ರಾಜ್ಯದಲ್ಲಿ ಸುರಿದ ಮಹಾಮಳೆಗೆ ತತ್ತರಿಸಿ ಹೋಗಿರುವ ಬೆಳಗಾವಿ ಜಿಲ್ಲೆಗೆ ಮಾಮಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ಭೇಟಿ ನೀಡಿದ್ದಾರೆ. ಉತ್ತರ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ, ಗದಗ, ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದರು. ಅಲ್ಲದೇ, ಪ್ರವಾಹದಿಂದ ತತ್ತರಿಸಿದ ಜನರ ನೋವನ್ನು ಆಲಿಸುವ ಕೆಲಸ ಮಾಡಿದ್ದಾರೆ.

ಇದಾದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೆಟಿ ನೀಡಲು ಸಾಧ್ಯವಾಗಲಿಲ್ಲ. ಈಗಾಗಲೇ 10,000 ಬೆಡ್ಶೀಟ್ಗಳನ್ನು ಮಧುರೈನಿಂದ ತರಿಸಲಾಗುತ್ತಿದ್ದು, ಪ್ರವಾಹ ಸಂತ್ರಸ್ತರಿಗೆ ವಿತರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಪ್ರವಾಹಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೂಡ ಕಾರ್ಯೋನ್ಮುಖವಾಗಿದ್ದು, ಇಲ್ಲಿ ರಾಜಕೀಯ ಬೆರೆಸುವುದಿಲ್ಲ. ಕಳೆದ ಮೂರು ದಿನಗಳಿಂದ ವೈರಲ್ ಜ್ವರದಿಂದ ಬಳಲುತ್ತಿದ್ದೇನೆ. ಸಂಪೂರ್ಣವಾಗಿ ಗುಣಮುಖವಾಗದಿದ್ದರೂ ಕೂಡ ಓಡಾಡುವ ಸ್ವಲ್ಪ ಚೇತರಿಕೆ ಕಂಡಿದೆ.

ಇನ್ನೂ 2-3 ದಿನಗಳ ಕಾಲ ವೈದ್ಯರು ಪ್ರಯಾಣ ಮಾಡಬಾರದು ಎಂದು ಹೇಳಿದ್ದರೂ ಕೂಡ, ಮಾಧ್ಯಮಗಳಲ್ಲಿ ಪ್ರವಾಹ ಪೀಡಿತ ಜನರ ನೋವಿಗೆ ಸ್ಪಂದಿಸುವುದಕ್ಕಾಗಿ ಇಂದು ಭೇಟಿ ನೀಡುತ್ತಿದ್ದೇನೆ.
ಈಗಾಗಲೇ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಕೆಲ ಪ್ರದೇಶಗಳಿಗೆ ಈಗಾಗಲೇ ಬೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಿಗೆ ಭೇಟಿ ನೀಡಿ ಜನರ ನೋವಿಗೆ ಸ್ಪಂದಿಸುತ್ತೇನೆ. ಅಲ್ಲದೇ, ಹುಬ್ಬಳ್ಳಿ-ಧಾರವಾಡದ ನರಗುಂದ ಮತ್ತು ನವಲಗುಂದ ಸೇರಿದಂತೆ ಮೈಸೂರು ಭಾಗದ ಕೊಡಗು ಮತ್ತು ಸುತ್ತಲಿನ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಸಾ.ರಾ. ಮಹೇಶ್, ಬಂಡೆಪ್ಪ ಕಾಶಂಪುರ ಅವರು ಭೇಟಿ ನೀಡಲಿದ್ದೇವೆ.
ಮಧುರೈನಿಂದ ಈಗಾಗಲೇ ನಮ್ಮ ಪಕ್ಷದ ವತಿಯಿಂದ ಒಂದು ಲೋಡ್ ರಗ್ಗು, ಬೆಡ್ಶೀಟ್ಗಳನ್ನು ತರಿಸುತ್ತಿದ್ದೇವೆ. ಅಗತ್ಯವಿರುವ ಪ್ರದೇಶದ ಪ್ರವಾಹ ಸಂತ್ರಸ್ತರಿಗೆ ವಿತರಣೆ ಮಾಡುವ ಕೆಲಸ ಮಾಡಲಿದ್ದೇವೆ ಎಂದರು.