‘ಭಾರತೀಯ ಬಾಹ್ಯಾಕಾಶ ಪಿತಾಮಹ’ ವಿಕ್ರಮ ಸಾರಾಭಾಯಿಗೆ ಗೂಗಲ್ ವಿಶೇಷ ಡೂಡಲ್ ಗೌರವ..!

0
302

‘ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ’ ಎಂದೇ ಜನಪ್ರಿಯರಾದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಗೂಗಲ್ ಇಂದು ವಿಶಿಷ್ಟ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

1919ರ ಆಗಸ್ಟ್ 12ರಂದು ಗುಜರಾತಿನ ಅಹ್ಮದಾಬಾದ್‍ನಲ್ಲಿ ಜನಿಸಿದ ವಿಕ್ರಮ ಸಾರಾಭಾಯಿ ಅವರು, ಭಾರತದಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಅವರು ತಮ್ಮ 20ನೇ ವಯಸ್ಸಿನಲ್ಲಿಯೇ ಕೇಂಬ್ರಿಡ್ಜ್ ವಿವಿಯಿಂದ ‘ಪ್ರಕೃತಿ ವಿಜ್ಞಾನದಲ್ಲಿ ಟ್ರೈಪಾಸ್’ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇನ್ನು 1942ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲದಿಂದ ಪಿಎಚ್‍ಡಿ ಪದವಿ ಪಡೆದಿದ್ದರು.

ನಂತರ 1947ರಲ್ಲಿ ಗುಜರಾತಿನ ಅಹ್ಮದಾಬಾದ್‍ನಲ್ಲಿ ಭೌತಿಕ ಸಂಶೋಧನಾ ಪ್ರಯೋಗಾಲಯವನ್ನು ವಿಕ್ರಮ್ ಸಾರಾಭಾಯಿ ಸ್ಥಾಪಿಸಿದ್ದರು. ರಷ್ಯಾ ಸ್ಪುಟ್ನಿಕ್ ಉಡಾವಣೆ ಬಳಿಕ ನಮ್ಮ ದೇಶಕ್ಕೂ ಬಾಹ್ಯಾಕಾಶ ಸಂಶೋಧನೆಯ ಅಗತ್ಯ ಇದೆ ಎಂಬುದನ್ನು ಭಾರತ ಸರಕಾರಕ್ಕೆ ಮನವರಿಕೆ ಮಾಡಿದ ಮೇಲೆ ತಾವೇ ಬಾಹ್ಯಾಕಾಶ ಸಂಶೋಧನೆ ಆರಂಭಿಸಿದ್ದರು. ಬಳಿಕ 1962ರಲ್ಲಿ ‘ಇಂಡಿಯನ್ ನ್ಯಾಶನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್’ ಹುಟ್ಟುಹಾಕಿದ್ದರು. ಬಳಿಕ ಇದಕ್ಕೆ ಇಸ್ರೋ ಎಂದು ನಾಮಕರಣ ಮಾಡಲಾಯಿತು. ಇಂದು ನಮ್ಮೆಲ್ಲರ ಹೆಮ್ಮೆಯ ಸಂಸ್ಥೆಯ ಇಸ್ರೋ ಸ್ಥಾಪನೆಯ ಹಿಂದೆ ಇವರ ಕೊಡುಗೆ ಅಪಾರ.

ಇನ್ನು ಇಸ್ರೋ ಸ್ಥಾಪನೆಯ ನಂತರ ಭಾರತದ ಮೊಟ್ಟ ಮೊದಲ ಉಪಗ್ರಹ ಆರ್ಯಭಟ ಸಂಶೋಧನಾ ತಂಡದ ಜತೆಗೂ ವಿಕ್ರಮ ಸಾರಾಭಾಯಿ ಕಾರ್ಯನಿರ್ವಹಿಸಿದ್ದರು. ಆದರೆ 1975ರಲ್ಲಿ ಆರ್ಯಭಟ ಉಡ್ಡಯನ ಆಗುವ ಮುನ್ನವೇ ಸಾರಾಭಾಯಿ ಇಹಲೋಕ ತ್ಯಜಿಸಿದ್ದರು. ಭಾರತೀಯ ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಗಾಗಿ ಸಾರಾಭಾಯಿ ನಿಧನದ ಬಳಿಕ 1966ರಲ್ಲಿ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿತ್ತು. 1972ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಕೂಡಾ ಸಾರಾಭಾಯಿ ಮುಡಿಗೇರಿತ್ತು. ಇವತ್ತು ಇಸ್ರೋ ನಡೆಸುತ್ತಿರುವ ಅನೇಕ ಪ್ರಯೋಗಗಳು ಹಿಂದೆ ವಿಕ್ರಮ ಸಾರಾಬಾಯಿ ಅವರು ಕಂಡ ಕನಸುಗಳೇ ಆಗಿವೆ.

LEAVE A REPLY

Please enter your comment!
Please enter your name here