ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಮದ್ಯದಿಂದ ಬಹು ಕೋಟಿ ಆದಾಯ ಬರುತ್ತದೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವ ವಿಷಯ ಎನ್ನಬಹುದು. ಮದ್ಯ ಮಾರಾಟ ಮಾಡುವ ಮಧ್ಯ ಅಂಗಡಿಗಳ ವ್ಯವಹಾರ ವಹಿವಾಟುಗಳ ಬಗ್ಗೆ ಸೂಕ್ತ ವಿವರಣೆಗಳು ಹಾಗೂ ದಾಖಲೆಗಳನ್ನು ಆಯಾ ಮಾಲಿಕರು ಒದಗಿಸಿರುತ್ತಾರೆ. ಈ ಹಿಂದೆಯೇ ಮದ್ಯ ಮಾರಾಟದ ವಿಚಾರ ಕುರಿತು ಸರಕಾರ ಬಹುದೊಡ್ಡ ಶಿಸ್ತಿನ ಕ್ರಮ ಕೈಗೊಂಡಿದ್ದು, ೧೧ ಗಂಟೆಯ ಬಳಿಕ ಮದ್ಯದಂಗಡಿಗಳು ಮಾರಾಟವನ್ನು ನಿಷೇಧಿಸಬೇಕೆಂದು. ಆದರೆ ಅದು ಕೇವಲ ಕೆಲ ಸಮಯದವರೆಗೆ ಮಾತ್ರ ಪ್ರಕ್ರಿಯೆಯಲ್ಲಿದ್ದು, ಬಳಿಕ ಮತ್ತೆ ಎಂದಿನಂತೆ ಅನುಸರಣೆಗೊಂಡಿತು.

ಮದ್ಯ ಖರೀದಿ ಮಾಡಲು ಗ್ರಾಹಕರಿಗೆ ಆಧಾರ್ ಕಡ್ಡಾಯ ಎಂಬ ಸುದ್ದಿ ಕೇಳಿ ಬಂದಿತ್ತು. ಈ ವಿಚಾರ ಪ್ರಸ್ತಾಪನೆಗೊಂಡಾಗ ಗ್ರಾಹಕರು ತೀರಾ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಂಗತಿ ಕುರಿತು ಮಾತನಾಡಿದ ‘ಅಬಕಾರಿ ಸಚಿವ ಹೆಚ್ .ನಾಗೇಶ್’ ಅವರು ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯವಿಲ್ಲ ಎಂಬ ಮಾಹಿತಿಯನ್ನು ಸ್ಪಷ್ಟಪಡಿಸಿದ್ದಾರೆ. ಹೌದು, ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಸಚಿವ ಹೆಚ್. ನಾಗೇಶ್ ಗ್ರಾಹಕರಿಗೆ ಮದ್ಯ ಖರೀದಿ ಮಾಡಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿದರೆ ಇಲಾಖೆಗೆ ಆದಾಯ ಹೇಗೆ ಬರುತ್ತದೆ.? ಬರುವುದಾದರೂ ಹೇಗೆ.? ಉತ್ತಮ ಗುಣಮಟ್ಟದ ಮದ್ಯ ಕೊಡುವ ನಿಟ್ಟಿನಲ್ಲಿ ಇಲಾಖೆ ಶ್ರಮಿಸಲಿದೆ. ಇಲಾಖೆಗೆ ಯಾವ ರೀತಿಯ ಸೂಚನೆ ಪರಿಶೀಲನೆ ನೀಡಬೇಕು ಎಂಬುದನ್ನು ಸುತ್ತೋಲೆ ಮೂಲಕ ಈಗಾಗಲೇ ನೀಡಿದ್ದೇವೆ ಎಂದಿದ್ದಾರೆ. ಮದ್ಯ ಮಾರಾಟದ ಆದಾಯ ಹೆಚ್ಚಿಸಲು ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಇಲಾಖೆ ಈಗ ಯೋಚಿಸಿದೆ ಹಾಗೂ ಶೀಘ್ರದಲ್ಲೇ ಜಾರಿಗೊಳಿಸಲಿದೆ.

ಕೆಲವರಿಗೆ ಮದ್ಯದ ಅಂಗಡಿಗಳು ಅವರು ಇರುವ ಸ್ಥಳದಿಂದ ಬಹಳ ದೂರವಿರುತ್ತದೆ ಇಂಥ ಸಮಸ್ಯೆಗಳಿಗೆ ಪರಿಹಾರ ನೀಡುವ ಯೋಜನೆ ಮಾಡಿದ್ದು, ಮನೆ ಬಾಗಿಲಿಗೆ ಮೊಬೈಲ್ ವೈನ್ ಶಾಪ್ ಗಳು ಬಂದು ಡೆಲಿವರಿ ಮಾಡಲಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರಲಿದೆ ಎಂಬುದು ಒಂದು ಚಿಂತೆಯಾಗಿದೆ. ಈ ಸಂಚಾರಿ ವೈನ್ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು. ಮದ್ಯಪಾನ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಸದ್ಯ ಯಾವುದೇ ಚಿಂತನೆ ಇಲ್ಲ.!

೨೦೧೮-೧೯’ರಲ್ಲಿ ೧೯,೭೫೦ ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿತ್ತು. ಆದರೆ ೧೯,೯೪೩ ಸಾವಿರ ಕೋಟಿ ಗಳಿಸುವಲ್ಲಿ ಸಾಧನೆ ಮಾಡಿದ್ದೇವೆ. ಪ್ರಸಕ್ತ ೨೦೧೯-೨೦ನೇ ಸಾಲಿನಲ್ಲಿ ೨೧,೦೦೦ ಸಾವಿರ ಕೋಟಿ ಗುರಿ ನಿಗದಿಪಡಿಸಿದ್ದೇವೆ. ಗಾಂಜಾ ಮತ್ತು ಮಾದಕ ವಸ್ತುಗಳ ಬಳಕೆಗೆ ಸೂಕ್ತ ಕಡಿವಾಣ ಹಾಕಲಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)