ಮುಖದ ಕಾಂತಿ ಹೆಚ್ಚಿಸಲು ಈ ಪದಾರ್ಥಗಳನ್ನು ಸೇವಿಸಿ..!

0
188

ಸಾಮಾನ್ಯವಾಗಿ ಅದರಲ್ಲೂ ಹೆಚ್ಚಾಗಿ ಹೀಗಿನ ಯುವಕ ಮತ್ತು ಯುವತಿಯರಿಗೆ ಮುಖದ ಅಂದದ ಬಗ್ಗೆ ಬಹಳ ಯೋಚನೆ ಕಾಡುತ್ತಿರುತ್ತದೆ. ಮುಖದ ಸೌಂದರ್ಯವನ್ನು ಹೆಚ್ಚಿಸಲು ಅನೇಕ ಕ್ರೀಮ್, ಪೌಡರ್ ಬಳಸುವ ಮೂಲಕ ಮುಖದ ಕಾಂತಿಯನ್ನು ಹಾಳು ಮಾಡಿಕೊಳ್ಳುವರ ಸಂಖ್ಯೆಯೇ ಜಾಸ್ತಿ. ತ್ವಚೆಯ ಕಾಂತಿಗೆ ಕಂಪನಿ ನೀಡುವ ಪ್ರಾಡಕ್ಟ್ಗಳನ್ನು ಆಧರಿಸುವ ಬದಲು ನಿಮ್ಮ ಆಹಾರದ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ತ್ವಚೆಯನ್ನು ಪೋಷಿಸಬಹುದು. ಪ್ರತಿ ನಿತ್ಯದ ಆಹಾರದ ಪಟ್ಟಿಯ ಮಧ್ಯೆ ಈ ಪದಾರ್ಥಗಳನ್ನು ಸೇರಿಸಿಕೊಳ್ಳುವುದರಿಂದ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ, ಯಾವ ಲಾಭ ದೊರೆಯಲಿದೆ ಎಂಬುದನ್ನು ಕೆಳಗೆ ಉಲ್ಲೇಖಿಸಿದೆ ಅನುಸರಿಸಿ,

೧.ಪ್ರತಿ ದಿನ ಒಂದು ಅಥವಾ ಎರಡು ವಾಲ್ನಟ್ ಸೇವನೆ ಮಾಡುವುದರಿಂದ ಚರ್ಮಕ್ಕೆ ಸಾಕಷ್ಟು ಪೋಷಣೆ ಲಭಿಸುತ್ತದೆ. ವಾಲ್ನಟ್ನಲ್ಲಿ ಕಬ್ಬಿಣಾಂಶ ಹೆಚ್ಚಿದೆ, ಜೊತೆಗೆ ಒಮೆಗಾ ೩ ಮತ್ತು ಒಮೆಗಾ ೪ ಚರ್ಮದ ಕಾಂತಿಗೆ ಅಗತ್ಯವಾದ ಪೋಷಕಾಂಶ ನೀಡುತ್ತದೆ.

೨.ಬಾದಾಮಿಯಲ್ಲಿ ವಿಟಮಿನ್ ‘ಇ’ ಅಂಶ ಹೆಚ್ಚಿದೆ ಹಾಗಾಗಿ ಚರ್ಮಕ್ಕೆ ಪೋಷಣೆ ನೀಡುವಲ್ಲಿ ಬಾದಾಮಿ ಉತ್ತಮವಾಗಿದೆ.

೩. ಸೋಯಾ : ಸೋಯಾಬಿನ್ ಮಕ್ಕಳ ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ವಯಸ್ಸಾಗುತ್ತಿದ್ದಂತೆ ಕಾಡುವ ಸುಕ್ಕು ಚರ್ಮವನ್ನು ನಿಯಂತ್ರಿಸುವಲ್ಲಿ ಸೋಯಾಬಿನ್ ಬಲು ಲಾಭದಾಯಕ.

೪. ಅವಕಾಡೊ :ಅವಕಾಡೊ ಹಣ್ಣಿನಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ. ಹಾಗಾಗಿ ಈ ಹಣ್ಣನ್ನು ಸೇವಿಸುವುದರಿಂದ ಚರ್ಮಕ್ಕೆ ಪೋಷಕಾಂಶಗಳನ್ನು ಉತ್ತಮ ಪ್ರಮಾಣದಲ್ಲಿ ನೀಡುತ್ತದೆ.

೫.ಆಲಿವ್ ಆಯಿಲ್ : ನಿಮ್ಮ ನಿತ್ಯದ ಅಡುಗೆಯಲ್ಲಿ ಬೇರೆ ಎಣ್ಣೆಯನ್ನು ಉಪಯೋಗಿಸುವ ಬದಲು ಆಲಿವ್ ಆಯಿಲ್ ಬಳಸಿ ಮಾಡುವ ಆಹಾರವನ್ನು ಸೇವಿಸುವುದು ಉತ್ತಮ. ಒಣಚರ್ಮ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಚರ್ಮವನ್ನು ಮೃದುವಾಗಿರಿಸಲು ಆಲಿವ್ ಆಯಿಲ್ ಸಹಕಾರಿಯಾಗುತ್ತದೆ.

LEAVE A REPLY

Please enter your comment!
Please enter your name here