ಅಬ್ಬಬ್ಬಾ ಮದುವೆ ಮರೆವಣಿಗೆಯಲ್ಲಿ 1 ಕೋಟಿ ರೂ ಸುರಿಮಳೆ!

0
248

ಮದುವೆ ಎನ್ನುವುದು ಗಂಡು ಹೆಣ್ಣಿನ ಜೀವನದಲ್ಲಿ ಮುಖ್ಯವಾದ ಘಟ್ಟ, ಮತ್ತು ಜೀವಮಾನದ ಅತಿದೊಡ್ಡ ಕನಸು. ಈ ಸಂಸ್ಕಾರಗಳು ಮಾನವರ ಜೀವನದ ಅವಿಭಾಜ್ಯ ಅಂಶಗಳು, ಜನನದಿಂದ ಪ್ರಾರಂಭಗೊಂಡು, ತರ್ಪಣ ವಿಧಿಯವರೆಗೂ ಸಾಗುವ ಸಂಸ್ಕಾರಗಳಲ್ಲಿ ಮದುವೆ ಎಂಬುದು ಅತ್ಯಂತ ಪ್ರಮುಖವಾದದ್ದು. ಹಿಂದಿನ ಕಾಲದಲ್ಲಿ ಮದುವೆಯೂ ಹೆಚ್ಚಾಗಿ ಆಡಂಬರವಿಲ್ಲದೆ ಸರಳ ಮತ್ತು ಸಂಪ್ರದಾಯ ಬದ್ಧವಾಗಿ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ,ಜನರು ಆಂಡಬರಗಳನ್ನು ಬಯಸುತ್ತಾರೆ.

 

ದೊಡ್ಡ ದೊಡ್ಡ ಮದುವೆ ಮನೆಗಳಲ್ಲಿ ಅಥವಾ ಮೈದಾನದಲ್ಲಿ ವಿಜೃಂಭಣೆಯಿಂದ ಮದುವೆಯಾಗುತ್ತಾರೆ ಮತ್ತು ಊರಿನ ಸುತ್ತ ಮೆರವಣೆಗೆಯೂ ನಡೆಯುತ್ತದೆ. ಹೀಗೆ ಮದುವೆ ಮನೆಗೆ ವರನೊಬ್ಬ ಮೆರವಣಿಗೆ ಹೋಗುವ ಸಂದರ್ಭದಲ್ಲಿ ಹಣದ ಮಳೆಯನ್ನು ಹರಿಸಿ, ಶ್ರೀಮಂತಿಕೆಯ ಅನಾವರಣವಾಗಿದೆ. ಹೌದು, ಇದು ಅಂತಿಂಥ ಮದುವೆ ಮೆರವಣಿಗೆಯಲ್ಲ. ಈ ಮೆರವಣಿಗೆಯಲ್ಲಿ ಬರೋಬ್ಬರಿ 1 ಕೋಟಿಗೂ ಅಧಿಕ ಹಣದ ಮಳೆ ಸುರಿದಿದ್ದು, ಗುಜರಾತಿನ ಜಾಮ್ ನಗರದ ಈ ಅದ್ದೂರಿ ಮದುವೆ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ!

 

ಮದುವೆ ಮನೆಗೆ ವರ ಮೆರವಣಿಗೆ ಮೂಲಕ ಹೋಗುತ್ತಿದ್ದನು, ಇದೇ ವೇಳೆಯಲ್ಲಿ ವರನ ಕುಟುಂಬಸ್ಥರು, ಸಂಬಂಧಿಕರು ರಸ್ತೆಯದ್ದಕ್ಕೂ ಹಣದ ಮಳೆಯನ್ನು ಸುರಿಸಿ ಸಂಭ್ರಮಿಸಿದ್ದಾರೆ. ಚೇಲಾ ಗ್ರಾಮದ ಜಡೇಜಾ ಕುಟುಂಬಸ್ಥರು ಸೇರಿದ್ದ ಮದುವೆ ಇದಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. 2 ಸಾವಿರ ಮತ್ತು 500 ಗರಿಗರಿ ನೋಟುಗಳ ಕಂತೆಯನ್ನು ಹೂವಂತೆ ಎಸೆಯಲಾಗಿದೆ.

 

ಈ ರೀತಿ ಹಣವನ್ನು ಎಸೆದು ಸಂಭ್ರಮಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ ಮತ್ತು ಸಾಕಷ್ಟು ನೆಟ್ಟಿಗರು ಮತ್ತು ಸೆಲೆಬ್ರಿಟಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ಅಲ್ಲದೇ ವಧುವರನನ್ನು ಹೆಲಿಕಾಪ್ಟರ್ ಮೂಲಕ ಕರೆತಂದಿದ್ದು ವಿಶೇಷ! ಹೀಗೆ ಚೆಲ್ಲಾಡಿ ಸಂಭ್ರಮಿಸುವ ಬದಲು ಬಡ ಜನತೆಗೆ ಆಶ್ರಮಗಳಿಗೆ ಅಥವಾ ಸಮಾಜಮುಖಿ ಕೆಲಸಗಳಿಗೆ ಉಪಯೋಗಿಸಿದ್ದಿದ್ದರೆ, ವಧು ವರ ರನ್ನು, ತಮ್ಮ ಜೀವನ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು.

LEAVE A REPLY

Please enter your comment!
Please enter your name here