ಬೆಂಗಳೂರಿನಲ್ಲಿ ಓದು ಮುಗಿಸಿಕೊಂಡು ಕೆಲಸವನ್ನು ಹುಡುಕಲು ಹೊರಟಿರುವ ಹುಡುಗಿಯರೇ ,ನೀವು ಯಾವುದೇ ಕೆಲಸಕ್ಕೂ ಹೋಗುವ ಮುನ್ನ ಈ ಲೇಖನ ಓದಲೇಬೇಕು.
ಟೆಲಿಫೋನ್ ಕಾಲ್ ಸೆಂಟರ್ ಗಳಲ್ಲಿ ಕೆಲಸ ಕಾಲಿ ಇದೆ , ನಿಮಗೆ ಬೇಕಾದಷ್ಟು ಸಂಬಳ ಕೊಡುತ್ತೇವೆ ಎಂದು ಹೇಳುತ್ತಾರೆ ಅದರಲ್ಲೂ ಹುಡುಗಿಯರಿಗೆ ಪ್ರಾಮುಖ್ಯತೆ ಅಂತಾನೂ ಇರುತ್ತೆ ಅಂತ ಕಡೆ ಕೆಲಸಕ್ಕೆ ಸೇರಿದರೆ ಹುಡುಗರನ್ನು ವೇಶ್ಯಾವಾಟಿಕೆಯತ್ತ ಸೆಳೆಯಿರಿ , ಹುಡುಗರನ್ನು ನೀವು ಈ ದಂಧೆಗೆ ಬಂದು ಎಂಜಾಯ್ ಮಾಡಿ ಎಂದು ಉತ್ತೇಜಿಸಿ ಎಂದು ಹೇಳುತ್ತಾರಂತೆ. ಇನ್ನು ಕೆಲಸಕ್ಕೆ ಸೇರಿದ ಮೇಲೆ ಈ ಕೆಲಸ ಯಾರು ಮಾಡುವುದಿಲ್ಲವೋ ಅಂತಹ ಹುಡುಗಿಯರಿಗೆ ಹಿಂಸೆ ನೀಡುತ್ತಾರಂತೆ.

ಇಂತಹ ನೀಚ ಕೃತ್ಯ ಮಾಡುವಂತೆ ಹೇಳುತ್ತಿದ್ದ 3 ಜನರು ಇದ್ದ ಗ್ಯಾಂಗ್ ಒಂದನ್ನು ಬೆಂಗಳೂರಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 3 ಜನರಲ್ಲಿ ಮೊದಲನೇಯವನು ದಿನೇಶ್ ಈತನ ಊರು ಶ್ರವಣಬೆಳಗೊಳ ,ಎರಡನೇಯವನು ಪ್ರಜ್ವಲ್ ಈತನ ಊರು ಕೆ.ಆರ್. ಪೇಟೆ ಹಾಗೂ ಮೂರನೇಯವನು ಕಿರಣ್ ಈತನೂ ಸಹ ಕೆ.ಆರ್.ಪೇಟೆಯವನು.
ಇನ್ನು ಈ ಮೂವರು ಖಾತರ್ನಾಕ್ ಗಳು ಮೂರು ಜನ ಹುಡುಗಿಯರನ್ನು ನೆಲಮಂಗಲದ ಕುಣಿಗಲ್ ಬೈಪಾಸ್ ಅಲ್ಲಿ ಇರುವ ವುಡ್ಲಾಂಡ್ ಎಂಬ ಹೋಟೆಲ್ ಅಲ್ಲಿ ಬಚ್ಚಿಟ್ಟಿದ್ದರು ಈ ಬಚ್ಚಿಟ್ಟಿದ್ದ 3 ಹುಡುಗಿಯರನ್ನು ಪೊಲೀಸರು ಕಾಪಾಡಿದ್ದಾರೆ. ಲೊಕೆಂಟೋ ಎಂಬ ಆಪ್’ನಿಂದ ಯುವ ಪೀಳಿಗೆಯ ಜನರನ್ನು ಆ ಜಾಲಕ್ಕೆ ಬೀಳುವಂತೆ ಮಾಡುತ್ತದೆ. ಇನ್ನು ಇಂತ ಹುಡುಗರಿಗೆ ಫೋನ್ ಮಾಡಿ ವೇಶ್ಯಾವಾಟಿಕೆ , ಸೆಕ್ಸ್ ಗೆ ಬರುವಂತೆ ಒಪ್ಪಿಸುವಂತೆ ಈ ಮೂರು ಜನ ಖತರ್ನಾಕ್ ಗಳು ಹುಡುಗಿಯರಿಗೆ ಹಿಂಸೆ ನೀಡುತ್ತಿದ್ದರು.

ಈ ಕಚಡ ಕೆಲಸ ಮಾಡಲ್ಲ ಎನ್ನುವ ಹುಡುಗಿಯರಿಗೆ ಹಿಂಸೆ ಮಾಡಿ ವುಡ್ಲಾಂಡ್ ಎಂಬ ಹೋಟೆಲ್ ಅಲ್ಲಿ ಬಚ್ಚಿಡಲಾಗಿತ್ತು. ಇನ್ನು ಇದರ ಬಗ್ಗೆ ತಿಳಿದ ನೆಲಮಂಗಲ ನಗರದ ಪಿ ಎಸ್ ಐ ಆಗಿರುವಂತಹ ಮಂಜುನಾಥ್ ಅವರ ಸಮ್ಮುಖದಲ್ಲಿ ವುಡ್ಲಾಂಡ್ ಎಂಬ ಹೋಟೆಲ್ ಗೆ ನುಗ್ಗಿ ಆ 3 ಹುಡುಗಿಯರನ್ನು ಕಾಪಾದಿದ್ದಾರೆ.ಇನ್ನು ಆ 3 ಖತರ್ನಾಕ್ ಗಳ ಮೇಲೆ ಕೇಸ್ ರಿಜಿಸ್ಟರ್ ಮಾಡಿಕೊಂಡಿರುವ ಪೊಲೀಸರು ಈ ಜಾಲದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇನ್ನು ಪೊಲೀಸರಿಗೆ ಇವರ ಹಿಂದೆ ದೊಡ್ಡ ಗ್ಯಾಂಗ್ ಇರಬಹುದು ಎಂಬ ಅನುಮಾನ ಇದ್ದು ಅವರಿಗಾಗಿ ಶೋಧನೆ ಮಾಡುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ
ಧನ್ಯವಾದಗಳು.