ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು ಎಂಬುದು ಅನೇಕ ಕನಸು. ಹಾಸಿಗೆಗೆ ತಲೆ ಇಡುತ್ತಿದ್ದಂತೆ ನಿದ್ರೆ ಬಂದರೆ ಎಷ್ಟು ಚೆನ್ನಾಗಿರುತ್ತೆ ಎಂದು ಅಂದುಕೊಳ್ಳುತ್ತಾರೆ. ಆದರೆ ಕೆಲವರಿಗೆ ನಿದ್ದೇನೆ ಬರಲ್ಲ. ಈ ಸಮಸ್ಯೆಯಿಂದ ಮಾನಸಿಕವಾಗಿ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ಸುಖ ನಿದ್ದೆಗೆ ಈ ಸೂತ್ರಗಳನ್ನು ಪಾಲಿಸಿ.
• ರಾತ್ರಿ ಹೊತ್ತು ಬಿಸಿ ಹಾಲಿಗೆ ಸ್ವಲ್ಪ ಜೇನು ಬೆರೆಸಿ ಸೇವಿಸಿ, ಇದರಿಂದ ಬೇಗನೆ ನಿದ್ರೆ ಬರುತ್ತದೆ.
• ನಿದ್ರಿಸುವ ಸಂದರ್ಭದಲ್ಲಿ ಕಾಲು ಮತ್ತು ಕೈಗಳು ಹೊದಿಕೆಯ ಒಳಗಿರುವಂತೆ ನೋಡಿಕೊಳ್ಳಬೇಕು.
• ಲ್ಯಾವೆಂಡರ್ ಸುವಾಸನೆಯು ನಿದ್ರೆ ಸಮಸ್ಯೆಗೆ ಅತ್ಯುತ್ತಮ ಔಷಧ ಎಂದು ಹಲವಾರು ಅಧ್ಯಯನಗಳು ಶಿಫಾರಸು ಮಾಡಿವೆ.
• ಚೆನ್ನಾಗಿ ನಿದ್ರೆ ಮಾಡಬೇಕು ಎಂದಿದ್ದರೆ ಚೆರ್ರಿ ಹಣ್ಣುಗಳನ್ನು ಸೇವಿಸಿ. ಇದರಲ್ಲಿ ನಿದ್ರೆ ಸಮಸ್ಯೆಗೆ ಪರಿಹಾರ ನೀಡುವ ಮೆಲಾಟೊನಿನ್ ಎಂಬ ಹಾರ್ಮೋನ್ ಇರುತ್ತದೆ.
• ಟ್ಯಾಬ್ ಮತ್ತು ಸ್ಮಾರ್ಟ್ಫೋನ್ನ ಕೃತಕ ಬೆಳಕು ರಾತ್ರಿ ವೇಳೆ ನಿದ್ರೆಗೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ನಿದ್ರೆ ಮಾಡುವ ಮುನ್ನ ಅವುಗಳನ್ನು ಸ್ವಿಚ್ ಆಫ್ ಮಾಡಬೇಕು.
• ಮಲಗುವ ಮುನ್ನ ಪುಸ್ತಕ, ನಿಯತಕಾಲಿಕ ಕಾದಂಬರಿಗಳನ್ನು ಓದಿದರೆ ಕೂಡ ನಿದ್ರೆ ಬರುತ್ತದೆ.