ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ದರ್ಜೆಯ ಗರಿಷ್ಠ ಪೊಲೀಸ್ ಹುದ್ದೆಗಳ ನೇಮಕಾತಿಗೆ ಮೂರು ವರ್ಷಗಳ ಗಡುವನ್ನು ರಾಜ್ಯ ಸರ್ಕಾರ ನಿಗದಿಪಡಿಸಿಕೊಂಡಿದೆ ಎಂದು ಹೈಕೋರ್ಟ್ ಗೆ ಸರ್ಕಾರ ಪ್ರಮಾಣ ಪತ್ರವನ್ನು ಸಲ್ಲಿಸಿದೆ.
ರಾಜ್ಯದಲ್ಲಿ ಖಾಲಿ ಇರುವ 2,868 ಡಿವೈಎಸ್ ಪಿ, ಎಎಸ್ಐ, ಮುಖ್ಯ ಪೇದೆ ಹುದ್ದೆಗಳನ್ನು ಸೇವಾ ಬಡ್ತಿ ಮೂಲಕ ಹಾಗೂ 16,838 ಪಿಎಸ್ ಐ ಮತ್ತು ಇತರೆ ದರ್ಜೆಯ ಹುದ್ದೆಗಳನ್ನು 2019ರ ನವೆಂಬರ್ ನಿಂದ 2022 ರ ಮಾರ್ಚ್ ನಡುವೆ ನೇಮಕಾತಿ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
ಇನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪೊಲೀಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಸದ್ಯದಲ್ಲೇ 1 ಸಾವಿರ ಪಿಎಸ್ ಐ ಸೇರಿದಂತೆ 7 ಸಾವಿರ ಪೊಲೀಸ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದರು.