ಅಕ್ರಮ ಸಂಬಂಧ ಬಯಸುವ ವಿವಾಹಿತರ ಪೈಕಿ ಬೆಂಗಳೂರಿಗರೇ ಮೊದಲ ಸ್ಥಾನ

0
627

ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ. ಇಲ್ಲೊಂದು ವೆಬ್ ಸೈಟ್ ಬೆಂಗಳೂರಿನ ವಿವಾಹಿತರ ಬಗ್ಗೆ ಅಂಕಿ ಸಂಖ್ಯೆಯೊಂದನ್ನು ನೀಡುತ್ತಿದೆ. ಇದರ ಪ್ರಕಾರ, ಅಕ್ರಮ ಸಂಬಂಧ ಬಯಸುವ ವಿವಾಹಿತರ ಪೈಕಿ ಬೆಂಗಳೂರಿಗರೇ ಮೊದಲ ಸ್ಥಾನದಲ್ಲಿದ್ದಾರಂತೆ. ಗ್ಲೀಡೆನ್ (Gleeden) ಎಂಬ ವೆಬ್ ಸೈಟೊಂದರ ಮಾಹಿತಿ ಈ ಅಂಶವನ್ನು ತಿಳಿಸುತ್ತಿದೆ. ಇದು ಹೇಳಿ ಕೇಳಿ ಆನ್ ಲೈನ್ ಕಾಲ. ಎಲ್ಲವೂ ಆನ್ ಲೈನಿನಲ್ಲೇ ಸಿಗುತ್ತೆ. ನಿಮಗಿಷ್ಟವಾಗುವ ಅಪರಿಚಿತರೊಂದಿಗೆ ಡೇಟಿಂಗ್ ಮಾಡಲೂ ಸಹ ಈಗ ಆನ್ ಲೈನ್ ವೆಬ್ ಸೈಟುಗಳು ಕಾರ್ಯನಿರ್ವಹಿಸುತ್ತಿವೆ.

ಈ ಗ್ಲೀಡೆನ್ ಎಂಬ ವೆಬ್ ಸೈಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ವಿವಾಹಿತರಿಗೆ ಅಕ್ರಮ ಸಂಬಂಧ ಕುದುರಿಸುವುದು ಈ ವೆಬ್ ಸೈಟಿನ ದಂಧೆ. ಇದಕ್ಕಾಗಿ ವಿವಾಹಿತರು ಈ ವೆಬ್ ಸೈಟಿಗೆ ಭೇಟಿ ನೀಡಿ, ಆನ್ ಲೈನಿನಲ್ಲೇ ತಮ್ಮ ಹೆಸರು ನೋಂದಾಯಿಸಬೇಕಾಗುತ್ತದೆ. ಬಹುತೇಕ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ ಈ ವೆಬ್ ಸೈಟ್, ಪುರುಷರ ಹೆಸರು ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಮುಂಚೆ ಆ ಪುರುಷನ ಪೂರ್ವಾಪರ ವಿಚಾರಿಸಿ, ನಂತರ ನೋಂದಣಿ ಮಾಡಿಕೊಳ್ಳುತ್ತದೆ. ವಿವಾಹಿತ ಮಹಿಳೆಯರಿಗಾದರೆ, ನೇರ ನೋದಣಿ ಸಾಧ್ಯವಾಗುತ್ತದೆ.

ಈ ವೆಬ್ ಸೈಟಿನ ಅಂಕಿ ಅಂಶಗಳ ಪ್ರಕಾರ, ಬೆಂಗಳೂರಿನ 43,200 ಮಹಿಳಾ ವಿವಾಹಿತೆಯರು ಈಗಾಗಲೇ ತಮ್ಮ ಹೆಸರು ನೋದಾಯಿಸಿಕೊಂಡಿದ್ದಾರೆ. ಪುರುಷ ವಿವಾಹಿತರ ಸಂಖ್ಯೆ 91,800. ಅಂದರೆ, ಬೆಂಗಳೂರಿನಿಂದ ನೋಂದಣಿ ಮಾಡಿಸಿರುವ ವಿವಾಹಿತರ ಸಂಖ್ಯೆ ಒಟ್ಟಾರೆ 1 ಲಕ್ಷ 30 ಸಾವಿರ. ಇದು ದೇಶದ ಇತರ ನಗರಗಳಿಗಿಂತ ಅತ್ಯಂತ ಹೆಚ್ಚು ಎಂದು ಗ್ಲೀಡೆನ್ ವರದಿ ಹೇಳುತ್ತಿದೆ. ಈ ಇಡೀ ಸುದ್ದಿಯನ್ನು ಸ್ಕೋಪ್ ವೂಪ್ ಎಂಬ ಇಂಗ್ಲಿಷ್ ವೆಬ್ ಸೈಟ್ ಪ್ರಕಟಿಸಿದೆ.

LEAVE A REPLY

Please enter your comment!
Please enter your name here