ಕಾನನದ ನಡುವೆ ಗಿಡ, ಬಳ್ಳಿಯಲ್ಲಿ ನಿಸರ್ಗಿಕವಾಗಿ ಉದ್ಭವಿಸಿದ ಗಣಪ

0
176

ಮಂಗಳೂರು: ಕೊರೊನಾ ಭೀತಿ ನಡುವೆಯೇ ಸರಳವಾಗಿ ಸಾಂಪ್ರದಾಯಿಕವಾಗಿ ಗೌರಿ-ಗಣೇಶ ಹಬ್ಬ ಆಚರಣೆ ಮಾಡಲಾಗಿದೆ. ಗಣೇಶ ಚತುರ್ಥಿ ಎಂದರೆ ದೇಶಾದ್ಯಂತ ಹಲವು ದಿನಗಳವರೆಗೆ ನಡೆಯುವ ಸಡಗರ-ಸಂಭ್ರಮ. ಎಲ್ಲೆಲ್ಲೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಭಾರೀ ಮೆರವಣಿಗೆ, ಅದ್ದೂರಿ ಆಚರಣೆ ಇರುವುದು ಸಾಮಾನ್ಯ. ಆದರೆ ಈ ಬಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಯಾವುದೇ ರೀತಿಯ ಅದ್ದೂರಿತನವಾಗಲಿ, ಸಡಗರವಾಗಲಿ ಇರದೇ ಸಿಂಪಲ್ಲಾಗಿ ಗಣೇಶ ಚತುರ್ಥಿ ನೆಡೆದಿದೆ. ಈ ನಡುವೆ ಕಡಲ ನಗರಿ ಮಂಗಳೂರಿನಲ್ಲಿ ಪ್ರಕೃತಿ ಮಡಿಲಲ್ಲಿ ನಿಸರ್ಗದತ್ತವಾಗಿ ಗಣೇಶ ಮೂರ್ತಿ ಉದ್ಭವವಾಗಿರುವುದು ಎಲ್ಲರನ್ನು ಚಕಿತರನ್ನಾಗಿ ಮಾಡಿದೆ. ದಟ್ಟ ಕಾನನದ ನಡುವೆ ಮರವೊಂದರಲ್ಲಿ ಉದ್ಭವಿಸಿರುವ ಈ ಗಣೇಶನಿಗೆ ಮನಸೋಲದವೇ ಇಲ್ಲ. ಅಚ್ಚರಿ ಎನಿಸಿದರೂ ಇದು ನಿಜ. ಮಂಗಳೂರಿನ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಅಮೃತೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯೆ ರಸ್ತೆಯ ಪಕ್ಕದಲ್ಲಿರುವ ಮರವೊಂದಕ್ಕೆ ಬಳ್ಳಿ, ಗಿಡಗಳು ಸುತ್ತಿಕೊಂಡಿದ್ದು ಗಣೇಶನ ದೊಡ್ಡ ಮೂರ್ತಿಯಂತೆ ಎದ್ದು ನಿಂತಿದೆ.

Pic Credit: Visha photography

ಪ್ರಕೃತಿ ಸಹಜವಾಗಿ ತಾನಾಗಿಯೇ ಮರ, ಗಿಡ, ಬಳ್ಳಿ, ಎಲೆಗಳಲ್ಲೇ ಉದ್ಭವವಾಗಿರುವ ಈ ಗಣೇಶ ಕರಾವಳಿ ಜನರನ್ನು ಅಚ್ಚರಿಗೊಳಿಸಿದೆ. ಗಣೇಶ ಚತುರ್ಥಿಯ ದಿನ ಸ್ಥಳೀಯ ನಿವಾಸಿ ವಿಶಾಲ್ ವಾಮಂಜೂರು ಎಂಬುವವರು ತಮ್ಮ ಕ್ಯಾಮರಾದಲ್ಲಿ ಈ ಪ್ರಕೃತಿ ಗಣಪನನ್ನು ಸೆರೆಹಿಡಿದಿದ್ದು, ಈ ಫೋಟೋ ಭಾರೀ ವೈರಲ್ ಆಗುತ್ತಿದೆ. ಅಲ್ಲದೇ ಈ ನಿಸರ್ಗದತ್ತ ಗಣಪನನ್ನು ನೋಡಲು ಸಾವಿರಾರು ಜನರು ಆಗಮಿಸುತ್ತಿದ್ದಾರೆ.

ಹಲವು ದಿನಗಳಿಂದ ಈ ಮರದಲ್ಲಿ ಗಿಡ ಬಳ್ಳಿಗಳೇ ಸುತ್ತಿಕೊಂಡು ಗಣೇಶನ ಆಕಾರದಲ್ಲಿ ಇದ್ದರೂ ಅಷ್ಟಾಗಿ ಯಾರೂ ಕೂಡ ಇದನ್ನು ಗಮನಿಸಿರಲಿಲ್ಲ. ಇದೀಗ ಗಣೇಶ ಚತುರ್ಥಿಯ ದಿನ ಈ ಅದ್ಭುತ ಫೋಟೋಗ್ರಾಫರ್ ಕ್ಯಾಮರಾದಲ್ಲಿ ಸೆರೆಯಾಗಿ ನಾಡಿನಾದ್ಯಂತ ವೈರಲ್ ಆಗುತ್ತಿದ್ದಂತೆ ಗಣೇಶ ಹಬ್ಬದ ಸಂದರ್ಭದಲ್ಲಿ ಈ ಪ್ರಕೃತಿಯ ವೈಚಿತ್ರ್ಯಕ್ಕೆ ಜನ ಮಾರು ಹೋಗುತ್ತಿದ್ದಾರೆ.

LEAVE A REPLY

Please enter your comment!
Please enter your name here