ಕಿಚ್ಚೆಬ್ಬಿಸಿದ ಪೈಲ್ವಾನ್ ಟ್ರೇಲರ್

0
178

ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾದ ಕಮರ್ಷಿಯಲ್ ಟ್ರೇಲರ್‌ ಗುರುವಾರ ರಿಲೀಸ್ ಆಗಿದ್ದು, ಆನ್‌ಲೈನ್‌ನಲ್ಲಿ ಧೂಳೆಬ್ಬಿಸುತ್ತಿದೆ. ರಿಲೀಸ್ ಆದ ಕೇವಲ ಗಂಟೆಗೆ ಲಕ್ಷಾಂತರ ಮಂದಿ ವೀಕ್ಷಿಸಿರುವುದು ವಿಶೇಷ.
ಮುಂಬಯಿಯಲ್ಲಿ ಬಿಡುಗಡೆಯಾದ ಈ ಟ್ರೇಲರ್‌ನಲ್ಲಿ ಬಹುತೇಕ ಪಾತ್ರಗಳ ಪರಿಚಯವಿದ್ದು, ಸುದೀಪ್ ಅವರ ಪೈಲ್ವಾನ್ ಅವತಾರದ ವಿರಾಟ್ ರೂಪವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.

ಅದ್ದೂರಿ ಮೇಕಿಂಗ್ ಮತ್ತು ಸಿನಿಮಾದ ಕಥೆಯ ಥೀಮ್ ಇಟ್ಟುಕೊಂಡು ಟ್ರೇಲರ್ ತಯಾರು ಮಾಡಿದ್ದಾರೆ ನಿರ್ದೇಶಕ ಕೃಷ್ಣ. ಈ ಸಿನಿಮಾಗಾಗಿ ಕಿಚ್ಚ ತಯಾರಾದ ಬಗೆಯ ಬಗ್ಗೆ ಅಭಿಮಾನಿಗಳು ಕೊಂಡಾಡಿದ್ದಾರೆ. ಸೆಪ್ಟೆಂಬರ್ ತಿಂಗಳ 12ನೇ ತಾರೀಖು ತೆರೆಗೆ ಬರುತ್ತಿರುವ ಈ ಸಿನಿಮಾದಲ್ಲಿ ಪೈಲ್ವಾನ್ ಪಾತ್ರ ಮಾಡಿದ್ದಾರೆ ಕಿಚ್ಚ ಸುದೀಪ್ ರವರು, ಹೆಬ್ಬುಲಿ ಸಿನಿಮಾದ ನಂತರ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್‌ನ ಸಿನಿಮಾ ಇದಾಗಿದ್ದರಿಂದ, ಈಗಾಗಲೇ ಚಿತ್ರದ ಬಗ್ಗೆ ಕುತೂಹಲ ಮೂಡಿದೆ.

ಕನ್ನಡ, ತಮಿಳು, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸೇರಿ ಹಲವು ಕಲಾವಿದರು ಇದ್ದಾರೆ. ಹಾಗಾಗಿ ದೇಶಾದ್ಯಂತ ಈ ಚಿತ್ರವನ್ನು ಏಕಕಾಲಕ್ಕೆ ತೆರೆಗೆ ತರುವ ಪ್ಲಾನ್ ಮಾಡಿಕೊಂಡಿದ್ದಾರೆ ಚಿತ್ರತಂಡದವರು.

LEAVE A REPLY

Please enter your comment!
Please enter your name here