ನೆಚ್ಚಿನ ನಟನ ಚಿತ್ರಗಳನ್ನು ನೋಡುತ್ತಾ ಬೆಳೆದೆ ಕೊನೆಗೆ ಅವರ ಜೊತೆಯಲ್ಲೇ ಅಭಿನಯಿಸಿದೆ : ನಟಿ ಪ್ರೇಮ.!

0
1033

ಸುಂದರವಾದ ಮುಖ ಮತ್ತು ಮುದ್ದಾದ ನಟನೆಯಿಂದ ೯೦ರ ದಶಕದಲ್ಲಿ ಕನ್ನಡಿಗರ ಮನೆಮಾತಾಗಿದ್ದ, ನಟಿ ಪ್ರೇಮ ಅವರ ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ವೃತ್ತಿ ಜೀವನದಲ್ಲಿ ಮೆಲುಗೈ ಸಾಧಿಸಿರುವ ಪ್ರೇಮ, ವೈವಾಹಿಕ ಜೀವನ ಕಣ್ಣಿರಾ ಕಥೆಯಾಗಿದೆ.

 

 

ನೆರವಿಂದ ಚೆಟ್ಟಿಚಾ ಪ್ರೇಮಾ ಅವರು ಜನವರಿ ೧ ೧೯೯೭ ರಲ್ಲಿ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಚೆಟ್ಟಿಚಾ ಕುಟುಂಬದಲ್ಲಿ ಜನಿಸಿದರು. ಮಹಿಳಾ ಸೇವಾ ಶಾಲೆಯಲ್ಲಿ ತಮ್ಮ ಶಾಲಾ ಮಟ್ಟದ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು ನಂತರ ಕೊಡಗಿನ ಮುರ್ನಾಡ್ ಜೂನಿಯರ್ ಕಾಲೇಜಿನಲ್ಲಿ ಪೂರ್ವ ವಿಶ್ವವಿದ್ಯಾಲಯ ಕೋರ್ಸ್ ಮುಗಿಸಿದರು. ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಪ್ರೇಮ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅಲ್ಲದೆ ರಾಷ್ಟೀಯ ಮಟ್ಟದಲ್ಲಿ ಹೈಜಂಪ್ ಮತ್ತು ವಾಲಿಬಾಲ್ ಸ್ಫರ್ದೆಗಳಲ್ಲಿ ಪ್ರತಿನಿಧಿಸಿದ್ದಾರೆ.

 

 

೧೯೯೫ ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು ಕನ್ನಡ ಸೇರಿದಂತೆ ತೆಲುಗು,ತಮಿಳು,ಮಲಯಾಳಂ ಬಾಷೆಗಳಲ್ಲಿ ಪ್ರಮುಖ ನಟಿಯಾಗಿ ಸುಮಾರು ೮೦ ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

೧೯೯೫ ರಲ್ಲಿ ಎಂ.ಎಸ್ ರಾಜಶೇಖರ್ ಅವರು ನಿರ್ದೇಶಿಸಿದ್ದ, ಶಿವರಾಜ್ ಕುಮಾರ್ ಅವರ ಅಭಿನಯದ ಸವ್ಯಾಸಾಚಿ ಎಂಬುವ ಕನ್ನಡ ಕಾದಂಬರಿ ಆಧಾರಿತ ಸಿನಿಮಾದಲ್ಲಿ ನಾಯಕಿ ನಟಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹಲಾವರು ಕನ್ನಡ ಚಿತ್ರಗಳಲ್ಲಿ ಪ್ರಮುಖ ನಟಿಯಾಗಿ ಕೆಲಸ ಮಾಡಿರುವ ನಟಿ ಪ್ರೇಮ, ವಾಣಿಜ್ಯಕವಾಗಿ ಯಶಸ್ವಿಯಾದ ಮತ್ತು ವಿಮಾರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದ ಮೂಲಕ ಪ್ರೇಮಾ ತಮ್ಮ ಸಿನಿ ಪಯಣವನ್ನು ಅದ್ದೂರಿಯಾಗೇ ಆರಂಭಿಸಿದರು. ಈ ಚಿತ್ರದಲ್ಲೂ ಕೂಡ ನಟ ಶಿವರಾಜ್ ಕುಮಾರ್ ಗೆ ಜೊಡಿಯಾಗಿ ಪ್ರೇಮಾ ಕಾಣಿಸಿಕೊಂಡಿದ್ದರು. ‘ಓಂ’ ಚಿತ್ರದಲ್ಲಿನ ಪ್ರೇಮಾ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಜೋಡಿ ಇಂದಿಗೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ನಂತರ ಮತ್ತೆ ನಮ್ಮೂರ ಮಂದಾರ ಹೂವೆ ಚಿತ್ರದ ಮೂಲಕ ಮತ್ತೆ ಶಿವಣ್ಣ ಅವರ ಜೊತೆ ಬಣ್ಣ ಹಚ್ಚಿದ ಪ್ರೇಮ, ಈ ಸಿನಿಮಾವು ಕೂಡ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

 

 

ಒಟ್ಟಿನಲ್ಲಿ ಮೊದಲ ಚಿತ್ರದ ಯಶಸ್ಸಿನ ನಂತರ ನಟಿ ಪ್ರೇಮಾ ಮತ್ತು ನಟ ಶಿವಣ್ಣ ಅವರಿಬ್ಬರ ಕಾಂಬಿನೇಶನ್ ಚಿತ್ರಗಳು ಕನ್ನಡದಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದವು.

 

 

ಆಶ್ಚರ್ಯಕರ ಸಂಗತಿ ಏನೆಂದರೆ ಪ್ರೇಮಾ ತಮ್ಮ ಕಾಲೇಜು ದಿನಗಳಲ್ಲಿ ನಟ ಶಿವರಾಜ್ ಕುಮಾರ್ ಅವರ‌ ಅಪ್ಪಟ ಅಭಿಮಾನಿಯಾಗಿದ್ದರಂತೆ. ಅಭಿಮಾನಿ ಮಾತ್ರವಲ್ಲ ಶಿವಣ್ಣನ ಅಭಿನಯದ ಶೈಲಿಗಳನ್ನು ಪ್ರೇಮಾ ಅನುಕರಣೆ ಮಾಡುತ್ತಿದ್ದರಂತೆ. ಕೊನೆಗೊಮ್ಮೆ ತನ್ನ ನೆಚ್ಚಿನ ನಟನೊಂದಿಗೆಯೇ ತೆರೆ ಹಂಚಿಕೊಳ್ಳುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಪ್ರೇಮಾ ಅದು ನನ್ನ ಬದುಕಿನ ಅದೃಷ್ಟದ ಗಳಿಗೆ ಎಂದು ತಮ್ಮ ಸಿನಿ ಬದುಕಿನ ಮೊದಲ ದಿನಗಳನ್ನು ನೆನೆಯುತ್ತಾರೆ.

 

 

ನೋಡ, ನೋಡುತ್ತಲೇ ಸಾಧನೆಯ ಉತ್ತುಂಗಕ್ಕೇರಿದ ಪ್ರೇಮಾ ಇಂದಿಗೂ ಅದೇ ವಿನಯವನ್ನು ಹೊಂದಿದ್ದು, ಶಿವಣ್ಣರ ಜೊತೆಯಲ್ಲೇ ನಟಿಸುವ ಅವಕಾಶ ದೊರೆತಿದ್ದು ನನ್ನ ಭಾಗ್ಯ ಇಂದಿಗೂ ಎಂದಿಗೂ ನಾನು ಶಿವಣ್ಣನ ಅಭಿಮಾನಿ ಎಂದಿದ್ದಾರೆ.

LEAVE A REPLY

Please enter your comment!
Please enter your name here