ಕಾಲೇಜು-ಹಾಸ್ಟೆಲ್ ಆರಂಭಕ್ಕೂ ಮೊದಲು ವಿದ್ಯಾರ್ಥಿ-ಸಿಬ್ಬಂದಿಗೆ ಬಿಬಿಎಂಪಿಯಿಂದ ಉಚಿತ ಕೋವಿಡ್ ಟೆಸ್ಟ್

0
68
colleges

ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದ ಕಾಲೇಜು-ಹಾಸ್ಟೆಲ್ ಗಳನ್ನು ನಾಳೆಯಿಂದ ಪುನರಾರಂಭಿಸಲು ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಕೋವಿಡ್ ಮಾರ್ಗಸೂಚಿ ಪಾಲನೆಗೂ ಕಟ್ಟುನಿಟ್ಟು ಆದೇಶ ಹೊರಡಿಸಲಾಗಿದ್ದು, ಕಾಲೇಜು ತರಗತಿಗಳಿಗೆ ಎಂಟ್ರಿ ಪಡೆಯಬೇಕಂದ್ರೆ 72 ಗಂಟೆಗೆ ಮೊದಲು ಮಾಡಿಸಿದ ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸುವುದು ಕಡ್ಡಾಯ ಮಾಡಿದೆ. ಈ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕೋವೊಡ್ ಪರೀಕ್ಷೆ ನಡೆಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಆರಂಭದಲ್ಲಿ ಕಾಲೇಜಿಗೆ ಶೇಕಡಾ 30 ರಷ್ಟು ಮಾತ್ರ ವಿದ್ಯಾರ್ಥಿಗಳು ಬರುವ ನಿರೀಕ್ಷೆ ಇದ್ದು, ಎಲ್ಲಾ ವಿದ್ಯಾರ್ಥಿಗಳಿಗೂ 24 ಗಂಟೆಯೊಳಗೆ ಆರ್ ಟಿಪಿಸಿಆರ್ ಕೋವಿಡ್ ಟೆಸ್ಟ್ ರಿಪೋರ್ಟ್ ಕೊಡುವುದಾಗಿ ಆಯುಕ್ತ ಮಂಜುನಾಥ್ ಪ್ರಸಾದ್ ಭರವಸೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 432 ಕಾಲೇಜುಗಳಿದ್ದು, 60 ಸಾವಿರ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳಿದ್ದಾರೆ. ನಗರದ ಈ ಎಲ್ಲಾ ಶಿಕ್ಷಣ ಸಂಸ್ಥೆಗಳ ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆ ಮ್ಯಾಪ್ ಲಿಂಕ್ ಮಾಡಲಾಗಿದೆ. ಸೂಚಿಸಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಬೆಳಗ್ಗೆ 9 ರಿಂದ 5 ಗಂಟೆಯವರೆಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಜೊತೆಗೆ 450 ಮೊಬೈಲ್ ಸ್ವಾಬ್ ಕಲೆಕ್ಷನ್ ತಂಡಗಳನ್ನೂ ಸಹ ಸಿದ್ಧಪಡಿಸಲಾಗಿದೆ. ಈ ತಂಡಗಳನ್ನು ಶಿಕ್ಷಣ ಸಂಸ್ಥೆ, ಕಾಲೇಜುಗಳ ಹತ್ತಿರ ನಿಯೋಜಿಸಲಾಗಿರುತ್ತದೆ. ಅಲ್ಲದೆ ಹೆಚ್ಚುವರಿ ತಂಡಗಳ ನಿಯೋಜನೆಗೂ ಕ್ರಮವಹಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇನ್ನು ಕಾಲೇಜುಗಳು ಸಧ್ಯ ಶೇ.೩೦ ರಷ್ಟು ಮಾತ್ರ ಹಾಜರಾತಿ ನಿರೀಕ್ಷಿಸಿದ್ದು, ಬಿಬಿಎಂಪಿಯ ಸಧ್ಯ ಇರುವ ಸೋಂಕು ಪರೀಕ್ಷಾ ತಂಡಗಳು ಒಂದೆರಡು ದಿನದಲ್ಲಿ ಇಷ್ಟೂ ವಿದ್ಯಾರ್ಥಿಗಳ ಸೋಂಕು ಪರೀಕ್ಷೆ ನಡೆಸಬಹುದು, ಅಗತ್ಯವಿದ್ದರೆ ನಂತರ ಹೆಚ್ಚು ವಿದ್ಯಾರ್ಥಿಗಳು ಬಂದ ಹಾಗೆ, ಹೆಚ್ಚುವರಿ ತಂಡಗಳ ನಿಯೋಜನೆಗೆ ಚಿಂತಿಸಲಾಗಿದೆ ಎಂದರು. ಸಂಗ್ರಹಿಸಿದ ಎಲ್ಲಾ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿ, ಇಪ್ಪತ್ನಾಲ್ಕು ಗಂಟೆಯೊಳಗೆ ರಿಪೋರ್ಟ್ ಕೊಡಲಾಗುವುದು. ಯಾವುದೇ ಕಾರಣಕ್ಕೂ ರಿಪೋರ್ಟ್ ಕೊಡುವುದು ತಡವಾಗದಂತೆ ಮೆಡಿಕಲ್ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.

ಇಪ್ಪತ್ನಾಲ್ಕು ಗಂಟೆಯೊಳಗೆ ಲ್ಯಾಬ್ ರಿಪೋರ್ಟ್ ಐಸಿಎಮ್ ಆರ್ ಪೋರ್ಟಲ್ ನಲ್ಲೂ ಅಪ್ಟೇಡ್ ಆಗಲಿದೆ. ಈ ರಿಪೋರ್ಟ್ ಗಳನ್ನು ವಿದ್ಯಾರ್ಥಿಗಳೂ, ಶಿಕ್ಷಕರೂ ನೋಡಬಹುದಾಗಿದ್ದು, https://www.covidwar.karnataka.gov.in/service1 ವೆಬ್ ಪೇಜ್ ನಲ್ಲಿ ರಿಪೋರ್ಟ್ ಸಿಗಲಿದೆ. ಇದನ್ನೇ ಪಿಡಿಎಫ್ ಫಾರ್ಮಾಟ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here