ಇನ್ಮುಂದೆ ಪೈರಸಿ ಮಾಡಿದ್ರೆ ಏನು ಶಿಕ್ಷೆ ಗೊತ್ತಾ ?

0
156

ಪೈರಸಿ ಎಂಬ ಭೂತ ಚಂದನವನದಲ್ಲಿ ಎಲ್ಲರನ್ನೂ ಕಾಡುತ್ತಿರುವ ಪಖಾಯಿಲೆಯಂತಾಗಿದೆ. ಇದು ಚಿತ್ರತಂಡವನ್ನು ಈಗಲೂ ಅಲ್ಲೋಲ ಕಲ್ಲೋಲವಾಗಿಸುತ್ತಿದೆ. ಇದದಿಂದ ಅನೇರಿಂದ ಚಿತ್ರರಂಗದವರು ಅನುಭವಿಸುತ್ತಿರುವ ಸಂಕಷ್ಟ ಒಂದೆರಡಲ್ಲ. ಈಗಾಗಲೇ ಅನೇಕ ಬಾರಿ ಚಿತ್ರ ತಂಡದವರು ವಿಧ-ವಿಧವಾಗಿ ವಿನಂತಿಸಿಕೊಂಡರು ಸಹ ಪೈರಸಿ ಮಾಡಿ, ಆ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ.


ಕೆಲವು ವೆಬ್‌ ಸೈಟ್‌ ಹಾಗೂ ಗ್ರೂಪ್‌ ಗಳಂತೂ ಇದನ್ನೇ ಕಾಯಕವನ್ನಾಗಿಸಿಕೊಂಡು ಬಿಟ್ಟಿದೆ.  ಅವರಿಗೆ ಲಾಭವೇನಿದೆಯೋ ದೇವರೇ ಬಲ್ಲ. ಆದರೆ ಹೊಸ ಚಿತ್ರ ತೆಗೆಯಲು ನಿರ್ಮಾಪಕರು ಅದೆಷ್ಟು ಕಷ್ಟಪಡುತ್ತಾರೋ ಅಷ್ಟೇ ಸುಲಭವಾಗಿ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅದನ್ನ ಪೈರಸಿಯಾಗಿಸಿಬಿಡುತ್ತಾರೆ. ಆದರೆ, ಇನ್ನು ಮುಂದೆ ಪೈರಸಿ ಮಾಡುವವರ ವಿರುದ್ಧ ಚಿತ್ರತಂಡ ತೊಡೆತಟ್ಟಿದೆ. ಹೀಗೇನಾದರೂ ಮಾಡಿದರೇ ಇನ್ಮುಂದೆ ಶಿಕ್ಷೆ ಖಚಿತವೇ ಸರಿ.

 


ಹೌದು, ಇನ್ಮುಂದೆ ಪೈರಸಿ ಮಾಡಿದವರಿಗೆ ರೂ.10 ಲಕ್ಷ ಶಿಕ್ಷೆ ಮತ್ತು ಜೈಲು ಶಿಕ್ಷೆ ಖಾಯಂ. ಹೊಸ ಚಿತ್ರಗಳು ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಈ ಸಿನಿಮಾ ಮೊಬೈಲುಗಳಲ್ಲಿ ಇಡೀ ಹೆಚ್ಡಿ ರೂಪದಲ್ಲಿ ಬಂದಿರುತ್ತದೆ. ಅಷ್ಟು ಪ್ರಬಲವಾಗಿದೆ ಈಗಿನ ಸಿನಿಮಾ ಪೈರಸಿ ಜಾಲ. ಪೈರಸಿ ಲೋಕದ ಕಿಂಗ್‌ ಎಂದೇ ಹೆಸರಾದ ತಮಿಳ್ ರಾಕರ್ಸ್ ಈ ಪೈರಸಿ ಲೋಕದಲ್ಲಿ ಅತೀ ದೊಡ್ಡ ಹೆಸರು ಮಾಡಿದೆ. ಈಗ ಈ ಪೈರಸಿ ಕ್ರಿಮಿನಲ್ಲುಗಳನ್ನು ಮಟ್ಟ ಹಾಕಲು ಹೊಸ ಕಾಯ್ದೆತರಲು ಹೊರಟಿದೆ ಕೇಂದ್ರ ಸರ್ಕಾರ.

 

ಇದೇ ಕಾರಣಕ್ಕಾಗಿ ಸಿನಿಮಾಟೋಗ್ರಫಿ ಕಾಯ್ದೆ 1952ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರವು ಈ ವಿಷಯಕ್ಕೆ ಆಗಲೇ ಕ್ಯಾಬಿನೆಟ್ ಅನುಮೋದನೆಯನ್ನೂ ಪಡೆದುಕೊಂಡಿದೆ. ಈ ಕಾಯ್ದೆ ಜಾರಿಗೆ ಬಂದರೆ, ಪೈರಸಿ ಸಿನಿಮಾ ನೋಡುವವರು, ಪೈರಸಿ ಮಾಡುವವರು ಇಬ್ಬರೂ ಅಪರಾಧಿಗಳಾಗಿದ್ದು, ಅಂಥವರಿಗೆ 10 ಲಕ್ಷ ರೂ. ದಂಡ, 3 ವರ್ಷ ಜೈಲು ಫಿಕ್ಸ್ ಮಾಡಲಾಗುತ್ತದೆ. ಈ ಕಾಯ್ದೆ ಜಾರಿಗೆ ಬಂದರೇ ಇನ್ನು ಮುಂದೆ ತಪ್ಪಿತಸ್ಥರಿಗೆ ಜೈಲೂಟ ಖಾಯಂ ಎಂಬುದು ಮಾತ್ರ ನಿಜ. ಇನ್ನಾದರೂ ಕಾಯ್ದೆ ಜಾರಿಗೆ ತರುವತ್ತ ನಮ್ಮ ಸರ್ಕಾರ ಗಮನಹರಿಸಬೇಕಿದೆ.

LEAVE A REPLY

Please enter your comment!
Please enter your name here