನ್ನು ಜಾತಿ ಮತ್ತು ರಾಜಕೀಯಕ್ಕೆ ಮಾತ್ರ ಸಿಮೀತಗೊಳಿಸಿದರು. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ರ್ಯಾಲಿ ಹಿಂದೆ ಸರಿದರು ಎನ್ನಲಾಗಿದೆ. ಇನ್ನ ಕಾಂಗ್ರೆಸ್ ಪಕ್ಷದ ಈ ತಂತ್ರಗಾರಿಕೆ ಅರಿತ ಎಚ್.ಡಿ. ಕುಮಾರಸ್ವಾಮಿ ಅವರು Rallyಯಿಂದ ದೂರ ಉಳಿಯುವ ಮೂಲಕ ತಮ್ಮ ಕಾರ್ಯಕರ್ತರಿಗೆ ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ. ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ ಇದ್ದ ಮಾಜಿ ಮುಖ್ಯಮಂತ್ರಿಗಳು ಪ್ರತಿಭಟನಾ ಸಭೆಗೆ “ನನಗೆ ಆಮಂತ್ರಣವಿರಲಿಲ್ಲ, ಆದರೆ, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಡಿಕೆಶಿ ಪರ Rallyಗೆ ಕುಮಾರಸ್ವಾಮಿ ಅವರು ಗೈರಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರೂ, ಈ Rallyಯಿಂದ ದೂರ ಸರಿಯುವ ಮೂಲಕ ಮಾಜಿ ಸಿಎಂ ರಾಜಕೀಯ ಪ್ರಬುದ್ದತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here