ಮಂಡಕ್ಕಿ ತಿಂದು ಹಸಿವು ತೀರಿಸಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ ಪ್ರವಾಹ ಸಂತ್ರಸ್ತರಿಗೆ.!!

0
178

ಕರ್ನಾಟಕ ರಾಜ್ಯಕ್ಕೆ ಭಾರಿ ಮಳೆಯ ಆರ್ಭಟದಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ನಮಗೆಲ್ಲ ತಿಳಿದಿರುವ ವಿಷಯವೆ. ಈ ದುರ್ಘಟನೆ ನಮ್ಮಿಂದ ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗದೇ ಉಳಿದಿದೆ. ಬೆಳಗಾವಿ ವಿಜಯಪುರ ರಾಯಚೂರು ಬೀದರ್ ಕೊಪ್ಪಳ ಹಾವೇರಿ ಸೇರಿದಂತೆ ಅರ್ಧ ಕರ್ನಾಟಕವೇ ಮುಳುಗಿ ಹೋಗಿತ್ತು. ಉತ್ತರ ಕರ್ನಾಟಕದ ಭಾಗದ ಜನರು ಪ್ರವಾಹಕ್ಕೆ ತುತ್ತಾಗಿದ್ದು, ಪ್ರವಾಹದಲ್ಲಿ ಸಿಲುಕಿ ಹಲವು ಜನರು ತಮ್ಮ ಜೀವನವನ್ನು ಕಳೆದುಕೊಂಡಿರುವುದು ಬೇಸರದ ಸಂಗತಿ.

ರಾಜ್ಯದ ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದು ತಮ್ಮ ಮನೆ ಮಠ ಎಲ್ಲವನ್ನೂ ಕಳೆದುಕೊಂಡು ಸೂರಿಗಾಗಿ ಪರದಾಡುವಂತಹ ಪರಿಸ್ಥಿತಿ ನಮ್ಮ ಉತ್ತರ ಕರ್ನಾಟಕದ ಜನರಿಗೆ ಒದಗಿದೆ ರಾಜ್ಯದ ಹಲವು ಸಂಘಟನೆಗಳು ಸಂಸ್ಥೆಗಳು ತಮ್ಮ ಕೈಲಾದಷ್ಟು ಸಹಾಯ ಮಾಡುವ ಮೂಲಕ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನು ಪೂರೈಸಿದರು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ೧೦೭೯ ಕೋಟಿ ರೂಪಾಯಿಗಳು ಪರಿಹಾರ ಧನವಾಗಿ ನೀಡಿದೆ. ಯಾರು ಏನೇ ಸಹಾಯ ಮಾಡಿದರೂ ಕೂಡ ಜನರ ಸಂಕಷ್ಟ ಇಂದಿಗೂ ಕಡಿಮೆಯಾಗಿಲ್ಲ.

ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ಒಂದು ಅಗಳು ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ. ನಿರಾಶ್ರಿತ ಕೇಂದ್ರದಲ್ಲಿ ಊಟ ಬಂದ್ ಮಾಡಿದ ಹಿನ್ನೆಲೆಯಲ್ಲಿ ಪಕ್ಕದ ಗ್ರಾಮಸ್ಥರು ನಿರಾಶ್ರಿತರಿಗೆ ಆಹಾರವಾಗಿ ಮಂಡಕ್ಕಿಯನ್ನು ನೀಡಿದ್ದಾರೆ. ಮಂಡಕ್ಕಿಯನ್ನು ತಿಂದು ಬದುಕುವಂತಹ ಪರಿಸ್ಥಿತಿ ನಿರಾಶ್ರಿತರಿಗೆ ಒದಗಿದೆ. ಸಂತ್ರಸ್ತರು ಊಟಕ್ಕೆ ಪರದಾಡುವಂತ ಸನ್ನಿವೇಶ ಎದುರಾಗಿದ್ದು, ಸ್ಥಳಕ್ಕೆ ಯಾವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡದೇ ನೀಡದಿರುವುದು ಜನರಿಗೆ ತೀರಾ ಬೇಸರ ಉಂಟಾಗಿದೆ. ನಮ್ಮ ಕಷ್ಟ ಕೇಳಲು ಯಾರೂ ಇಲ್ಲವಲ್ಲ.? ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. ಊಟಕ್ಕೆ ಸಹಾಯ ಮಾಡದೇ ಇರುವ ಅಧಿಕಾರಿಗಳು, ಮುಂದೆ ಅವರಿಗೆ ಮನೆ, ಮಠವನ್ನು ಹೇಗೆ ನಿರ್ಮಿಸಿಕೊಡಲಿದ್ದಾರೆ ಎಂಬುದು ಯೋಚಿಸಬೇಕಾದ ಸಂಗತಿ ಎನ್ನಬಹುದು.

LEAVE A REPLY

Please enter your comment!
Please enter your name here