ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆಯಿಂದ ಉತ್ತರ ಕರ್ನಾಟಕ ಪ್ರವಾಹಕ್ಕೆ ತುತ್ತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈಗಾಗಲ್ಲೇ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಪ್ರವಾಹ ಸಂತ್ರಸ್ಥರಿಗೆ ಹಣವನ್ನು ಬಿಡುಗಡೆ ಮಾಡಿತ್ತು. ಇದರ ಜೊತೆಗೆ ರಾಜ್ಯದ ಜನರು ಕೂಡ ತಮ್ಮ ದುಡಿಮೆಯ ಹಣವನ್ನು ಪ್ರವಾಹ ಸಂತ್ರಸ್ಥರಿಗೆ ದೆಣಿಗೆಯ ರೂಪದಲ್ಲಿ ನೀಡುವ ಮೂಲಕ ಸಹಾಯ ಹಸ್ತ ನೀಡಿದ್ದಾರೆ.

ಕಳೆದ ಎರಡು ದಿನದಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಕಡಿಮೆಯಾಗಿ ಎಲ್ಲರಲ್ಲೂ ಸ್ವಲ್ಪ ಮಟ್ಟದ ನೆಮ್ಮದಿ ತಂದಿತ್ತು. ಅದರೆ ಈಗ ರಾಜ್ಯದಲ್ಲಿ ಮತ್ತೆ ಜಲಪ್ರಳಯ ಉಂಟಾಗಲಿದೆ ಎಂಬ ಸೂಚನೆಯನ್ನು ಹವಮಾನ ಇಲಾಖೆ ವರದಿಯನ್ನು ನೀಡಿದೆ. ಮತ್ತೆ ಭಯಂಕರ ಮಳೆಯ ಆರ್ಭಟವಾಗಲಿದ್ದು, ಈ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಮಲೆನಾಡು, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕರ್ನಾಟಕಕ್ಕೆ ರೆಡ್ ಆಲರ್ಟ್ ಘೋಷಣೆ ಮಾಡಿದ ಹವಮಾನ ಇಲಾಖೆ. ನಾಳೆಯಿಂದ ಮಳೆಯ ಆರ್ಭಟ ಜೋರಾಗಿರಲಿದ್ದು, ಆಯಾ ಜಿಲ್ಲೆಯ ಜನರು ಕೆಲ ಮುನ್ನಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಈಗಾಗಲ್ಲೇ ಸೂಚನೆ ರವಾನಿಸಿದೆ. ಧಾರವಾಡ ಮತ್ತು ಹಾವೇರಿಯಲ್ಲೂ ಸಾಕಷ್ಟು ಮಳೆಯಾಗಲಿದ್ದು, ಈ ಎರಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
