ಕೊನೆಗೂ ಕೂಡಿಬಂತು `ಬಾಹುಬಲಿ’ಗೆ ಕಂಕಣಭಾಗ್ಯ : ಪ್ರಭಾಸ್ ಕೈ ಹಿಡಿಯಲಿದ್ದಾರೆ ಈ ಯುವತಿ…!

0
610

ಟಾಲಿವುಡ್ ಯಂಗ್ ರೆಬಲ್ ಸ್ಟಾರ್, ಟಾಲಿವುಡ್ ನ ಬಾಹುಬಲಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ನಟ ಪ್ರಭಾಸ್ ಯಾರಿಗೆ ಗೊತ್ತಿಲ್ಲ ಹೇಳಿ.? 2015 ರಲ್ಲಿ ಬಾಹುಬಲಿ ಸಿನಿಮಾ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಯೂರಿದಂತ ನಟ. ತಮ್ಮ ನಟನಾ ಶೈಲಿಯಿಂದಲೇ ಪ್ರತಿಯೊಬ್ಬ ಸಿನಿ ರಸಿಕರನ್ನು ಸಂಪಾದಿಸಿರುವ ಪ್ರಭಾಸ್ ಸದ್ಯ ಅವರ ನೆಚ್ಚಿನ ಅಭಿಮಾನಿಗಳಿಗೆ ಸಿಹಿ ಸುದ್ಧಿಯನ್ನು ನೀಡಿದ್ದಾರೆ.

 

 

ಕಳೆದ 4-5 ವರ್ಷಗಳಿಂದ ಪ್ರಭಾಸ್ ಅವರ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದದ್ದು, ಅವರ ಸಿನಿಮಾಗಳಿಗಲ್ಲ ಬದಲಾಗಿ ಅವರ ಮದುವೆಗಾಗಿ.! ಪ್ರಭಾಸ್ ಮದುವೆ ಯಾವಾಗ.? ಹುಡುಗಿ ಯಾರು ಎಂಬ ಹತ್ತಾರು ಪ್ರಶ್ನೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದರು.

 

 

ಇದಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಂತ ವಿಷಯ ಎಂದರೆ ಟಾಲಿವುಡ್ ಬ್ಯೂಟಿ, ಮುದ್ದು ಮುಖದ ಚೆಲುವೆ ನಟಿ ಅನುಷ್ಕಾ ಶೆಟ್ಟಿ ಅವರ ಜೊತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಪ್ರಭಾಸ್ ಅವರ ಅಭಿಮಾನಿಗಳನ್ನು ಕುತೂಹಲಕ್ಕೆ ದೂಡಿತ್ತು. ಈ ವಿಚಾರ ಕುರಿತು ಸ್ವತಃ ಪ್ರಭಾಸ್ ಅವರೇ ಸುದ್ದಿಗೋಷ್ಟಿಯಲ್ಲಿ ಇದು ಸುಳ್ಳು ವದಂತಿ. ಆ ರೀತಿ ಏನು ಇಲ್ಲ.! ನಾವಿಬ್ಬರು ಉತ್ತಮ ಗೆಳೆಯರು ಎಂದು ಸ್ಪಷ್ಟವಾಗಿ ಹೇಳಿದ್ದರು.

 

 

ಪ್ರಭಾಸ್ ಅವರ ಅಭಿಮಾನಿಗಳು ಈ ವಿಚಾರ ಕೇಳಿ ಬಹಳ ನಿರಾಸೆಯಾಗಿದ್ದಂತು ನಿಜ. ಸದ್ಯ ಪ್ರಭಾಸ್ ಅವರಿಗೆ ವಯಸ್ಸು 40 ಆದರೂ ಕೂಡ ಇನ್ನೂ 25ರ ಯುವಕನಂತೆ ಕಾಣತ್ತಾರೆ. ಯಾವ ವಿಚಾರಕ್ಕಾಗಿ ತಮ್ಮ ಅಭಿಮಾನಿಗಳು ನಿರಂತರವಾಗಿ ಕಾಯುತ್ತಿದ್ದರೊ ಅದಕ್ಕೆ ಸದ್ಯ ಸಿಹಿಯಾದ ಉತ್ತರವನ್ನು ಕೊಟ್ಟಿದ್ದಾರೆ ಎನ್ನಬಹುದು.

 

 

ಡಾರ್ಲಿಂಗ್ ಪ್ರಭಾಸ್ ಇದೇ ಡಿಸೆಂಬರ್ 31ಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಲು ಸಜ್ಜಾಗಿದ್ದಾರೆ ಎಂಬುದು ತಿಳಿದುಬಂದಿದೆ. ಅದೂ ಕೂಡ ತಮ್ಮ ವಿವಾಹದ ವಿಚಾರ ಎಂಬುದು ಇನ್ನೂ ವಿಶೇಷವಾಗಿದೆ. ಈ ಒಂದು ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪೀಕ್ ಆಗಿದ್ದು, ಪ್ರಭಾಸ್ ಅವರು ನಿರ್ದೇಶಕ ರಾಧಾಕೃಷ್ಣ ಕುಮಾರ್ ಅವರ ಹೊಸ ಸಿನಿಮಾದಲ್ಲಿ ಜನವರಿ 3ನೇ ದಿನದಿಂದ ನಿರತರಾಗಲಿದ್ದಾರೆ.

 

 

ಪ್ರಭಾಸ್ ಅವರು ಅಮೇರಿಕದ ಉದ್ಯಮಿಯೊಬ್ಬರ ಮಗಳನ್ನು ಪ್ರೀತಿಸುತ್ತಿದ್ದು ಅವರನ್ನು ವರಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here