ನಾನು ಕಳೆದುಕೊಂಡಿರುವ ಅರಶಿನ-ಕುಂಕುಮವನ್ನು ಮತದ ಸ್ವರೂಪದಲ್ಲಿ ಭಿಕ್ಷೆಯಾಗಿ ನೀಡಿ..!

0
56

ನಾನು ನನ್ನ ಪತಿ ಡಿಕೆ ರವಿ ಅವರನ್ನು ಕಳೆದುಕೊಳ್ಳುವ ಮೂಲಕ ಐದು ವರ್ಷಗಳ ಹಿಂದೆ ಕಳೆದುಕೊಂಡಿರುವ ಅರಶಿನ-ಕುಂಕುಮವನ್ನು ನಿಮ್ಮ ಮತದ ರೂಪದಲ್ಲಿ ಭಿಕ್ಷೆಯಾಗಿ ನನಗೆ ನೀಡಿ, ನಿಮ್ಮ ಮನೆ ಮಗಳಾದ ನನ್ನನ್ನು ಹರಸಿ. ಅರಶಿನ-ಕುಂಕುಮವನ್ನು ಕಳೆದುಕೊಂಡಿರುವ ನಾನು ನನ್ನ ಉಳಿದ ಬದುಕನ್ನು ಜನಸೇವೆಗಾಗಿ ಮುಡಿಪಾಗಿಡುತ್ತೇನೆ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಸುಮಾ ಅವರು, ಉಪಚುನಾವಣೆ ಕಣಕ್ಕೆ ನಾನು ಇಳಿದಾಗಿನಿಂದ ಸಾಕಷ್ಟು ನಿಂದನೆ ಮತ್ತು ಅವಮಾನಗಳನ್ನು ಅನುಭವಿಸಿದ್ದೇನೆ. ಆದರು ನಾನು ಸಧೃಡವಾಗಿ, ಅಚಲದಿಂದ ಈ ಚುನಾವಣೆಯನ್ನು ಎದುರಿಸುತ್ತೇನೆ. ಈ ವಿದ್ಯಾವಂತ ನಿಮ್ಮ ಮನೆ ಮಗಳನ್ನು ನೀವೆಲ್ಲರೂ ಮತ ನೀಡಿ ಹಾರೈಸಲಿದ್ದೀರಿ ಎಂಬ ನಂಬಿಕೆ ನನಗಿದೆ ಎಂದು ಭಾವುಕರಾಗಿ ಹೇಳಿದರು.


ಇನ್ನು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನನ್ನ ಹೆಸರು ಚುನಾವಣೆ ಕಣದ ಮುನ್ನಲೆಗೆ ಬಂದ ಕ್ಷಣದಿಂದಲೂ ನನ್ನ ಮೇಲೆ ನಿರಂತರ ಟೀಕೆಗಳು, ವೈಯಕ್ತಿಕ ನಿಂದನೆ, ಅವಮಾನ, ವಾಗ್ಧಾಳಿಗಳು ನಡೆಯುತ್ತಲೇ ಇದೆ. ನನ್ನನ್ನು ತುಳಿಯುವ ಪ್ರಯತ್ನಗಳು ನಡೆದಿವೆ. ನನ್ನ ಅತ್ತೆ-ಮಾವನನ್ನು ನನ್ನ ವಿರುದ್ದ ಬಳಸಿಕೊಳ್ಳಲಾಗುತ್ತಿದೆ. ಇನ್ನು ಸುಳ್ಳು ಕೇಸ್ ದಾಖಲಿಸುವ ಮೂಲಕ ಪ್ರಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಅಲ್ಲದೆ ನಾನು ಪ್ರಚಾರಕ್ಕೆ ಹೋದ ಕೆಲವು ಸ್ಥಳಗಳಲ್ಲಿ ನೀವು ಬಳಸಿರುವ ಭಾಷೆ ಯಾವುದೇ ಹೆಣ್ಣಿಗೂ ಬಳಸುವಂತದ್ದಲ್ಲ. ಇನ್ನು ಇದೇ ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ದ ವಾಗ್ದಾಳಿ ನಡೆಸಿದ ಕುಸುಮಾ ಅವರು, ನಾನು ನಿಮಗೇನು ಅನ್ಯಾಯ ಮಾಡಿದ್ದೇ ಮುನಿರತ್ನ ಅಣ್ಣನವರೇ.? ಗಂಡ ಸ’ತ್ತ ಮುಂ’ಡೆಗೆ ಯಾಕೆ ರಾಜಕೀಯ ಅಂತಾ ಕೇಳಿದ್ದೀರಿ. ನೀವು ಆಡಿರುವ ಮಾತು ನಿಮಗೆ ಶೋಭೆ ತರುವುದಿಲ್ಲ. ಇನ್ನು ನಿಮಗೂ ಹೆಣ್ಣು ಮಕ್ಕಳಿದ್ದಾರೆ. ನನಗೆ ಬಂದ ಪರಿಸ್ಥಿತಿ ನಿಮ್ಮ ಮಕ್ಕಳಿಗೆ ಬರುವುದು ಬೇಡ. ಒಂದು ವೇಳೆ ಅವರಿಗೆ ಈ ಪರಿಸ್ಥಿತಿ ಬಂದಿದ್ದರೆ ನೀವು ಏನು ಮಾಡುತ್ತಿದ್ದಿರಿ? ಹೀಗೆ ನಿಂದಿಸುತ್ತಿದ್ದಿರಾ ? ಇನ್ನು ಗಂಡ ಸತ್ತ ನಂತರ ಯಾವ ಹೆಣ್ಣು ರಾಜಕೀಯಕ್ಕೆ ಬರಬಾರದಾ? ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬಾರದಾ? ಎಂದು ಪ್ರಶ್ನಿಸಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಜನರು ಅರಿಶಿನ, ಕುಂಕುಮವನ್ನು ನೀಡಿ ಈ ಬಾರಿ ನನ್ನ ಉಡಿ ತುಂಬಿ ಕೊಡುತ್ತಾರೆ. ತಮ್ಮ ಮನೆ ಮಗಳಾದ ನನಗೆ ಹೂವು ಮುಡಿಸುತ್ತಾರೆ. ಆ ಮೂಲಕ ರಾಜರಾಜೇಶ್ವರಿ ನಗರ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸುತ್ತಾರೆ. ಕ್ಷೇತ್ರದ ಜನರಿಂದ ನಾನು ಮತದ ಸ್ವರೂಪದಲ್ಲಿ ಅರಿಶಿನ, ಕುಂಕುಮ ಭಿಕ್ಷೆ ರೂಪದಲ್ಲಿ ಪಡೆಯುತ್ತೇನೆ. ನನ್ನ ಜೀವನ ಜನರ ಸೇವೆಗೆ ಮುಡಿಪಾಗಿ ಇಡುತ್ತೇನೆ. ದಯವಿಟ್ಟು ನನಗೆ ಮತ ನೀಡಿ ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here