ಇಂದು ಹೊಸಬರ ನಾಲ್ಕು ಸಿನಿಮಾ ಬಿಡುಗಡೆ! ಯಾವುದು ಹಿಟ್? ಯಾವುದು ಗೆಟ್ಔಟ್?

0
124

ಇಂದು ಕನ್ನಡ ಸಿನಿರಸಿಕರಿಗೆ ಹಬ್ಬ ಅಂತಾನೆ ಹೇಳಬಹುದು.. ವಿಭಿನ್ನ ಕಥೆಗಳುಳ್ಳ ಹೊಸಬರ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿದೆ. ಪ್ರೇಕ್ಷಕ ಯಾವುದನ್ನು ಕೈ ಹಿಡಿಯುತ್ತಾನೆ, ಯಾವುದನ್ನು ಕೈಚೆಲ್ಲುತ್ತಾನೆ ಕಾದು ನೋಡಬೇಕಾಗಿದೆ !

ರಾಂಧವ:-
ಬಿಗ್ ಬಾಸ್ ಸ್ಪರ್ಧಿ ಭುವನ್ ಪೊನ್ನಣ್ಣ ಅವರು ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರ ‘ರಾಂಧವ’.

ಸುನೀಲ್ ಆಚಾರ್ಯರವರು ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಚಿತ್ರ ಈಗಾಗಲೇ ಟ್ರೈಲರ್ ಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ! ಆಶ್ಚರ್ಯಕರ ವಿಷಯವೇನೆಂದರೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ರಿಲೀಸ್ ಗೂ ಮುನ್ನವೇ ಟ್ವಿಟ್ಟರ್ ನಲ್ಲಿ ಚಿತ್ರದ ಮಾಸ್ ಸಾಂಗ್ ‘ಆಟಿಟ್ಯೂಡ್ ಗೆ ಐಕಾನ್ ಇವನು,ಸೈಲೆಂಟಾಗಿ ದೂರ ಇರಿ’ ಎನ್ನುವ ಹಾಡು ಟ್ರೆಂಡ್ ಆಗಿತ್ತು..ಸನತ್ ಕುಮಾರ್ ಎನ್ನುವವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಭುವನ್ ಗೆ ನಾಯಕಿಯಾಗಿ ಅಪೂರ್ವ ಶ್ರೀನಿವಾಸ್ ನಟಿಸಿದ್ದಾರೆ.. ಇನ್ನು ಭುವನ್ ಚಿತ್ರದಲ್ಲಿ ಮೂರು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ ..

ನನ್ನ ಪ್ರಕಾರ:-
ವಿನಯ್ ಬಾಲಾಜಿ ಅವರು ನಿರ್ದೇಶನ ಮಾಡಿರುವ ‘ನನ್ನ ಪ್ರಕಾರ’ ಚಿತ್ರಕ್ಕೆ ಕಿರಣ್ ಕೆ ತಾಲಿಸ್ಲ ಬಂಡವಾಳ ಹೂಡಿದ್ದಾರೆ.
ಮರ್ಡರ್ ಮಿಸ್ಟ್ರಿ ಕಥೆಯುಳ್ಳ ಚಿತ್ರ ಇದಾಗಿದ್ದು, ಪ್ರಿಯಾಮಣಿ, ಕಿಶೋರ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಮಯೂರಿ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.. ಈಗಾಗಲೇ ಟ್ರೈಲರ್ ಸಾಕಷ್ಟು ಸದ್ದು ಮಾಡಿದ್ದು ಚಿತ್ರ ಇಂದು ಬಿಡುಗಡೆಯಾಗಿದೆ .. ಇನ್ನು ಚಿತ್ರದಲ್ಲಿ ಪ್ರಿಯಾಮಣಿ ವೈದ್ಯೆ ಪಾತ್ರವನ್ನು ಅಭಿನಯಿಸಿದ್ರೆ, ಕಿಶೋರ್ ಅವರು ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ

ಫ್ಯಾನ್:-
ಬೆಳ್ಳಿ ಪರದೆ ಮೇಲೆ ಸದ್ದು ಮಾಡಲು ಯುವ ಪಡೆಗಳ ಬಳಗವೊಂದು ಫ್ಯಾನ್ ಚಿತ್ರದ ಮೂಲಕ ಪ್ರವೇಶ ಮಾಡಿದೆ. ಇನ್ನು ಚಿತ್ರದ ಮುಖ್ಯಭೂಮಿಕೆಯಲ್ಲಿ ಆರ್ಯನ್ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ .. ಸೀರಿಯಲ್ ನಟ ಮತ್ತು ಅಭಿಮಾನಿಗಳ ಸುತ್ತ ಹೆಣೆದಿರುವ ಕಥೆ ಇದಾಗಿದ್ದು ದರ್ಶಿತ್ ರವರು ಆಕ್ಷನ್ ಕಟ್ ಹೇಳಿದ್ದಾರೆ

ಉಡುಂಬಾ:-
ಉಡುಂಬಾ ಇದೊಂದು ರೊಮ್ಯಾಂಟಿಕ್ ಸಸ್ಪೆನ್ಸ್ ಮತ್ತು ತ್ರಿಕೋನ ಪ್ರೇಮಕಥೆಯಾಗಿದ್ದು ಶಿವರಾಜ್ ಅವರು ನಿರ್ದೇಶಿಸಿದ್ದಾರೆ . ಮತ್ತು ಈ ಚಿತ್ರವನ್ನು ಶ್ರೀ ಚಂದ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹನುಮಂತ ರಾವ್ ಮತ್ತು ವೆಂಕಟ್ ರೆಡ್ಡಿ ಜಂಟಿಯಾಗಿ ನಿರ್ಮಿಸಿದ್ದಾರೆ.
ಇನ್ನು ಚಿತ್ರದಲ್ಲಿ ಪವನ್ ಶೌರ್ಯ ಗೋಲಿಹಟ್ಟಿ , ಚಿರಶ್ರೀ ಅಂಚನ್ , ಶರತ್ ಲೋಹಿತಾಶ್ವಾ , ಸಂಜನಾ ಅಭಿನಯಿಸಿದ್ದಾರೆ

LEAVE A REPLY

Please enter your comment!
Please enter your name here