ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿ !

0
287

ಊರಿನಿಂದ ಪಟ್ಟಣಕ್ಕೆ ವಿದ್ಯಾಬ್ಯಾಸಕ್ಕೆಂದು ಬರುವ ಬಡ ವಿದ್ಯಾರ್ಥಿಗಳು,10 ನೇ ತರಗತಿ ಮಕ್ಕಳಕಿಗೆ ವಿತರಿಸಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟವನ್ನು ತಮಗೂ ನೀಡಬೇಕೆಂದು ಪಿಯುಸಿ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆಯಂತೆ ಮುಂದಿನ ವರ್ಷದಿಂದ ಪಿಯುಸಿ ವಿದ್ಯಾರ್ಥಿಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುಲು ಚಿಂತನೆ ನಡೆಸುತ್ತಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇಂದು ಎಸ್.ಸುರೇಶ್ ಕುಮಾರ್ ಅವರು ಅದಮ್ಯ ಚೇತನ ಮತ್ತು ಶ್ರೀ ಸತ್ಯಸಾಯಿ ಅನ್ನಪೂರ್ಣ ವತಿಯವರು ಆಯೋಜಿಸಿದ್ದ ಪೌಷ್ಟಿಕಾಂಶಯುಕ್ತ ಹಾಲು ನೀಡುವ ಯೋಜನೆಗೆ ಚಾಲನೆ ನೀಡಿದರು. ಬಳಿಕ ಸುದ್ಧಿಗೋಷ್ಟಿಗಳೊಂದಿಗೆ ಮಾತಾನಾಡಿದ ಅವರು ಈ ವಿಷಯವನ್ನು ತಿಳಿಸಿದರು. ಈ ವೇಳೆ ಮಾತಾನಾಡಿದ ಸುರೇಶ್ ಅವರು 10 ನೇ ತರಗತಿ ಮಕ್ಕಳಿಗೆ ದೊರಕುತ್ತಿರುವ ಮಧ್ಯಾಹ್ನದ ಬಿಸಿಯೂಟವನ್ನು ಪಿಯುಸಿ ಮಕ್ಕಳಿಗೂ ವಿತರಿಸಬೇಕು ಎಂದು ಎಲ್ಲೆಡೆ ಸಾಕಷ್ಟು ಬೇಡಿಕೆಗಳು ಬರತ್ತಲೆ ಇದ್ದವು.

ಹಾಗಾಗಿ ಬಿಸಿಯೂಟ ವನ್ನು ವಿತರಿಸುವ ಕುರಿತು ಶಿಕ್ಷಣ ಇಲಾಖೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು. ಹಾಗೆಯೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಈ ಕುರಿತು ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಸಂತಸ ಮತ್ತು ಉಪಯೋಗವಾಗುತ್ತದೆ ಎಂದು ಸಾಕಷ್ಟು ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here