ಭಾರತ ಬಿಟ್ಟು ಬೇರೆ ದೇಶಗಳಲ್ಲಿ ಅತ್ಯಾಚಾರಗೈದ ಆರೋಪಗಳಿಗೆ ವಿಧಿಸುವ ಶಿಕ್ಷೆಯೇನು ಗೊತ್ತೇ ?

0
240

ನಮ್ಮ ದೇಶದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣ ಹೆಚ್ಚುತ್ತಲೇ ಇದೆ. ಅದರಂತೆ ಕಾನೂನು ಜಾರಿಯಾಗುತ್ತಿಲ್ಲ. ಈ ಒಂದರ್ಥದಲ್ಲಿ ಈ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ಭಾರತವು ಕುಖ್ಯಾತಿಯನ್ನು ಪಡೆದಿದೆ ಎಂಬುದು ದೌರ್ಬಗ್ಯದ ವಿಚಾರ. ಬೇರೆಲ್ಲಾ ದೇಶಗಳಿಗಿಂತ ನಮ್ಮ ದೇಶದಲ್ಲಿ ಹೆಚ್ಚು ಪ್ರಕರಣ ದಾಖಲಾದರೂ ಕಾನೂನಿನಲ್ಲಿ ಯಾವುದೇ ಗಟ್ಟಿತನವಿಲ್ಲ. ನಮ್ಮ ಭಾರತದಲ್ಲಿ ಅತ್ಯಾಚಾರ ಪ್ರಕರಣ ಸಾಬೀತಾದರೆ ಜೀವಾವಧಿ ಶಿಕ್ಷೆ ಏಪ್ರಿಲ್ 2013 ರ ಅತ್ಯಾಚಾರ ವಿರೋಧಿ ಮಸೂದೆಯ ನಂತರ ಅಪರಾಧಿಗಳಿಗೆ ಸಂಪೂರ್ಣ ಜೀವಾವಧಿ ಶಿಕ್ಷೆ ಮತ್ತು ಅಪರೂಪದ ಅಪರೂಪದ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಯನ್ನು ನೀಡಲು ತೀರ್ಮಾನಿಸಲಾಗಿದೆ.

 

ಇದೇ ತೆರನಾಗಿ ಫ್ರಾನ್ಸ್ ದೇಶದಲ್ಲಿ 15 ವರ್ಷ ಶಿಕ್ಷೆ. ಇನ್ನು ಪ್ರಕರಣದ ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಂಡು ಜೀವಿತಾವಧಿಗೆ ಶಿಕ್ಷೆಯನ್ನು ವಿಸ್ತರಿಸಬಹುದಾಗಿದೆ. ಆದರೆ ಚೀನಾದಲ್ಲಿ ಆರೋಪ ಸಾಬೀತಾದರೆ ಮರಣದಂಡನೆಗೆ ಗುರಿ ಮಾಡಬಹುದು. ಇನ್ನು ಸೌದಿ ಅರೇಬಿಯಾದಲ್ಲಿ ವ್ಯಕ್ತಿಯ ಶಿರಚ್ಚೇದ ಮಾಡಲಾಗುತ್ತದೆ. ಉತ್ತರ ಕೊರಿಯಾದಲ್ಲಿ ಗುಂಡಿಟ್ಟು ಹತ್ಯೆ ಮಾಡುತ್ತಾರೆ. ಅದಕ್ಕಾಗಿ ಫೈರಿಂಗ್ ಸ್ಕ್ವಾಡ್ನಿಂದ ಈ ಕೆಲಸ ಮಾಡಲಾಗುತ್ತದೆ.

 

ಜೊತೆಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತದೆ. ಇದೇ ತೆರನಾಗಿ ಅಫ್ಘಾನಿಸ್ತಾನದಲ್ಲಿ ವ್ಯಕ್ತಿಯ ತಲೆಗೆ ಗುಂಡು ಅಥಾವ ಗಲ್ಲುಶಿಕ್ಷೆಯನ್ನು ವಿಧಿಸುತ್ತಾರೆ. ಇತ್ತ ಈಜಿಪ್ಟ್ ನಲ್ಲಿ ನೇಣು ಹಾಕಲಾಗುತ್ತದೆ. ಇರಾನ್ನಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗುತ್ತದೆ, ಜೊತೆಗೆ ಕೆಲವೊಮ್ಮೆ ನೇಣು ಅಥಾವ ಕೆಲವೊಮ್ಮೆ ಕಲ್ಲು ಹೊಡೆಯುವ ಸಾಯಿಸಲಾಗುತ್ತದೆ ಕೂಡ. ಇನ್ನು ಇಸ್ರೇಲ್ ನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯಾರಾದರೂ ಶಿಕ್ಷೆಗೊಳಗಾಗಿದ್ದರೆ, ಆತನಿಗೆ 16 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಯುಎಸ್ಎನಲ್ಲಿ ಜೀವಾವಧಿ ಶಿಕ್ಷೆಯನ್ನು ಅಲ್ಲಿನ ಕಾನೂನು ತಜ್ಞರು ವಿಧಿಸುತ್ತಾರೆ.

LEAVE A REPLY

Please enter your comment!
Please enter your name here