ಪೈಲ್ವಾನ್ ,ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್, ಅಭಿನಯದ ಕನ್ನಡದ ಬಹು ನಿರೀಕ್ಷಿತ ಚಿತ್ರ ! ಸದ್ಯ ಟೀಸರ್, ಟ್ರೇಲರ್ ಮತ್ತು ಸಾಂಗ್ಸ್ ಗಳಿಂದ ಕನ್ನಡದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದೆ .. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ ! ಬಲ ಇದೆ ಅಂತಾ ಹೊಡೆದಾಡೋನು ರೌಡಿ, ಆದ್ರೆ ಬಲವಾದ ಕಾರಣಕ್ಕೆ ಹೊಡೆದಾಡೋನು ಯೋಧ ಅನ್ನೋ ಪಂಚಿಂಗ್ ಡೈಲಾಗ್ಗಳು ಪೈಲ್ವಾನನ ತಾಕತ್ತು ಏನು ಅನ್ನೋದನ್ನು ಸಾರಿ ಹೇಳ್ತಿದೆ.

ಇನ್ನು ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಕುಸ್ತಿ ಪಟುವಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ..
ಇನ್ನು ಟ್ರೈಲರ್ ನಲ್ಲಿ ಸುದೀಪ್ ರವರ ಕುಸ್ತಿ ಮತ್ತು BGM ಚಿತ್ರಕ್ಕೆ ಸಾಕಷ್ಟು ಮೆರುಗು ತಂದಿದೆ!
ದೇಸಿ ಶೈಲಿಯ ಕುಸ್ತಿಪಟುವಾಗಿ ಜೊತೆಗೆ ಬಾಕ್ಸರ್ ಆಗಿ ಕಿಚ್ಚ ಡಬಲ್ ಶೇಡ್ನಲ್ಲಿ ಅಬ್ಬರಿಸಿದ್ದಾರೆ.
ಇನ್ನು ಮೆಂಟರ್ ಆಗಿ ಬಾಲಿವುಡ್ ನ ಸುನೀಲ್ ಶೆಟ್ಟಿ ಪೈಲ್ವಾನನಿಗೆ ಸಾಥ್ ನೀಡಿದ್ದಾರೆ.
ಸಿನಿಮಾ ಮೇಕಿಂಗ್ ಹಾಗೂ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತದೆ. ಸದ್ಯ ಟ್ರೈಲರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಖತ್ ರೆಸ್ಪಾನ್ಸ್ ಸಿಕ್ತಿದೆ..
ಇನ್ನು ಪೈಲ್ವಾನ್ ಕನ್ನಡ ಮಾತ್ರವಲ್ಲದೆ ತೆಲುಗು , ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ..
ಇನ್ನು ಚಿತ್ರಕ್ಕೆ ಕೃಷ್ಣ ಅವರು ಆಕ್ಷನ್ ಕಟ್ ಹೇಳಿದ್ದು, ಸುದೀಪ್ ಅವರ ಬಾಕ್ಸಿಂಗ್ ಲುಕ್ಕಿಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ ! ಇನ್ನು ಸಿನಿಮಾದ ‘ಕನ್ಯಾಮಣಿಯೆ ಕಣ್ಣು ಹೊಡಿಯೆ ಸಾಂಗ್ ಈಗಾಗಲೇ ಪಡ್ಡೆ ಹುಡುಗರ ಬಾಯಲ್ಲಿ ಸದಾ ಗುನುಗುವಂತೆ ಮಾಡಿದೆ ..
ಇಷ್ಟೆಲ್ಲ ವಿಶೇಷತೆ ತುಂಬಿಕೊಂಡಿರುವ ಪೈಲ್ವಾನ್ ಸೆಪ್ಟೆಂಬರ್ 15 ರಂದು ಥಿಯೇಟರ್ ಗೆ ಲಗ್ಗೆ ಇಡಲಿದೆ !