ಜಿಎಸ್‍ಟಿ ಎಫೆಕ್ಟ್ ತಮಿಳುನಾಡಿನ 200 ಕಾರ್ಖಾನೆಗಳು ಬಂದ್..!

0
270

ಜಿಎಸ್‍ಟಿ ಎಫೆಕ್ಟ್ ನಿಂದ ತಮಿಳುನಾಡಿನ ಜವಳಿ ವಲಯ ತತ್ತರಿಸಿ ಹೋಗಿದೆ. 2016ರಿಂದೀಚೆಗೆ ತಮಿಳುನಾಡಿನ ಸುಮಾರು 200ಕ್ಕೂ ಹೆಚ್ಚು ಜವಳಿ ಕಾರ್ಖಾನೆಗಳಿಗೆ ಬೀಗ ಹಾಕಲಾಗಿದೆ. ವಿದೇಶಗಳಿಂದ ಆಮದಾಗುತ್ತಿರುವ ಕಡಿಮೆ ಬೆಲೆಯ ನೂಲು ಮತ್ತು ಉಡುಪು ಹಾಗೂ ದುಬಾರಿ ಬೆಲೆಯ ಕಚ್ಚಾವಸ್ತುವಿಗಿಂತ ಭಾರತದಲ್ಲಿ ತೆರಿಗೆ ಹೆಚ್ಚಾಗಿದೆ. ಹೀಗಾಗಿ ಜವಳಿ ಕಂಪನಿಗಳು ನಷ್ಟದ ಹಾದಿ ಹಿಡಿದಿವೆ. ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ಇದನ್ನು ಪುಷ್ಠೀಕರಿಸಿವೆ. 2019ರ ಎರಡನೇ ತ್ರೈಮಾಸಿಕದಲ್ಲಿ ಹತ್ತಿ ಉತ್ಪನ್ನಗಳ ರಫ್ತಿನಲ್ಲಿ ಶೇ 34.6ರಷ್ಟು ಕುಸಿತ ಕಂಡುಬಂದಿದೆ.

ಅಧಿಕ ತೆರಿಗೆ ನೀತಿಯಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದ ಕಾರಣ ತಿರುಪ್ಪೂರು ಹಾಗೂ ಕೊಯಮತ್ತೂರಿನ ಜವಳಿ ಕಾರ್ಖಾನೆಗಳಲ್ಲಿ ಹೇರಳವಾದ ದಾಸ್ತಾನು ಇದೆ. ಹೀಗಾಗಿ ಅನೇಕ ಕಾರ್ಖಾನೆಗಳನ್ನು ಮುಚ್ಚುವುದರಿಂದ ಸುಮಾರು 1 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನು ಬಟ್ಟೆಯ ನೂಲಿಗೆ ಬೇಡಿಕೆ ಕುಸಿದಿರುವುದಿಂದ ಇನ್ನಷ್ಟು ಕಾರ್ಖಾನೆಗಳು ಮುಂದಿನ ಕೆಲವೇ ತಿಂಗಳಲ್ಲಿ ಬಂದ್ ಆಗಲಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ಜವಳಿ ಉದ್ದಿಮೆಯ ಬಹುಪಾಲು ಕಂಪನಿಗಳು ಮುಂದಿನ ವರ್ಷ ಬಂದ್ ಹಾಗಲಿವೆ. ಇನ್ನು ಬಾಂಗ್ಲಾ, ಶ್ರೀಲಂಕಾ, ಚೀನಾ ಹಾಗೂ ಪಾಕಿಸ್ತಾನ ಸರ್ಕಾರಗಳ ಸಬ್ಸಿಡಿ ವ್ಯವಸ್ಥೆಯಿಂದ ಅಲ್ಲಿನ ಉದ್ಯಮಗಳು ಉತ್ತಮವಾಗಿವೆ. ಆದರೆ ಭಾರತದಲ್ಲಿ ಅಧಿಕ ತೆರಿಗೆ ನೀತಿಯಿಂದ ಜವಳಿ ಉದ್ಯಮ ನಷ್ಟದಲ್ಲಿವೆ ಎನ್ನಲಾಗಿವೆ.

LEAVE A REPLY

Please enter your comment!
Please enter your name here