ಗಾಂಧಿ ಕನ್ನಡಕ; ಭಾರೀ ಮೊತ್ತಕ್ಕೆ ಹರಾಜು

0
87

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಳಕೆ ಮಾಡುತ್ತಿದ್ದ ಅಪರೂಪದ ಕನ್ನಡಕ ಭಾರೀ ಮೊತ್ತಕ್ಕೆ ಹಾರಾಜಾಗಿದೆ. ರಾಷ್ಟ್ರಪಿತನ ಕನ್ನದಕ ಹರಾಜಾಗಿದ್ದು ಭಾರತದಲ್ಲಲ್ಲ, ಬ್ರಿಟನ್ ನಲ್ಲಿ ಎಂಬುದು ವಿಶೇಷ. ಗಾಮ್ಧಿ ಕನ್ನಡಕ ಎಂದಾಕ್ಷಣ ನೆನಪಾಗುವುದೇ ಗೋಲಾಕಾರದ ಕನ್ನಡಕ. ಗಾಂಧೀಜಿ ಬಳಸುತ್ತಿದ್ದ ಇದೇ ಕನ್ನಡಕ ಇದೀಗ 2.5 ಕೋಟಿ ರೀಗೆ ಹರಾಜಾಗಿದೆ. 1920ರಲ್ಲಿ ಗಾಂಧೀಜಿ ಈ ಕನ್ನಡಕ ಧರಿಸುತ್ತಿದ್ದರು ಎನ್ನಲಾಗಿದೆ. ಗೋಲ್ಡ್ ಪ್ಲೇಟೆಡ್ ಕನ್ನಡಕ ಇದಾಗಿದ್ದು, 1900 ರಲ್ಲಿ ಇದನ್ನು ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಈ ಕನ್ನಡಕ 2.5ಕೋಟಿ ಅಂದರೆ ದಾಖಲೆಯ 260,000 ಪೌಂಡ್ಸ್ ಮೊತ್ತಕ್ಕೆ ಹರಾಜಾಗಿದೆ.್

ಈಸ್ಟ್ ಬ್ರಿಸ್ಟಲ್‌ ಹೌಸ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕನ್ನಡಕ ಮಾರಾಟವಾಗಿದೆ. ಗಾಂಧೀಜಿ ಧರಿಸುತ್ತಿದ್ದರು ಎನ್ನಲಾದ ಈ ಕನ್ನಡಕ ಅಲ್ಲಿನ ಸಿಬ್ಬಂದಿಗೆ ಸಿಕ್ಕಿತ್ತು. ಅದಕ್ಕೆ 14 ಲಕ್ಷ ರೂಪಾಯಿ ಮುಖಬೆಲೆ ಇಟ್ಟು ಹರಾಜಿಗೆ ಹಾಕಲಾಗಿತ್ತು. ಆದರೆ ಹರಾಜು ಪ್ರಕ್ರಿಯೆ ವೇಳೆ ಈ ಕನ್ನಡಕ ಮೂಲ ಬೆಲೆಗಿಂತ ಹದಿನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಬಿಕರಿಯಾಗಿದೆ ಎಂದು ತಿಳಿದುಬಂದಿದೆ.

ಅಮೆರಿಕದ ವ್ಯಕ್ತಿಯೊಬ್ಬರು ಆನ್‌ಲೈನ್‌ ಮೂಲಕ ಬಿಡ್ ಸಲ್ಲಿಸಿ ಈ ಕನ್ನಡಕವನ್ನು ಖರೀದಿಸಿದ್ದಾರೆ. ಕೇವಲ ಆರೇ ನಿಮಿಷದಲ್ಲಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here