ಮಳೆಯ ರೌದ್ರ ಆರ್ಭಟದಿಂದ ಉತ್ತರ ಕರ್ನಾಟಕ ಸಂಪೂರ್ಣ ನಲುಗಿದೆ. ಈಗಾಗಲ್ಲೇ ಮಳೆಯ ಅವಾಂತರದಿಂದ ರಾಯಚೂರು,ವಿಜಯಪುರ, ಬೆಳಗಾವಿ ಸೇರಿದಂತೆ ಮಲೆನಾಡು, ಕರಾವಳಿ ಭಾಗವು ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಉತ್ತರ ಕರ್ನಾಟಕ ಜನತೆ ಸಾಕಷ್ಟು ತೊಂದರೆಗೆ ಸಿಲುಕಿದ್ದು, ಹಲವರು ಮನೆ, ಮಟ ಎಲ್ಲ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ದಿನ ನಿತ್ಯದ ಆತ್ಯವಶ್ಯಕ ವಸ್ತುಗಳಿಗೆ ಪರದಾಡುವಂತ ಗಂಭೀರ ಪರಿಸ್ಥಿತಿ ಎದುರಾಗಿದೆ ಎನ್ನಬಹುದು.
ಪ್ರವಾಹದಿಂದ ಉಂಟಾಗುತ್ತಿರುವ ತೊಂದರೆಗಳಿಂದ ಜನರನ್ನು ರಕ್ಷಿಸುವಂತೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಪಿಚ್ಚಗುಂಟ್ಲಹಳ್ಳಿ ಗ್ರಾಮದ ಆದಿ ದೇವತೆಗೆ `108′ ಬಗೆಯ ತಿನಿಸುಗಳನ್ನು ಮಾಡಿ, ತಾಯಿಗೆ ಅರ್ಪಿಸುವ ಮೂಲಕ ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ನೆರವು ನೀಡಲಿ ಎಂಬ ಉದ್ದೇಶದಿಂದ ಗ್ರಾಮದ ಎಲ್ಲ ಜನರು ಒಗಟ್ಟಿನಲ್ಲಿ ಸೇರಿಕೊಂಡು ದೇವಿಗೆ ವಿಶೇಷ ಪೂಜೆಯನ್ನು ನರೆವರಿಸದ್ದಾರೆ.