ತೂಕ ಕಡಿಮೆ ಮಾಡಲು ಸಹಾಯಕ ಹಸಿರು ಏಲಕ್ಕಿ !

0
205

ಏಲಕ್ಕಿ ಗಾತ್ರದಲ್ಲಿ ಸಣ್ಣದಾಗಿರಬಹುದು ಆದರೆ ಅದರ ಪ್ರಯೋಜನಗಳು ಮಾತ್ರ ಬಹಳ ದೊಡ್ಡದು. ಇದರಲ್ಲಿರುವ ಔಷಧೀಯ ಗುಣಗಳು ಹೆಚ್ಚು ಉಪಯುಕ್ತವಾಗಿವೆ. ಪ್ರತಿ ಅಡುಗೆ ಮನೆಯಲ್ಲಿಯೂ ಕಂಡು ಬರುವ ಹಸಿರು ಏಲಕ್ಕಿ ಕೆಲವೊಮ್ಮೆ ಬಾಯ್ ರುಚಿಯನ್ನು ಸರಿಪಡಿಸುತ್ತದೆ. ಕೆಲವೊಮ್ಮೆ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಇದಲ್ಲದೆ, ಇದು ಖೀರು, ಹಲ್ವಾ, ಪಲಾವ್ ನಂತಹ ಅನೇಕ ಖಾದ್ಯಗಳಿಗೆ ಬಳಸಿದಲ್ಲಿ ಪರಿಮಳವನ್ನು ನೀಡುತ್ತದೆ. ಹಸಿರು ಏಲಕ್ಕಿ ಸೇವಿಸಿದಲ್ಲಿ ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲಾರದು. ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.

 

 

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ ಆಯುರ್ವೇದದ ಪ್ರಕಾರ, ಹಸಿರು ಏಲಕ್ಕಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ವಿಷಕಾರಿ ಅಂಶಗಳು ದೇಹದ ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ ಮತ್ತು ನಮ್ಮ ಶಕ್ತಿಯ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕೆ ಏಲಕ್ಕಿ ಚಹಾ ಅತ್ಯುತ್ತಮವಾಗಿದೆ.

 

 

ಅಜೀರ್ಣವನ್ನು ತಡೆಯುತ್ತದೆ ಹಸಿರು ಏಲಕ್ಕಿ ಅಜೀರ್ಣವನ್ನು ತಡೆಯುತ್ತದೆ, ತೂಕ ಇಳಿಸಿಕೊಳ್ಳಲು ಕೂಡ ಸಹಾಯಕವಾಗಿದೆ. ದೇಹದಲ್ಲಿ ನೀರು ಸಂಗ್ರಹಗೊಳ್ಳಲು ಅವಕಾಶ ನೀಡಲ್ಲ. ದೇಹದಲ್ಲಿ ಮೂತ್ರದ ರೂಪದಲ್ಲಿ ನೀರು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಸಿರು ಏಲಕ್ಕಿಯ ಆಯುರ್ವೇದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಮೂತ್ರಪಿಂಡಗಳ ಸುಗಮ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ.

 

ಏಲಕ್ಕಿ ಕೊಬ್ಬನ್ನು ಕಡಿಮೆ ಮಾಡುವ ಗುಣ ಹೊಂದಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.

LEAVE A REPLY

Please enter your comment!
Please enter your name here