ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ರಾಮಾಯಣ ಕಾಲದ ಚರಿತ್ರೆಯೊಂದಿಗೆ ಥಳುಕು ಹಾಕಿಕೊಂಡಿರುವ ಇತಿಹಾಸ ಪ್ರಸಿದ್ಧ ಅಂಜನಾದ್ರಿಯ ಬೆಟ್ಟದ ಆಂಜನೇಯ ಸ್ವಾಮಿಯ ಆದಾಯ ಒಂದೆ ವರ್ಷದಲ್ಲಿ ಹೆಚ್ಚು ಆದಾಯ ತರುವ ಮುಖೇನ ಹೊಸ ದಾಖಲೆ ಮಾಡಿದೆ.

ಈ ಐತಿಹಾಸಿಕ ಸ್ಥಳಕ್ಕೆ ಪವನಸುತ ಆಂಜನೇಯನ ಜನ್ಮಸ್ಥಳ ಎಂಬ ಪ್ರತೀತಿ ಇರುವ ಹಿನ್ನೆಲೆ ಸಾಕಷ್ಟು ಭಕ್ತರ ದಂಡೇ ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ಶನಿವಾರ ಅರಿದು ಬರುತ್ತದೆ .
ಈ ಐತಿಹಾಸಿಕ ಸ್ಥಳಕ್ಕೆ ರಾಜಕೀಯ ಮುಖಂಡರಾದ ನಿತಿನ್ ಗಡ್ಕರಿ, ಪಿಯೂಸ್ ಗೋಯಲ್ ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್ ಸೇರಿದಂತೆ ಹಲವಾರು ಕೇಂದ್ರ ಹಾಗೂ ರಾಜ್ಯ ನಾಯಕರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಮ್ಮ ರಾಜ್ಯದ ಭಕ್ತರಷ್ಟೇ ಅಲ್ಲದೆ, ಹೊರರಾಜ್ಯ ಹಾಗೂ ವಿದೇಶಗಳಿಂದ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.
ಇಲ್ಲಿಯವರೆಗೂ ದೇವಸ್ಥಾನದ ಉಸ್ತುವಾರಿಯನ್ನು ಪ್ರಧಾನ ಆರ್ಚಕರಾದ ವಿದ್ಯಾದಾಸ ಬಾಬಾ ರವರು ವಹಿಸಿಕೊಂಡಿದ್ದರು. ಆದರೆ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಟ್ರಸ್ಟ್ ನ ಸದಸ್ಯರ ಹಾಗೂ ವಿದ್ಯಾದಾಸ ಬಾಬಾ ನಡುವೆ ಗಲಾಟೆಗಳು ಉಲ್ಬಣಗೊಂಡಿತ್ತು.ಇದನ್ನು ತಿಳಿದು ಮಧ್ಯಪ್ರವೇಶಿಸಿದ ಜಿಲ್ಲಾಡಳಿತ ಕಳೆದ ವರ್ಷ ಜುಲೈನಲ್ಲಿ ಸರ್ಕಾರದ ವಶಕ್ಕೆ ಪಡೆದು ಕಂದಾಯ ಹಾಗೂ ಮುಜರಾಯಿ ಇಲಾಖೆ ದೇವಸ್ಥಾನದ ನಿರ್ವಹಣೆಯನ್ನು ವಹಿಸಿಕೊಂಡಿತ್ತು. ಅದಾದ ನಂತರ ಪ್ರತಿ ತಿಂಗಳು ಅಂಜನಾದ್ರಿಯ ಆದಾಯ ಹೆಚ್ಚಾಗುತ್ತಲೇ ಸಾಗಿದೆ . ಒಂದೇ ವರ್ಷದಲ್ಲಿ ದೇವಸ್ಥಾನದ ಆದಾಯ ಸುಮಾರು ₹1. 3 ಕೋಟಿ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಮಾಡಿದೆ.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆದಾಯದ ಹಣದಲ್ಲಿ ₹ 47 ಲಕ್ಷ ಖರ್ಚು ಮಾಡಿ ಸಿಬ್ಬಂದಿ ವೇತನ, ದಾಸೋಹ ಹಾಗೂ ದೇವಸ್ಥಾನಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸವು ಕಾರ್ಯ ಪ್ರಗತಿಯಲ್ಲಿದ್ದು ಉಳಿಕೆ ₹ 56 ಲಕ್ಷ ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿದೆ ಎಂದು ತಹಶೀಲ್ದಾರ್ ರವರು ತಿಳಿಸಿದ್ದಾರೆ.