ಈ ಬಾಲಕಿ ನಿತ್ಯ ರೈಲ್ವೆ ಸ್ಟೇಷನ್‌ಗೆ ಹೋಗಿ ಓದಿಕೊಳ್ಳುತ್ತಾಳೆ..! ಯಾಕೆ ಅಂತ ಗೊತ್ತಾದರೆ ಹ್ಯಾಟ್ಸಾಪ್ಅಂತೀರ.

0
429

ಯಾವುದರ ಬಗ್ಗೆಯಾದರೂ ನಮಗೆ ಇಷ್ಟ ಇದ್ದರೆ ಅದನ್ನು ಗಳಿಸಲು ನಾವು ಎಷ್ಟೇ ಕಷ್ಟ ಆದರೂ ಅನುಭವಿಸುತ್ತೇವೆ. ಇಷ್ಟವಾದ ವಸ್ತುವಿನ ಬಗ್ಗೆ ಎಷ್ಟೇ ಕಷ್ಟ ಆದರೂ ಇಷ್ಟದಿಂದ ಭರಿಸುತ್ತೇವೆ. ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದಂತೆ “ನೀನು ಸೂರ್ಯನಂತೆ ಬೆಳಗಬೇಕು ಎಂದರೆ ಮೊದಲು ಸೂರ್ಯನಂತೆ ಉರಿಯಬೇಕು” ಎಂದಿದ್ದರು.

ಈ ಫೋಟೋದಲ್ಲಿ ಕಾಣಿಸುತ್ತಿರುವ ಬಾಲಕಿ ಹೆಸರು ದಿವ್ಯಾ. ಆಕೆ ಎಲ್ಲಿದ್ದಾಳೆ ಎಂದು ನೀವು ಕಂಡುಹಿಡಿಯುತ್ತೀರ. ಹೌದು ಆಕೆ ಇರುವುದು ರೈಲ್ವೆ ಸ್ಟೇಷನ್‌ನಲ್ಲೇ. ಅಲ್ಲಿ ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲ. ಕೇವಲ ಓದಿಕೊಳ್ಳುತ್ತಿದ್ದಾಳೆ ಈ ಬಾಲಕಿ. ದಿವ್ಯಾ ಪ್ರತಿ ದಿನ ಸಂಜೆ ಶಾಲೆಯಿಂದ ಬಂದ ಕೂಡಲೆ ನೇರವಾಗಿ ರೈಲ್ವೆ ಸ್ಟೇಷನ್‌ಗೆ ಹೋಗಿ ಅಲ್ಲೇ ಹೋಮ್ ವರ್ಕ್ ಪೂರ್ಣಗೊಳಿಸಿಕೊಂಡು ಬಳಿಕ ಸ್ವಲ್ಪ ಸಮಯ ಓದಿಕೊಳ್ಳುತ್ತಾಳೆ.

ದಿವ್ಯಾದು ಉತ್ತರ ಪ್ರದೇಶದಲ್ಲಿನ ಓರೈ ಪಟ್ಟಣದಲ್ಲಿನ ರೈಲ್ವೆ ಸ್ಟೇಷನ್ ಪಕ್ಕದ ಗುಡಿ ಸಮೀಪ ಇರುವ ಚಿಕ್ಕ ಗುಡಿಸಲು. ದಿವ್ಯ ಮನೆಯಲ್ಲಿ ವಿದ್ಯುತ್ ಸೌಲಭ್ಯ ಇಲ್ಲ. ಹಾಗಾಗಿ ಪ್ರತಿ ದಿನ ಹತ್ತಿರದ ರೈಲ್ವೆ ಸ್ಟೇಷನ್‌ಗೆ ಹೋಗಿ ಅಲ್ಲೇ ದೀಪವೊಂದರ ಕೆಳಗೆ ಕುಳಿತು ಹೋಮ್ ವರ್ಕ್ ಮಾಡಿಕೊಳ್ಳುತ್ತಾ ಅಥವಾ ಓದಿಕೊಳ್ಳುತ್ತಾ ಇರುತ್ತಾಳೆ.

ನೋಡಿದಿರಲ್ಲವೇ! ನಮಗೆ ಎಲ್ಲವೂ ಇದ್ದರೂ ಓದುವುದು ಎಂದರೇನೇ ದೊಡ್ಡ ಕಿರಿಕಿರಿ. ಆದರೆ ಯಾವುದೇ ರೀತಿಯ ಸೌಲಭ್ಯಗಳು ಇಲ್ಲದವರಿಗೆ ಓದಿನ ಬಗ್ಗೆ ಎಷ್ಟೆಲ್ಲಾ ಪ್ರೀತಿ ಇದೆ ಎಂಬುದನ್ನು ನೋಡಿ. ನಮ್ಮ ಸುತ್ತಲೂ ಸಹ ಬಹಳಷ್ಟು ಮಂದಿ ಈ ರೀತಿ ಇರುತ್ತಾರಾದರೂ ಯಾರು ಅಷ್ಟಾಗಿ ಅವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಯಾಕೆಂದರೆ ಅಂತಹವರನ್ನು ಮಾತನಾಡಿದರೆ ನಾವು ಎಲ್ಲಿ ಕೀಳಾಗುತ್ತೇವೋ ಎಂಬ ಭಾವ ಇರುತ್ತದೆ ಬಹಳಷ್ಟು ಮಂದಿಯಲ್ಲಿ. ಒಮ್ಮೆ ಅಂತಹವರನ್ನು ಮಾತನಾಡಿ ನೋಡಿ ನಿಮ್ಮನ್ನು ಅವರು ಬುದ್ಧಿವಂತಿಕೆಯಿಂದ ಚಕಿತಗೊಳಿಸುತ್ತಾರೆ..!

ಈ ಕಾಲದಲ್ಲೂ ಇಂತಹವರಿರುತ್ತಾರಾ ಅನ್ನಿಸುತ್ತದೆ. ಕಣ್ತೆರೆದು ನೋಡಿದರೆ ನಮ್ಮ ದೀಪದ ಕೆಳಗೆ ಕತ್ತಲು ಎಂಬಂತೆ ಬೆಳಕಿರುವ ಕಡೆ ಈ ರೀತಿಯ ಸಮಸ್ಯೆಯೂ ಇರುತ್ತದೆ. ಏನೇ ಆಗಲಿ ಇಂತಹವರಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕು. ಆಗ ಅವರಲ್ಲಿನ ಪ್ರತಿಭೆ ಹೊರಬರುತ್ತದೆ. ಸರ್ ಎಂ ವಿಶ್ವೇಶ್ವರಯ್ಯ ಅವರಂತಹವರೂ ಬೀದಿ ದೀಪದ ಕೆಳಗೆ ಅಲ್ಲವೇ ಓದಿದ್ದು.

LEAVE A REPLY

Please enter your comment!
Please enter your name here