ಗೌರಿ ಗಣೇಶ ಹಬ್ಬ ಇನ್ನೇನು ಬಂದಿಯೆಬಿಟ್ಟಿತು. ಎಲ್ಲೆಲ್ಲು ಸಂಭ್ರಮ ಮನೆ ಮಾತಾಗಿದೆ. ಬೆಂಗಳೂರಿನ ಟ್ರಾಫಿಕ್ ಮತ್ತು ಕಲೆಸದ ಜಂಜಾಟದಿಂದ ಕೊಂಚ ವಿರಾಮ ನೀಡುವುದು ಈ ರೀತಿಯಾದ ವಿಶೇಷವಾದ ಹಬ್ಬಗಳು ಮಾತ್ರ. ಇನ್ನು ಬಾನುವಾರ ಮತ್ತು ಸೋಮವಾರ ಎರಡು ದಿನ ರೆಜೆ ಇರುವುದರಿಂದ ಎಲ್ಲಾ ಮಾರ್ಗದ ಬಸ್ಸು ಮತ್ತು ರೈಲುಗಳು ಜನ ದಟ್ಟಣೆ ಆಗಲಿವೆ.

ಗಣೇಶ ಚತುರ್ಥಿ ಹಿನ್ನಲೆ,ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಬಿಡುವುದಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಪತ್ರಿಕ ಪ್ರಕಟನೆಯನ್ನು ಹೊರಡಿಸಿದ್ದರು. ಈಗಾಗಲೇ ಈ ರೈಲು ನೆನ್ನೆ ರಾತ್ರಿ ಯಶವಂತಪುರದಿಂದ ಹೊರಟಿದ್ದು, ಬೆಳಿಗ್ಗೆ 11:15 ರ ಹೊತ್ತಿಗೆ ಬೆಳಗಾವಿ ತಲುಪಲಿದೆ. ಈ ವಿಶೇಷ ರೈಲಿನಿಂದ ಬೆಂಗಳೂರಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ನೌಕರರಿಗೆ ತುಂಬ ಉಪಯೋಗವಾಗಿದೆಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತು ಸೆಂಪ್ಟಂಬರ್ 2 ರಂದು ಸಂಜೆ ಬೆಳಗಾವಿಯಿಂದ ಹೊರಡುವ ಈ ರೈಲು ಸೆಂಪ್ಟಂಬರ್ 3 ರಂದು ಬೆಳಿಗ್ಗೆ 6.19ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ.ತುಮಕೂರು,ಅರಸೀಕರೆ,ದಾವಣಗೆರೆ,ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಾಗಿ ಹೋಗಿರುವ ಈ ರೈಲು, ಈ ಎಲ್ಲಾ ಊರುಗಳಿಗೆ ಹೋಗುವವರಿಗೆ ಸಹಾಯವಾಗಿದೆ ಮತ್ತು ವಾಪಸ್ ಬರುವವರಿಗೂ ಉಪಯೋಗವಾಗಲಿದೆ. ಇನ್ನಿ ಈ ರೈಲಿನಲ್ಲಿ ಓಂದು 2 ಎ,ಸಿ 3ಎ.ಸಿ ಹದಿನಾರು ಸ್ಲೀಪರ್ ಮತ್ತು ಎರಡು ಎಸ್ ಎಲ್ ಆರ್ ಕೋಚ್ಗಳು ಇವೆ.
ಒಟ್ಟಾರೆ ಹಬ್ಬ ಹರಿದಿನಗಳಲ್ಲಿ ಬೆಂಗಳೂರಿನಿಂದ ಹೊರಹೋಗಲು ಸೂಕ್ತ ಸಾರಿಗೆ ವ್ಯವಸ್ತೆ ಇರಲಿಲ್ಲ.ಇದರಿಂದ ಉತ್ತರ ಕರ್ನಾಟಕ ಜನರಿಗೆ ಸಾಕಷ್ಟು ತೊಂದರೆಯಾಗುತಿತ್ತು. ಹೀಗಾಗಿ ವಿಶೇಷ ರೈಲು ವ್ಯವಸ್ತೆ ಮಾಡಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ!