‘ಅಮೃಿತಾ ಪ್ರೀತಂ’ ಅವರನ್ನು ಸ್ಮರಿಸಿದ ಗೂಗಲ್ ಡೂಡಲ್..!!

0
160

ಗೂಗಲ್ ಸರ್ಚ್ ಎಂಜಿನ್ ಇಂದು ತನ್ನ ಡೂಡಲ್’ನಲ್ಲಿ ಪಂಜಾಬಿ ಲೇಖಕಿ, ಕವಿಯತ್ರಿಯ ೧೦೦ನೇ ಹುಟ್ಟುಹಬ್ಬದ ಅಂಗವಾಗಿ ಡೂಡಲ್ನಲ್ಲಿ ಸ್ಮರಿಸುವ ಮೂಲಕ ಗೌರವವನ್ನು ಸೂಚಿಸಿದೆ. ಆಗಸ್ಟ್ ೩೧ ರಂದು ಜನಿಸಿದ್ದ, ಪಂಜಾಬಿ ಲೇಖಕಿ, ಪ್ರಬಂಧ ಬರಹಗಾರರು ಹಾಗೂ ಕವಿಯತ್ರಿಯಾಗಿರುವ ಅಮೃಿತಾ ಪ್ರೀತಂ ಅವರು ಪಂಜಾಬಿ ಭಾಷೆಯ ೨೦ನೇ ಶತಮಾನದ ಕವಿಯತ್ರಿ ಎಂದು ಪ್ರಮುಖವಾಗಿ ಪ್ರಶಂಸಿಸಲಾಗಿದೆ. ಅಮೃಿತಾ ಪ್ರೀತಂ ಅವರು ಬರೆದಿರುವ ‘ಆಜ್ ಖಾನ್ ವಾರಿಸ್ ಶಾ’ ಕವಿತೆ ೧೯೪೭ ರಲ್ಲಿ ನಡೆದಿದ್ದ ಹತ್ಯಾಕಾಂಡದ ದುರಂತಗಳ ಬಗ್ಗೆ ತಿಳಿಸುತ್ತದೆ.

ಗೂಗಲ್ ಪ್ರಕಟಿಸಿರುವ ಡೂಡಲ್ ನಲ್ಲಿ ಪ್ರೀತಮ್ ಅವರು ಒಂದು ರೋಸ್ ಬೊಕ್ಕೆ ಮುಂದೆ ಕುಳಿತು ಡೈರಿಯಲ್ಲಿ ಬರೆಯುತ್ತಿರುವ ಚಿತ್ರಣವನ್ನು ಪೋಸ್ಟ್ ಮಾಡಿ ಗೌರವವನ್ನು ಸೂಚಿಸಿದೆ. ಈ ಚಿತ್ರಣದಲ್ಲಿ ‘ಕಲಾ ಗುಲಾಬ್’ ಎಂಬ ಅವರ ಆತ್ಮಕಥನದ ಒಂದು ಚಿತ್ರಣವಾಗಿದೆ. ಅಮೃತಾ ಅವರ ೨೮ ಪ್ರಕಟಿತ ಪ್ರಮುಖ ಕಾದಂಬರಿಗಳಲ್ಲಿ ಅವರು ಕೃತಿ ‘ಪಿಂಚರ್’ ಭಾರತದ ವಿಭಜನೆಯ ಹಿನ್ನೆಲೆಯಲ್ಲಿ ಬರೆದ ಅತ್ಯುತ್ತಮ ಸಾಹಿತ್ಯವೆಂದು ಪರಿಗಣಿಸಲಾಗಿದೆ ಹಾಗೂ ಈ ಕಾದಂಬರಿಯನ್ನು ೨೦೦೩ರಲ್ಲಿ ಪ್ರಶಸ್ತಿ ವಿಜೇತ ಚಿತ್ರ ‘ಪಿಂಜಾರ್’ ಆಗಿ ಮಾಡಲಾಯಿತು.

ಪ್ರೀತಂ ಅವರಿಗೆ ಹಲವಾರು ಪ್ರಶಸ್ತಿಗಳು ದೊರೆತಿದ್ದು, ೧೯೮೨ ರಲ್ಲಿ ಭಾರತೀಯ ಜ್ಞಾನಪೀಠ ಲಿಟರರಿ ಅವಾರ್ಡ್ ಮತ್ತು ೨೦೦೫ ರಲ್ಲಿ ಭಾರತೀಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮ ವಿಭೂಷಣ’ ಪ್ರಶಸ್ತಿ ಲಭಿಸಿದ್ದು, ಮತ್ತು ೨೦೦೪ರಲ್ಲಿ ಅತ್ಯಂತ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿತ್ತು.

LEAVE A REPLY

Please enter your comment!
Please enter your name here