ಬಿ ಎಸ್ ವೈ ಗೆ ಸವಾಲು ಹಾಕಿದ ಹೆಚ್ ಡಿ ಕೆ..

0
224

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬಡವರಿಗೆ ಅನುಕೂಲ ಮಾಡುವ ಮನಸಿದ್ದರೆ ಋಣಮುಕ್ತ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಿ ಎಂದು ಸವಾಲು ಹಾಕಿದರು.

ಆ ಪುಣ್ಯಾತ್ಮ (ಯಡಿಯೂರಪ್ಪ) ಬಡವರ ಪರವಾಗಿ ಋಣಮುಕ್ತ ಕಾಯ್ದೆಯನ್ನು ಜಾರಿ ಮಾಡುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಯಾಕಂದರೆ ಅವರ ಬಳಿ ಇರುವವರು ಹಣವಂತರು, ಬಡ್ಡಿಕೋರರು, ಚುನಾವಣೆಗೆ ಹಣ ನೀಡುವವರೇ ಇದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿರವರು ಆರೋಪ ಮಾಡಿದ್ದಾರೆ.
ಸೋಮವಾರ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ದೇವಸ್ಥಾನದ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಹೆಚ್.ಡಿ.ಕೆ. ಕೆ ಆರ್ ಎಸ್‍ ನಲ್ಲಿ ಪ್ರಸಕ್ತ 7.5 ಟಿಎಂಸಿ ನೀರಿದ್ದು, ರಾಮನಗರ ಜಿಲ್ಲೆಗೆ ಶಾಶ್ವತ ಏತ ನೀರಾವರಿ ಮೂಲಕ ಕೆರೆ ಹಾಗೂ ಜಲಾಶಯಗಳನ್ನು ತುಂಬಿಸುವ ಸಲುವಾಗಿ ಸತ್ತೆಗಾಲದಿಂದ ಇಗ್ಗಲೂರು ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿಗೆ ನನ್ನ ಅವಧಿಯಲ್ಲಿ ಚಾಲನೆ ನೀಡಿದ್ದೆ . ಆದರೆ ಈಗಿನ ಸರ್ಕಾರ ಅದಕ್ಕೂ ಕೊಕ್ಕೆ ಹಾಕಲು ಹೊರಟಿದೆ, ನಾನು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅನರ್ಹ ಶಾಸಕರು ಮತ್ತು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಡ ವರ್ಗದ ಜನರನ್ನು ಲೇವಾದೇವಿದಾರರಿಂದ ಮುಕ್ತಗೊಳಿಸಲು ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ, ಈ ಕಾಯ್ದೆಯನ್ನು ಅನುಷ್ಠಾನ ತರುವ ಜವಾಬ್ದಾರಿಯು ಈಗ ಬಿಜೆಪಿ ಸರ್ಕಾರದ ಕೈಲಿದ್ದು, ಯಡಿಯೂರಪ್ಪನವರು ಬಡ ವರ್ಗದ ಜನರ ಪರವಿದ್ದರೆ ಈ ಕಾಯ್ದೆಯನ್ನು ಜಾರಿಗೊಳಿಸಲಿ ಎಂದು ತಿಳಿಸಿದರು .
ನನ್ನ ವಿರುದ್ಧ ಐಷಾರಾಮಿ ಹೊಟೆಲ್ ನಲ್ಲಿ ಆಡಳಿತ ನಡೆಸುತ್ತಾರೆ ಎಂದು ಆರೋಪ ಮಾಡುತ್ತಿದ್ದ ಕೆಲವರು ಶಾಂಗ್ರೀಲಾ ಹೋಟೆಲ್ ನಲ್ಲಿ ಬಿಲ್ಡರ್ ಗಳ ಸಭೆ ನಡೆಸುತ್ತಾರೆ ಎಂದು ಯಡಿಯೂರಪ್ಪನವರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು .

ಲೇಔಟ್ ಗಳನ್ನು ಮಾಡಿ ಬಡ ಜನರ ಕುಟುಂಬಗಳನ್ನು ಬೀದಿ ಪಾಲು ಮಾಡಿ ನಾನು ರಾಜಕೀಯಕ್ಕೆ ಬಂದಿಲ್ಲ, ಬಡ್ಡಿ ವ್ಯಾಪಾರ ಮಾಡಿ ಇಸ್ಪೀಟ್ ಕಿಂಗ್ ಪಿನ್ ಗಳನ್ನು ಬಳಸಿಕೊಂಡು ನಾನು ಸಿಎಂ ಸ್ಥಾನವನ್ನು ಅಲಂಕರಿಸಿರಲಿಲ್ಲ ಎಂದು ಪರೋಕ್ಷವಾಗಿ ಈಗಿನ ಮುಖ್ಯಮಂತ್ರಿ ವಿರುದ್ಧ ಮಾತನಾಡಿದರು.
ಬಡವರಿಗಾಗಿ ನಾನು ರಾಜಕೀಯದಲ್ಲಿ ಇದ್ದೇನೆ ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೆ. ಅಲ್ಲದೆ ನಾನು ನಂಬಿಕೆ ಇಟ್ಟವರೇ ನನಗೆ ಮೋಸ ಮಾಡಿದರು ಎಂದು ಪರೋಕ್ಷವಾಗಿ ಅನರ್ಹ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.

LEAVE A REPLY

Please enter your comment!
Please enter your name here