ಹೆಚ್ ಡಿ ಕುಮಾರಸ್ವಾಮಿ ಶಾಸಕರಾಗಿರೋ ಉತ್ಸಾಹದಲ್ಲಿ ಹೇಳಿಕೆ ಕೊಡುತ್ತಿದ್ದಾರೆ: ಡಾ. ಅಶ್ವಥ್ ನಾರಾಯಣ್ ವ್ಯಂಗ್ಯ

0
34

ಬೆಂಗಳೂರು: ಚನ್ನಪಟ್ಟಣಕ್ಕೆ ನಾನೇ ಸರ್ಕಾರ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ವ್ಯಂಗ್ಯ ಮಾಡಿದ್ದಾರೆ. ತಾವು ಪರಿಪೂರ್ಣ ಪ್ರತಿನಿಧಿ ಅಂತಾ ಅವರು ಭಾವನೆಯಲ್ಲಿ ಹೇಳಿರಬೇಕು. ಯಾವುದೇ ಕ್ಷೇತ್ರಕ್ಕೆ ಸಿಎಂ, ಮಂತ್ರಿ ಎಂದು ಸ್ಥಾನ ಇಲ್ಲ. ಶಾಸಕರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಉತ್ಸಾಹದಲ್ಲಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಪ್ರತಿನಿಧಿಯಾಗಿ ಜವಾಬ್ದಾರಿ ನಿರ್ವಹಿಸುವುದು ಅವರ ಕರ್ತವ್ಯ. ಸರ್ಕಾರ ಕೂಡಾ ತನ್ನ ಕರ್ತವ್ಯ ಮಾಡುತ್ತದೆ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ, ಅವರ ಕರ್ತವ್ಯ ಅವರು ಮಾಡುತ್ತಾರೆ. ನಾನು ಪರಿಪೂರ್ಣ ಪ್ರತಿನಿಧಿ ಅಂತಾ ಅವರು ಭಾವನೆಯಲ್ಲಿ ಹೇಳಿರಬೇಕು. ಯಾವುದೇ ಕ್ಷೇತ್ರಕ್ಕೆ ಸಿಎಂ, ಮಂತ್ರಿ ಅಂತಾ ಸ್ಥಾನ ಇಲ್ಲ. ಶಾಸಕರಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಉತ್ಸಾಹದಲ್ಲಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ವ್ಯಂಗ್ಯ ಮಾಡಿದರು.

“ರಾಮನಗರ ಜಿಲ್ಲೆಯಲ್ಲಿ ಸವಾಲು‌ ಇದೆ ನಿಜ”

ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹಿನ್ನೆಲೆ ಯಲ್ಲಿ ನಮ್ಮ ಸರ್ಕಾರದ ಉತ್ತಮ ಆಡಳಿತದ ಮೂಲಕ ರಾಜ್ಯದಲ್ಲಿ ಪ್ರಗತಿ ಕಾಣಲಾಗಿದೆ. ಜನರ ವಿಶ್ವಾಸ ಸಂಪೂರ್ಣವಾಗಿ ಸರ್ಕಾರ ಮತ್ತು ಬಿಜೆಪಿ ಪರವಾಗಿದೆ. ಶೇ‌ ೮೦ ಕ್ಕಿಂತಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಗ್ರಾಮ ಸ್ವರಾಜ್ಯ ಸಮಾವೇಶಗಳು ಕೂಡಾ ರಾಜ್ಯದಲ್ಲಿ ನಡೆಯುತ್ತಿದೆ. ಸಂಘಟನೆ ಸದೃಢವಾಗಿರುವ ಕಾರಣ ನಮಗೆ ಎಲ್ಲೂ ಸವಾಲು ಇಲ್ಲ. ರಾಮನಗರ ಜಿಲ್ಲೆಯಲ್ಲಿ ಸವಾಲು‌ ಇದೆ ನಿಜ. ಒಂದು ಕಡೆ ಕುಮಾರಸ್ವಾಮಿ, ಇನ್ನೊಂದು ಕಡೆ ಡಿ.ಕೆ. ಶಿವಕುಮಾರ್ ಇದ್ದಾರೆ. ಆದರೆ ಅಲ್ಲಿ ಅವರು ಅಭಿವೃದ್ಧಿ, ಸುಧಾರಣೆ ಕೊಟ್ಟಿಲ್ಲ. ಅಲ್ಲಿ ಅವರು ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ, ಮಾತು ಇಷ್ಟಕ್ಕೇ ಸೀಮಿತ ಆಗಿದ್ದಾರೆ.‌ಜನವಿರೋಧಿಯಾಗಿ ಅವರು ಕೆಲಸ ಮಾಡಿದ್ದಾರೆ ಎಂದು ದೂರಿದರು.

ಎರಡು ಹಂತದಲ್ಲಿ ಗ್ರಾಂ. ಪಂ ಚುನಾವಣೆ

ರಾಜ್ಯ ಚುನಾವಣಾ ಆಯೋಗವು ಗ್ರಾಮಪಂಚಾಯಿತಿ ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದು, 2 ಹಂತಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 5762 ಗ್ರಾಮಪಂಚಾಯಿತಿಯ, 92,121 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ 2 ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಮತದಾನ 22-12-20 ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ 27-12-20 ರಂದು ನಡೆಯಲಿದೆ. ಮರುಮತದಾನದ ಅವಶ್ಯಕತೆ ಇದ್ದರೆ ಮೊದಲ ಹಂತಕ್ಕೆ 24-12-20 ರಂದು ಮರುಮತದಾನ ನಡೆಯಲಿದ್ದು, ಎರಡನೇ ಹಂತಕ್ಕೆ 29-12-20 ರಂದು ಮರುಮತದಾನ ನಡೆಯಲಿದೆ.

ಎರಡೂ ಹಂತದ ಮತದಾನದ ಮತ ಎಣಿಕೆ ಕಾರ್ಯ 30-12-20 ರಂದು ನಡೆಯಲಿದೆ. ಚುನಾವಣಾ ನೀತಿ ಸಂಹಿತೆ 30-11-20 ರಿಂದ 31-12-20 ರವರೆಗೆ ಜಾರಿಯಲ್ಲಿರಲಿದೆ. ಒಟ್ಟು 2,96,15,048 ಮತದಾರರು ಈ ಬಾರಿ ಮತ ಚಲಾಯಿಸಲಿದ್ದು, ಗ್ರಾಮ ಪಂಚಾಯಿತಿ ಚುನಾಣೆಗಾಗಿ ಒಟ್ಟು 45,128 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

LEAVE A REPLY

Please enter your comment!
Please enter your name here