ಆರೋಗ್ಯ ಯಾರಿಗೆ ಬೇಡ ಹೇಳಿ ಎಲ್ಲರೂ ಉತ್ತಮ ಆರೋಗ್ಯಕ್ಕಾಗಿ ಏನೆಲ್ಲಾ ಮಾಡ್ತಾರೆ. ಮುಂಜಾನೆ ಎದ್ದು ಓಡೋದು, ನಡೆಯೋದು ವ್ಯಾಯಾಮ ಮಾಡಿ ಬೆವರು ಹರಿಸೋದು ಎಲ್ಲವೂ ಉತ್ತಮ ಆರೋಗ್ಯಕ್ಕಾಗಿ ಆದರೆ ಉತ್ತಮ ಆರೋಗ್ಯ ಲಭಿಸಲು ಇನ್ನು ಒಂದು ಮಾಡಿದ್ರೆ ಖಂಡಿತ ಆರೋಗ್ಯ ಸುಧಾರಿಸುತ್ತೆ.
ಆರೋಗ್ಯದ ಕಾಳಜಿ ಮಾಡುವವರು ನಾನಾ ಬಗೆಯ ಕಸರತ್ತು ಮಾಡುವುದು ಸಾಮಾನ್ಯವಾಗಿ ನೋಡುತ್ತೇವೆ. ಹೀಗೆ ಮಾಡುವ ಎಲ್ಲಾ ಕಸರತ್ತುಗಳು ಆರೋಗ್ಯಕ್ಕೆ ಪೂರಕವಾಗಿರೋದಿಲ್ಲ, ಉತ್ತಮ ಆರೋಗ್ಯ ಪಡೆಯಲು ನೈಸರ್ಗಿಕ ಕ್ರಮಗಳನ್ನು ಅನುಸರಿಸಬೇಕು. ನಮ್ಮ ಆರೋಗ್ಯವನ್ನು ಸಿರಯಾಗಿ ನೋಡಿಕೊಳ್ಳಲು ಮೊಳಕೆ ಕಾಳು ಪ್ರಮುಖ ಉಪಕಾರಿಯಾಗಿದೆ. ಬೆಳಗ್ಗಿ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿಯೇ ಮೊಳಕೆಕಾಳುಗಳನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ.

ಮೊಳಕೆ ಕಾಳು ಪೌಷ್ಟಿಕಾಂಶವನ್ನು ಹೆಚ್ಚಿಸುವುದಲ್ಲದೆ ದಿನಪೂರ್ತಿ ಉಲ್ಲಾಸದಿಮದಿರಲು ನೆರವಾಗುತ್ತದೆ. ಇದನ್ನು ಹಸಿಯಾಗಿ ಸೇವಿಸುವುದು ಒಂದು ವಿಧವಾದ್ರೆ ಬೇಯಿಸಿಯೂ ತಿನ್ನಬಹುದು. ಕೆಲವು ಸಲ ಹಸಿ ಕಾಳುಗಳಲ್ಲಿ ಬ್ಯಾಕ್ಟಿರಿ ಪ್ರಮಾಣ ಜಾಸ್ತಿ ಇರುವ ಕಾರಣ ಬೇಯಿಸಿ ತಿನ್ನುವುದು ಹೆಚ್ಚು ಸಮಂಜಸ.
ಮೊಳಕೆ ಕಾಳಿನಲ್ಲಿ ಹೆಸರುಕಾಳು ಪವರ್ಫುಲ್, ವಿಟಮಿನ್ ಸಿ ಪ್ರಮಾಣ ಹೆಚ್ಚಿದ್ದು ಪ್ರತಿರೋಧಕ ಶಕ್ತಿಯನ್ನು ನೀಡುತ್ತದೆ. ದೇಹದ ಮೇಲೆ ದಾಳಿ ಮಾಡುವ ಸೋಂಕು, ಕಾಯಿಲೆಗಳ ವಿರುದ್ಧ ಸಮರಸಾರುತ್ತವೆ. ಹೆಸರು ಮೊಳಕೆ ಕಾಳು ರಕ್ತ ಸಂಚಾರಕ್ಕೆ ಪುಷ್ಠಿ ನೀಡಿ ಸರಾಗಗೊಳಿಸುತ್ತದೆ, ಇದರಿಂದ ಪ್ರತಿ ಕೋಶ ಮತ್ತು ಅಂಗಾಂಶಗಳಿಗೆ ಆಮ್ಲಜನಕ ಪೂರೈಕೆಯಾಗುತ್ತದೆ. ಆರೋಗ್ಯಕ್ಕೆ ಇದು ಅಗತ್ಯವಾಗಿದೆ.

ಮುಂಜಾನೆ ವೇಳೆ ಮೊಳಕೆ ಕಾಳು ತಿನ್ನುವುದಿಂದ ಅಗತ್ಯವಿರುವ ಪೌಷ್ಠಿಕಾಂಶ ಲಭ್ಯವಾಗಲಿದೆ, ಮೆಟಾಫೋಲಿಸಮ್ ಹೆಚ್ಚಾಗಿ ಬೊಜ್ಜು ಕರಗುವಿಕೆಗೆ ಸಹಾಯ ಮಾಡುತ್ತದೆ. ಮೊಳಕೆ ಕಾಳಿನಲ್ಲಿ ಫೈಬರ್, ಪ್ರೋಟೀನ್ ಹೆಚ್ಚಾಗಿದ್ದು,್ತ ಕ್ಯಾಲೋರಿ ಅಂಶ ಅಲ್ಪ ಪ್ರಮಾಣದಲ್ಲಿ ಇರುವುದರಿಂದ ಹೊಟ್ಟೆತುಂಬಿದಂತೆ ಇದ್ದು ಹಸಿವಾಗದಂತೆ ಮಾಡುತ್ತೆ ಜೊತೆಗೆ ಫಿಟ್ ಆಗಿರಲು ಸಹಾಯಕವಾಗುತ್ತದೆ. ಇದನ್ನು ಮೊಳಕೆ ಕಾಳಿನ ಸೇವನ ಕ್ರಮದಲ್ಲಿ ಇದ್ದರೆ ಕ್ರಿಯಾಶೀಲತೆ ಹೆಚ್ಚುತ್ತದೆ.
ಮೊಳಕೆ ಕಾಳಿನ ಸೇವನೆ ಚರ್ಮದ ಕಾಂತಿಯನ್ನು ಹೆಚ್ಚಿಸಿ, ವೃದ್ಧಾಪ್ಯ ಲಕ್ಷಣಗಳನ್ನು ದೂರಮಾಡುತ್ತದೆ. ಹಾಲಿನಿಂದ ದೊರೆಯುವಷ್ಟು ಮೊಳಕೆ ಕಾಳಿನಿಂದಲೇ ಸಿಗುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಜೀರ್ಣಕ್ರಿಯೆಯ ತೊಂದರೆ ಇರುತ್ತದೆ, ಈ ಸಮಸ್ಯೆ ಇರುವವರು ಮೊಳಕೆಕಾಳುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ ಬಿಸಿ ನೀರು ಕುಡಿದರೆ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಇದನ್ನು ಸಾಯಂಕಾಲದ ಸಮಯದಲ್ಲಿಯೂ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ ಮತ್ತು ಇದರಿಂದ ಮಳೆಗಾಲದ ಕಾಯಿಲೆಗಳನ್ನು ದೂರವಿಡಲು ನೆರವಾಗುತ್ತದೆ. ಇದೇ ಬಗೆಯಲ್ಲಿ ಹುರುಳಿಕಾಳು ಮತ್ತು ವಿವಿಧ ರೀತಿಯ ಕಾಳುಗಳಲ್ಲಿ ಪೌಷ್ಟಿಕಾಂಶಗಳಿದ್ದು ದಿನಂಪ್ರತಿ ತಿನ್ನುವುದು ಉತ್ತಮ ಆರೋಗ್ಯಕ್ಕೆ ನೈಸರ್ಗಿಕ ವಿಧಾನಗಳಾಗಿವೆ, ಇದು ಯಾವುದೇ ಅಡ್ಡ ಪರಿಣಾಮ ಮಾಡುವುದಿಲ್ಲ ಏಕೆಂದರೆ ಆಹಾರದ ಕ್ರಮದಲ್ಲಿ ಈ ಕಾಳುಗಳು ಇದೆ. ಇದರ ಸಮರ್ಪಕ ಸೇವನೆ ಅಷ್ಟೆ ಮುಖ್ಯ.
