ನಮ್ಮ ಪಕ್ಷದ ಕೊಡುಗೆ ಸ್ಮರಿಸದ ಉತ್ತರ ಕರ್ನಾಟಕದ ಜನತೆಯ ಬಗ್ಗೆ ಗೌಡರು ಹೇಳಿದ್ದೇನು…?

0
429

ಜೆಡಿಎಸ್ ಪಕ್ಷವನ್ನು ಕಾರ್ಯಕರ್ತರ ಮಟ್ಟದಿಂದಲೇ ಮತ್ತೆ ಸಂಘಟಿಸಲು ಪಣ ತೊಟ್ಟಿರುವ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು, ಇದೀಗ ತಮ್ಮ ಚಿತ್ತವನ್ನು ದಕ್ಷಿಣದಿಂದ ಉತ್ತರ ಕರ್ನಾಟಕದತ್ತ ನೆಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಗಳ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಇತ್ತೀಚಿಗೆ ನಡೆದ ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಉತ್ತರ ಕರ್ನಾಟಕ ಭಾಗಕ್ಕೆ ನನ್ನ ಮತ್ತು ಕುಮಾರಸ್ವಾಮಿ ಅವರ ಕೊಡುಗೆ ಹೆಚ್ಚಿದೆ.

ಆದರೆ ಅಲ್ಲಿನ ಜನರು ನಮ್ಮ ಪಕ್ಷದ ಮೇಲೆ ಅದ್ಯಾಕೋ ಪ್ರೀತಿ ತೋರಿಸುತ್ತಿಲ್ಲ. ಈ ಬಗ್ಗೆ ನನಗೆ ಅಪಾರ ನೋವಿದೆ. ನಮ್ಮ ಪಕ್ಷದ ಕೊಡುಗೆಯನ್ನು ಆ ಭಾಗದ ಜನ ಸ್ಮರಿಸಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಬಲಿಷ್ಠ ನೆಲೆ ಇಲ್ಲ. ಆದರೆ ನಾನು ಸುಮ್ಮನೆ ಕೂರುವುದಿಲ್ಲ. ನಮ್ಮ ಕೊಡುಗೆ ಸ್ಮರಿಸದಿದ್ದರೂ ನಾನು ಅಲ್ಲಿನ ಜನರನ್ನು ನಾನು ಯಾವತ್ತೂ ದೂಷಿಸುವುದಿಲ್ಲ. ಆ ಭಾಗದ ಜನರ ಹೃದಯ ಗೆದ್ದು ಅಲ್ಲಿಯೂ ಜೆಡಿಎಸ್ ಪಕ್ಷವನ್ನು ಬಲಿಷ್ಠಗೊಳಿಸುತ್ತೇನೆ. ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಅಲ್ಲಿಯ ಜನರಿಗೆ ತಿಳಿ ಹೇಳುತ್ತೇನೆ.

ಇನ್ನು ಸದ್ಯ ಭೀಕರ ನೆರೆ ಬಂದು ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆ ಆಗಿದೆ. ಇದೆಲ್ಲವೂ ಸರಿ ಹೋದ ಮೇಲೆ ಉತ್ತರ ಕರ್ನಾಟಕದಲ್ಲಿ 3-4 ಸಮಾವೇಶ ಮಾಡಲಿದ್ದೇನೆ. ಆ ನಂತರ ಸಂಘಟನೆ ಸೂಕ್ತ ವ್ಯವಸ್ಥೆ ಮಾಡುತ್ತೇನೆ ಎಂದರು.

LEAVE A REPLY

Please enter your comment!
Please enter your name here