ಯಂಗ್‍ಮ್ಯಾನ್ ಒಬ್ಬನನ್ನು ಪಾರ್ಲಿಮೆಂಟ್‍ಗೆ ಕಳುಹಿಸಿದ್ದೇನೆ, ನಾನು ಪಕ್ಷ ಕಟ್ಟುತ್ತೇನೆ

0
490

ಯಂಗ್‍ಮ್ಯಾನ್ ಒಬ್ಬನನ್ನು ಸಂಸತ್ತಿಗೆ ಕಳುಹಿಸಿದ್ದೇನೆ. ಇನ್ನು ನನ್ನ ಕೆಲಸವೆನಿದ್ದರು ಪಕ್ಷ ಕಟ್ಟುವುದು ಮಾತ್ರ. ಜೆಡಿಎಸ್ ಪಕ್ಷವನ್ನು ಕೆಳಮಟ್ಟದಿಂದ ಮತ್ತೆ ಸಂಘಟಿಸುತ್ತೇನೆ. ಇನ್ನು ಮುಂಬರುವ ಉಪಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸೇರಿದಂತೆ ನಮ್ಮ ಕುಟುಂಬದಿಂದ ಯಾರು ಸ್ಪರ್ಧಿಸುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳನ್ನೇ ಚುನಾವಣೆಗೆ ಇಳಿಸುತ್ತೇನೆ ಎಂದು ಜೆಡಿಎಸ್ ವರಿಷ್ಠರಾದ ದೇವೇಗೌಡರು ಘೋಷಿಸಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ಪಕ್ಷದ ಅಧಿಕೃತ ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿದ ಅವರು, ಉಪಚುನಾವಣೆಗೆ ನಾವು ತಯಾರಿ ನಡೆಸಿದ್ದೇವೆ.

ಹುಣಸೂರು ವಿಧಾನಸಭಾ ಕ್ಷೇತ್ರದ ನಮ್ಮ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ನಮ್ಮ ಮನೆಯಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ಈ ಹಿಂದೆ ಅನೇಕರು ಜೆಡಿಎಸ್ ಚಿಹ್ನೆಯಡಿ ಗೆದ್ದು ಶಾಸಕರಾಗಿ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಹೀಗಾಗಿ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂದು ಕಾರ್ಯಕರ್ತರು ಮನವಿ ಮಾಡಿದ್ದಾರೆ. ಹೀಗಾಗಿ ಹುಣಸೂರಿನಲ್ಲಿ ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ. ಕಾರ್ಯಕರ್ತರು ಸಭೆ ಮಾಡಿ ಸಮರ್ಥ ಅಭ್ಯರ್ಥಿಯನ್ನು ಅವರೇ ಆಯ್ಕೆ ಮಾಡಿ ಕೊಡುತ್ತಾರೆ ಎಂದು ಎಚ್.ಡಿ. ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

ಇನ್ನು ಹುಣಸೂರಿನಿಂದ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಬೇಕೆಂದು, ನೀವು ಪಾರ್ಲಿಮೆಂಟ್‍ಗೆ ಹೋಗಬೇಕೆಂದು ಕಾರ್ಯಕರ್ತರು ಕೇಳಿಕೊಂಡಿದ್ದರು. ಆದರೆ ಯಂಗ್ ಮ್ಯಾನ್ ಒಬ್ಬನನ್ನು ಸಂಸತ್ತಿಗೆ ಕಳುಹಿಸಿದ್ದೇನೆ. ಇನ್ನು ನನ್ನ ಕೆಲಸವೆನಿದ್ದರು ಪಕ್ಷ ಕಟ್ಟುವುದು ಮಾತ್ರ ಎಂದು ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದ್ದೇನೆ ಅದೇ ರೀತಿ ಮುಂದಿನ ವಾರ ಕಾರ್ಯಕರ್ತರ ಒತ್ತಾಯದ ಮೇರೆಗೆ ಕೆ.ಆರ್.ಪೇಟೆಗೆ ಹೋಗುತ್ತಿದ್ದೇನೆ. ಅಲ್ಲಿಯೂ ಕೂಡಾ ಕಾರ್ಯಕರ್ತರು ಯಾರನ್ನು ಸೂಚಿಸುತ್ತಾರೋ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತೇವೆ ಎಂದರು.

LEAVE A REPLY

Please enter your comment!
Please enter your name here