ಬೆಳಗಾವಿ ಜಿಲ್ಲೆಗೆ ಪ್ರವಾಹದ ಭೀತಿ.!

0
100

ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ, ಬೆಳಗಾವಿ ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಿದೆ ಎನ್ನಬಹುದು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಾಯಾನಗರಿ ತತ್ತರಿಸಿ ಹೋಗಿದೆ. ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ, ಕರ್ನಾಟಕದಲ್ಲೂ ಅಬ್ಬರಿಸುತ್ತಿದೆ. ಗಾಳಿ, ಮಳೆಯಿಂದ ಮಹಾರಾಷ್ಟ್ರ ರಾಜ್ಯ ಸಂಪೂರ್ಣ ನಲುಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ತುಂಬಿದ್ದು, ಕೃಷ್ಣಾ ನದಿಯ ೬ ಕ್ರಸ್ಟ್ ಗೇಟ್ಗಳನ್ನು ತೆರೆದು ೨ ಲಕ್ಷ ೯೦ ಸಾವಿರ ಕ್ಯೂಸೆಕ್’ಗಳಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಇತ್ತ ಬೆಳಗಾವಿಯ ಕೋಯ್ನಾ ಡ್ಯಾಂನಿಂದ ಕೂಡ ನೀರನ್ನು ಹೊರಬಿಡಲಾಗುತ್ತಿದ್ದು, ಕೊಯ್ನಾ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿದೆ. ಡ್ಯಾಂನಲ್ಲಿ ಹೆಚ್ಚು ನೀರು ಶೇಖರಣೆಯಾಗಿದ್ದು, ಡ್ಯಾಂನ ಎಲ್ಲ ಗೇಟ್ಗಳನ್ನು ತೆರೆಯಲಾಗಿದೆ. ಇದರಿಂದ ಬೆಳಗಾವಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ ಎನ್ನಬಹುದು.

ಕೃಷ್ಣಾ ನದಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಡ್ಯಾಂನಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್’ನಷ್ಟು ನೀರು ಹೆಚ್ಚಾದರೆ ಹೈಲೆವೆಲ್ ಪ್ರವಾಹ ಉಂಟಾಗಲಿದೆ. ಬೆಳಗಾವಿ ಜಿಲ್ಲೆಯ ನಂತರ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು,ರೈತರಿಗೆ ಒಂದೆಡೆ ಸಂತಸ ಜೊತೆಗೆ ಆತಂಕವೂ ಮನೆ ಮಾಡಿದೆ. ಮಳೆಯ ಅಬ್ಬರ ಇದೇ ರೀತಿ ಮುಂದುವರಿದರೆ ರಾಜ್ಯದ ಜನರಿಗೆ ಬಹಳ ತೊಂದರೆ ಉಂಟಾಗಲಿದೆ ಎನ್ನಬಹುದು.

LEAVE A REPLY

Please enter your comment!
Please enter your name here